ರಾಮಲ್‌ಕಟ್ಟೆ ಪಿಕಪ್‌ ಅಪಘಾತ: ಇಬ್ಬರ ಮೃತ್ಯು

ರಾಮಲ್‌ಕಟ್ಟೆ ಪಿಕಪ್‌ ಅಪಘಾತ: ಇಬ್ಬರ ಮೃತ್ಯು

ಬಿ.ಸಿ.ರೋಡ್: ಕ್ಯಾಟರಿಂಗ್‌ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಭಾನುವಾರ ಸಾಯಂಕಾಲ ನಡೆದ ಅಪಘಾತದಲ್ಲಿ ಉಪ್ಪಿನಂಗಡಿಯ ಇಬ್ಬರು ಯುವಕರು ಮೃತಪಟ್ಟ ಘಟನೆ ತುಂಬೆ ಗ್ರಾಮದ ರಾಮಲ್‌ಕಟ್ಟೆ ಎಂಬಲ್ಲಿ ನಡೆದಿದೆ.

      ಮೃತರನ್ನು ಉಪ್ಪಿನಂಗಡಿ ನಿವಾಸಿಗಳಾದ ಚೇತನ್‌ (25) ಹಾಗೂ ಆಶಿತ್‌ (21) ಎಂದು ಗುರುತಿಸಲಾಗಿದೆ.

      ಕಾರ್ಯಕ್ರಮ ಮುಗಿಸಿ ಮಂಗಳುರು ಕಡೆಯಿಂದ ಬರುತ್ತಿದ್ದ ಕ್ಯಾಟರಿಂಗ್ ಸಂಸ್ಥೆಯ ಪಿಕಪ್.ತುಂಬೆ ಗ್ರಾಮದ ರಾಮಲ್‌ಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಪಿಕಪ್‌ ವಾಹನದ ಹಿಂಬದಿಯಲ್ಲಿದ್ದ ಕ್ಯಾಟರಿಂಗ್‌ ನೌಕರರು ತೀವೃವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ತುಂಬೆ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಚೇತನ್‌ ಹಾಗೂ ಆಶಿತ್‌ ಮೃತಪಟ್ಟಿದ್ದಾರೆ.

      ಸುದೀಪ್‌ ಹಾಗೂ ಸಿಂಚನ್‌ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೋಲೀಸರು ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

   

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ