ರಿಲಯನ್ಸ್ ಜಿಯೊ 5ಜಿ: 27 ನಗರಗಳಿಗೆ ವಿಸ್ತರಣೆ

ರಿಲಯನ್ಸ್ ಜಿಯೊ 5ಜಿ: 27 ನಗರಗಳಿಗೆ ವಿಸ್ತರಣೆ

ನವದೆಹಲಿ: 5ಜಿ ನೆಟ್ವರ್ಕ್ ಸೇವೆಯನ್ನು 27 ನಗರಗಳಿಗೆ ವಿಸ್ತರಿಸಲಾಗುತ್ತದೆ. ಬುಧವಾರ(ಮಾ.9)ದಿಂದ ಈ ಸೇವೆ ಆರಂಭಗೊಳ್ಳಲಿದೆ ಎಂದು ಟೆಲಿಕಾಂ ಕ್ಷೇತ್ರದ ದಿಗ್ಗಜ ಸಂಸ್ಥೆ ರಿಲಯನ್ಸ್ ತಿಳಿಸಿದೆ. 

      ಆಂಧ್ರ ಪ್ರದೇಶ, ಛತ್ತಿಸಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳದ 27 ನಗರಗಳಿಗೆ 5ಜಿ ಸೇವೆ ಸಿಗಲಿದೆ. 

      ಈಗಾಗಲೇ ದೇಶದಾದ್ಯಂತ 331 ನಗರಗಳಲ್ಲಿ ಈ ಸೌಲಭ್ಯ ದೊರಕುತ್ತಿದೆ ಎಂದು ರಿಲಯನ್ಸ್ ವಿವರಿಸಿದೆ.

       2023ರ ಅಂತ್ಯದ ಹೊತ್ತಿಗೆ ದೇಶದ ಎಲ್ಲಾ ನಗರಗಳಿಗೆ ಜಿಯೊ 5ಜಿ ಸೇವೆ ವಿಸ್ತರಿಸಲಾಗುವುದು ಎಂದು ರಿಲಯನ್ಸ್ ಸಮೂಹದ ಮಾಲಿಕ ಮುಕೇಶ್ ಅಂಬಾನಿ ಈಗಾಗಲೇ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ