ರಾಜ್ಯ ಸರಕಾರದಿಂದ ಬದಲಾದ ಕೋವಿಡ್ ಮಾರ್ಗಸೂಚಿ: ರಾಜ್ಯದ ಜನತೆಗೆ ಮತ್ತೆ ಶಾಕ್!

ರಾಜ್ಯ ಸರಕಾರದಿಂದ ಬದಲಾದ ಕೋವಿಡ್ ಮಾರ್ಗಸೂಚಿ: ರಾಜ್ಯದ ಜನತೆಗೆ ಮತ್ತೆ ಶಾಕ್!
republicday728
republicday468
republicday234

ಬೆಂಗಳೂರು, ಎ.22: ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದ ರಾಜ್ಯ ಸರಕಾರ ವಾರಾಂತ್ಯದ ಎರಡು ದಿನಗಳಲ್ಲೂ ಸಂಪೂರ್ಣ ಕರ್ಫ್ಯೂ ಹೇರಲಾಗಿತ್ತು ಬದಲಾದ ಮಾರ್ಗಸೂಚಿ ಪ್ರಕಾರ ಅಗತ್ಯ ವಸ್ತುಗಳನ್ನು ಬಿಟ್ಟು ಉಳಿದ ಎಲ್ಲಾ ವ್ಯವಹಾರಗಳನ್ನು ಬಂದ್ ಮಾಡುವಂತೆ ಸರಕಾರ ಆದೇಶಿಸಿದೆ.
     ಹೊಸ ಮಾರ್ಗಸೂಚಿಯ ಅರಿವಿಲ್ಲದ ಅಂಗಡಿ ಮ್ಹಾಲಕರು ಇಂದು ಎಂದಿನಂತೆ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದರು. ಆದರೆ ಪೋಲೀಸರು ಮಧ್ಯೆ ಪ್ರವೇಶಿಸಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವ್ಯವಹಾರಗಳನ್ನು ಬಂದ್ ಮಾಡಿಸುತ್ತಿದ್ದಾರೆ.
     ಕೋವಿಡ್ ಆರಂಭದಿಂದಲೂ ಶಾಕ್ ಮೇಲೆ ಶಾಕ್ ಕೊಡುತ್ತಿರುವ ಸರಕಾರವು ಮತ್ತೆ ದಿಢೀರ್ ಬಂದ್ ಮಾಡಿಸುವ ಮೂಲಕ ಮತ್ತೆ ರಾಜ್ಯದ ಜನತೆಗೆ ಶಾಕ್ ನೀಡಿದೆ. ಜವುಳಿ ಅಂಗಡಿ, ಚಪ್ಪಳಿ ಅಂಗಡಿ, ಚಿನ್ನಾಭರಣ, ಶಾಪಿಂಗ್ ಮಾಲ್, ಸಿನಿಮಾ ಹಾಲ್, ಆರಾದನಾಲಯಗಳು ಇತ್ಯಾದಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಈ ಮೂಲಕ ಇಡೀ ರಾಜ್ಯಕ್ಕೆ ರಾಜ್ಯವೇ ಮತ್ತೆ ಲಾಕ್ ಆಗುತ್ತಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ