ರಜಿನಿಕಾಂತ್ ರಾಜಕೀಯ ಎಂಟ್ರೀ ಖಚಿತ

ರಜಿನಿಕಾಂತ್ ರಾಜಕೀಯ ಎಂಟ್ರೀ ಖಚಿತ

ತಮಿಳುನಾಡು : ಅಂತೂ ಇಂತೂ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡೋ ದಿನ ಹತ್ತಿರ ಬಂದಿದೆ. ಇದೇ ಡಿಸೆಂಬರ್ 31ರಂದು ಈ ಕುರಿತಂತೆ ಮಾಹಿತಿ ನೀಡಲಿರುವ ತಲೈವಾ, ಜನವರಿಯಲ್ಲಿ ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಲಿದ್ದಾರೆ.

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೂಪರ್ ಸ್ಟಾರ್ ರಚನಿಕಾಂತ್, ತಾವು ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದೇನೆ. ಡಿಸೆಂಬರ್ 31ರಂದು ಘೋಷಣೆ ಮಾಡಲಿದ್ದು, ಜನವರಿ ತಿಂಗಳಿನಲ್ಲಿ ಪಕ್ಷವನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ಅಂದಹಾಗೇ ಇತ್ತೀಚಿಗಷ್ಟೇ ನಾನು ರಾಜಕೀಯಕ್ಕೆ ಬಂದ್ರೇ ನೀವು ರೆಡಿನಾ ಎಂಬುದಾಗಿ ತಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಸೂಪರ್ ಸ್ಟಾರ್ ರಜನಿಕಾಂತ್ ಕೇಳಿದ್ದರು. ಬಳಿಕ ಇದೀಗ ಡಿಸೆಂಬರ್ 31ಕ್ಕೆ ರಾಜಕೀಯಕ್ಕೆ ಬರುವ ಪ್ರಮುಖ ಘೋಷಣೆ ಮಾಡಲಿದ್ದು, ತಮ್ಮ ಪಕ್ಷ ಯಾವುದು ಎನ್ನುವ ಬಗ್ಗೆ ಅಧಿಕೃತ ಘೋಷಣೆಯನ್ನು ಜನವರಿ ತಿಂಗಳಿನಲ್ಲಿ ಮಾಡುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ