ರಾಜಿಯಾಗದ ಸ್ವಾಭಿಮಾನ - ಸತ್ತಾರ್‌ ಪಂದಲ್ಲೂರ್

ರಾಜಿಯಾಗದ ಸ್ವಾಭಿಮಾನ - ಸತ್ತಾರ್‌ ಪಂದಲ್ಲೂರ್

    ಲೇಖಕರು: ಸತ್ತಾರ್‌ ಪಂದಲ್ಲೂರು (ಪ್ರಧಾನ ಕಾರ್ಯದರ್ಶಿ, ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಸಮಿತಿ)

      1989ರ ಫೆಬ್ರವರಿ 19 ರಂದು ಸ್ಥಾಪಿಸಲ್ಪಟ್ಟ ಸಂಘಟನೆಯಾಗಿದೆ ಎಸ್‌ಕೆಎಸ್‌ಎಸ್‌ಎಫ್. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ವಿದ್ಯಾರ್ಥಿ ವಿಭಾಗವಾದ ಈ ಸಂಘಟನೆಯು ಅನಿವಾರ್ಯತೆಯ ಸೃಷ್ಠಿ ಎಂದು ಇದರ ಸ್ಥಾಪಕ ನೇತಾರರು ವಿಶೇಷಣ ನೀಡಿದ್ದರು. ಜ್ಞಾನ, ವಿನಯ ಮತ್ತು ಸೇವೆ ಎಂಬ ಘೋಷವಾಕ್ಯದಡಿಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಜನರೊಂದಿಗೆ ಬೆರೆತು ಕಾರ್ಯಾಚರಿಸುತ್ತಿದೆ. ಇದು ಒಂದು ಜನಾಂದೋಲನವಾಗಿ ಮಾರ್ಪಟ್ಟಿದೆ. ಆಧುನಿಕ ವೈಜ್ಞಾನಿಕ ಕಾಲಚಕ್ರದಲ್ಲಿ ಜೊತೆ ಜೊತೆಯಾಗಿ ಸಂಘಟನೆ ಸಾಗುತ್ತಿದ್ದರೂ, ಸಂಪ್ರದಾಯ ಮತ್ತು ಧಾರ್ಮಿಕ ವಿಷಯದಲ್ಲಿ ದೃಢವಾಗಿ ಕಾಲೂರಿ ನಿಂತಿದೆ.

      ವಿದ್ಯಾರ್ಥಿ ಸಂಘಟನೆ ಎಂದು ಕರೆಯಲ್ಪಡುವಾಗಲೂ, ಯುವ ಜನತೆಯ ಮತ್ತು ಕೆಲವೊಮ್ಮೆ ಸಮುದಾಯದ, ಸಮಾಜದ ಸಾರ್ವಜನಿಕ ವಿಷಯಗಳಲ್ಲಿ ಕೂಡಾ ಮಧ್ಯೆ ಪ್ರವೇಶಿಸಬೇಕಾಗಿ ಬಂದಿದೆ. ಕೆಲವು ಶೂನ್ಯತೆಗಳನ್ನು ತುಂಬುವುದು ಅನಿವಾರ್ಯವಾಗಿತ್ತು. ಹಾಗಿದ್ದರೂ, ಸಂಘಟನೆಯ ಕಾರ್ಯಸೂಚಿಯನ್ನು ಸ್ವಯಂ ರಚಿಸಿಕೊಂಡು, ನಿರ್ದಿಷ್ಟ ಯೋಜನೆಗಳೊಂದಿಗೆ ಮುಂದೆ ಹೆಜ್ಜೆ ಇಟ್ಟಿದೆ.

      ಸಂಘಟನೆಯ ವಿವಿಧ ಯೋಜನೆಗಳನ್ನು ಹೆಚ್ಚಿನ ಜನರಿಗೆ ತಲುಪುವಂತಾಗಲು, ವಿವಿಧ ಆಸಕ್ತಿಗಳನ್ನು ಹೊಂದಿರುವ ಕಾರ್ಯಕರ್ತರು ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಚಟುವಟಿಕೆಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಮಗ್ರ ಸಾಂಸ್ಥಿಕ ರಚನೆಯನ್ನು (ಓರ್ಗನೈಝೇಷನಲ್‌ ಸ್ಟ್ರಕ್ಚರ್)‌ ಮಾಡಲು ಸಾಧ್ಯವಾಯಿತು. ಅದರ ಭಾಗವಾಗಿ ಇಂದು ಕೇಂದ್ರ ಸಮಿತಿಯ ಅಧೀನದಲ್ಲಿ ವಿವಿಧ ಉಪ ಸಮಿತಿಗಳು, ವಿವಿಧ ಯೋಜನೆಗಳು ಮತ್ತು ವಿವಿಧ ಸಂಸ್ಥೆಗಳು ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. 

      ಪ್ರಬೋಧನ ಮತ್ತು ಪರಿಷ್ಕರಣೆ ಕ್ಷೇತ್ರವನ್ನು ಇಬಾದ್ ನಿರ್ವಹಿಸುತ್ತದೆ. ಆಶಯ-ಆದರ್ಶಗಳ ಪ್ರಚಾರ ಮತ್ತು ಪ್ರತಿರೋಧ ಕ್ಷೇತ್ರವನ್ನು ಇಸ್ತಿಖಾಮ ನೋಡಿಕೊಳ್ಳುತ್ತಿದೆ.  ಧಾರ್ಮಿಕ ಮತ್ತು ಲೌಕಿಕ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ತ್ವಲಬ ಮತ್ತು ಕ್ಯಾಂಪಸ್‌ ವಿಂಗ್‌ ಕಾರ್ಯ ನಿರ್ವಹಿಸುತ್ತದೆ.  ಶಿಕ್ಷಣ ಕ್ಷೇತ್ರದಲ್ಲಿ ಪ್ರಿಸ್ಕೂಲ್‌ನಿಂದ ಆರಂಭಗೊಂಡು ನಾಗರಿಕ ಸೇವಾ ತರಬೇತಿಯವರೆಗೆ ಬೃಹತ್ತಾದ ಯೋಜನೆಗಳು ಮತ್ತು ಕಾರ್ಯಕ್ರಮಗಳೊಂದಿಗೆ ಮುನ್ನಡೆಯುತ್ತಿದೆ.  ವಿವಿಧ ಪ್ರದೇಶಗಳಲ್ಲಿ ನೂರಾರು ಪ್ರಿಸ್ಕೂಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಧಾರ್ಮಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ʼಮಫಾಸ್‌ʼ ಎಂಬ ಯೋಜನೆಯಡಿ ವಿವಿಧ ಬ್ಯಾಚ್‌ಗಳಾಗಿ ನಾಗರಿಕ ಸೇವಾ ತರಬೇತಿ ಪಡೆಯುತ್ತಿದ್ದಾರೆ.

      ಶೈಕ್ಷಣಿಕ ಸೇವೆಗಳ ಜೊತೆಗೆ, ಉದ್ಯೋಗ ಕ್ಷೇತ್ರಕ್ಕೂ ಸಂಘಟನೆ ಇತ್ತೀಚೆಗೆ ಕಾಲಿಟ್ಟಿದೆ. ದೇಶದ ಹೊಸ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಅನುಸರಿಸಿಕೊಂಡು ಉದ್ಯೋಗ ಕ್ಷೇತ್ರಕ್ಕೆ ರಂಗ ಪ್ರವೇಶ ಮಾಡಿದೆ.  ಕೇಂದ್ರ ಮತ್ತು ರಾಜ್ಯ ಸರಕಾರಗಳ ಹುದ್ದೆಗಳಲ್ಲಿ ಸಮುದಾಯದ ಪ್ರಾತಿನಿಧ್ಯವು ಸೆಮಿನಾರ್‌ಗಳ ಚರ್ಚಾ ವಿಷಯ ಮಾತ್ರವಾಗಿ, ಪ್ರಾಯೋಗಿಕ ಪರಿಹಾರ ಕ್ರಮಗಳಿಗೆ ಯಾರೂ ಮುಂದಾಗದ ಪರಿಸ್ಥಿತಿಯಲ್ಲಿಎಸ್‌ಕೆಎಸ್‌ಎಸ್‌ಎಫ್‌ ಇದನ್ನೊಂದು ಕಾರ್ಯಸೂಚಿಯಗಿ ತೆಗೆದುಕೊಂಡಿದೆ.

      "ಯುವಜನರು ತಮ್ಮ ಅಸ್ತಿತ್ವದ ಹಕ್ಕುಗಳನ್ನು ಮರಳಿ ಪಡೆಯುತ್ತಿದ್ದಾರೆ” ಎಂಬರ್ಥದಲ್ಲಿ ಅಸ್ತಿತ್ವ, ಹಕ್ಕು ಯುವಜನ ಮರಳಿ ಪಡೆಯುತ್ತಿದೆ ಎಂಬ ಸಂದೇಶದೊಂದಿಗೆ ಸಂಘಟನೆಯು 2020 ಡಿಸೆಂಬರ್ 6 ರಿಂದ 2021 ಜನವರಿ 26 ರವರೆಗೆ ವ್ಯಾಪಕವಾದ ಅಭಿಯಾನವನ್ನು ನಡೆಸಿತು. ಎಸ್‌ಕೆಎಸ್‌ಎಸ್‌ಎಫ್‌ ಕೇಂದ್ರ ಸಮಿತಿ ಅಧ್ಯಕ್ಷರಾದ ಸಯ್ಯಿದ್‌ ಹಮೀದಲಿ ಶಿಹಾಬ್‌ ತಂಙಳ್ ಕೇರಳದ‌ ತಿರುವನಂತ ಪುರದಿಂದ ಕರ್ನಾಟಕದ ಮಂಗಳೂರುವರೆಗೆ ನಡೆಸಿದ ಮುನ್ನಡೆ ಯಾತ್ರೆಯ 63 ಕೆಂದ್ರಗಳಲ್ಲೂ ಸಂಪೂರ್ಣವಾಗಿ ವಿಷಯದ ಗಾಂಭಿರ್ಯತೆಯನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಿ ಕೊಡುವ ಪ್ರಯತ್ನ ಮಾಡಲಾಗಿತ್ತು. ಕಾರ್ಯಕ್ರಮದ ಮುಂದುವರಿದ ಭಾಗವೇ ಕಮ್ಯುನಿಟಿ ಡೆವಲೆಪ್‌ಮೆಂಟ್‌ ಪ್ರೋಗ್ರಾಂ (ಸಿಡಿಪಿ). ಪ್ರಸ್ತುತ ಸುಮಾರು 100 ಸಿಡಿಪಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸೇವೆಗಳಿಗಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ 2,000ಕ್ಕಿಂತಲೂ ಅಧಿಕ ಅಭ್ಯರ್ಥಿಗಳು ಸಿಡಿಪಿ ಕೇಂದ್ರಗಳಲ್ಲಿದ್ದಾರೆ. ಮತ್ತು ಸಿಡಿಪಿಯನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ.

      ಆರೋಗ್ಯ ಸೇವಾ ರಂಗದಲ್ಲಿ ಜನಪ್ರಿಯವಾದ ಭಾಗವಹಿಸುವಿಕೆಯೊಂದಿಗೆ ಸಹಚಾರಿ ಮತ್ತು ವಿಖಾಯ ಮುನ್ನೆಲೆಗೆ ಬಂತು. ವಿಖಾಯ ಸ್ವಯಂಸೇವಕರು ಬದುಕುಳಿಯುವಿಕೆ, ವಿವಿಧ ಕಡೆಗಳಲ್ಲಿ ಉಂಟಾದ ಪ್ರವಾಹ, ಭೂಕುಸಿತ ಕೋರೋನಾದಂತಹ ವಿಪತ್ತುಗಳು ಸಂಭವಿಸಿದಾಗ ಅದರ ವಿರುದ್ಧ ಹೋರಾಡಲು ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿ ತರಬೇತಿ ಪಡೆದ ವಿಖಾಯ ಕಾರ್ಯಕರ್ತರು. ಇವರ ಸೇವೆಯು ಸರಕಾರದ ಮತ್ತು ಸಾರ್ವಜನಿಕರ ಪ್ರಿತಿ, ವಿಶ್ವಾಸವನ್ನು ಹಿಡಿದಿಟ್ಟು ಕೊಳ್ಳುವಂತಹದ್ದಾಗಿತ್ತು. ಕೇರಳದ ಭೀಕರ ಪ್ರಳಯದಿಂದ ಸಂಕಷ್ಟಕ್ಕೀಡಾದವರಿಗೆ ಎಸ್‌ಕೆಎಸ್‌ಎಸ್‌ಎಫ್‌ 1 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿತು. ಸುಮಾರು 600ರಷ್ಟು ಸಹಚಾರಿ ಸೆಂಟರ್‌ಗಳ ಮೂಲಕ ಮನೆಯಿಂದ ಹೊರ ಬಲಾಗದ ಸಾವಿರಾರು ರೋಗಿಗಳ ಆರೈಕೆಯನ್ನು ಮಾಡಲಾಗುತ್ತಿದೆ. ಮಾದಕ ವ್ಯಸನಿಗಳು ಮತ್ತು ಇಂಟರ್ನೆಟ್ ವ್ಯಸನಿಗಳಿಗೆ ಚಿಕಿತ್ಸೆ ನೀಡಲು ಕೇಂದ್ರ ಸಮಿತಿಯ ಟ್ರೈಸನೇರಿಯಂ (ಎಸ್‌ಕೆಎಸ್‌ಎಸ್‌ಎಫ್‌ ಮೂವತ್ತನೇ ವಾರ್ಷಿಕೋತ್ಸವ) ಯೋಜನೆಯ ಭಾಗವಾಗಿ ಕೇರಳದ ಕುಟ್ಟಿಪುರಂನಲ್ಲಿ ಸ್ಥಾಪಿಸಲ್ಪಟ್ಟ ವೆಲ್‌ನೆಸ್ ಇನ್‌ಸ್ಟಿಟ್ಯೂಟ್ ಫಾರ್ ಸೈಕೋ ಸೊಲ್ಯೂಷನ್ಸ್ & ರಿಹ್ಯಾಬಿಲಿಟೇಶನ್‌ ಕೇಂದ್ರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದು ಈ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡುವ ಸಂಸ್ಥೆಗಳಲ್ಲಿ ಒಂದಾಗಿದೆ.

      ಆರೋಗ್ಯ ಕ್ಷೇತ್ರದಲ್ಲಿ ಸಂಘಟನೆಯ ಪ್ರಧಾನ ಶಕ್ತಿ ಎಂಬುದು ಸಂಸ್ಥೆಯ ಉಪವಿಭಾಗವಾದ ʼಮೀಮ್ʼ ಎಂಬ ವೈದ್ಯರ ವಿಭಾಗವಾಗಿದೆ.  ಅಗತ್ಯ ಮಾರ್ಗಸೂಚಿಗಳ ಜೊತೆಗೆ, ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್‌ನಲ್ಲಿ ಪ್ರಾರಂಭಿಸಲಾದ ವೈದ್ಯರ ಸಹಾಯವಾಣಿಯು ದೇಶ ಮತ್ತು ವಿದೇಶಗಳಲ್ಲಿನ ಸಾವಿರಾರು ಜನರಿಗೆ ಪ್ರಯೋಜನವನ್ನು ನೀಡಿದೆ.  ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸರ್ಗಲಯ, ಸತ್ಯಧಾರ ಮತ್ತು ಮನೀಶ್ ಮುಂತಾದ ಸಮಿತಿಗಳ ಸೇವೆಯು ಗಮನಾರ್ಹ.  ಮಹಿಳೆಯರಿಗೆ ಧಾರ್ಮಿಕ ಚೌಕಟ್ಟಿನಲ್ಲೇ ಅಧ್ಯಯನ ನಡೆಸಲು ಮತ್ತು ಅವರದೇ ಆದ ಪಾಲ್ಗೊಲ್ಳುವಿಕೆಗಾಗಿ ಇಸ್ಲಾಮಿಕ್ ಫ್ಯಾಮಿಲಿ ಕ್ಲಸ್ಟರ್ (IFC) ಇದೆ. ಐಎಫ್‌ಸಿ ನಡೆಸಿದ ಶಿ ಸ್ಕಿಲ್ಸ್‌ ಪರೀಕ್ಷೆಯಲ್ಲಿ ಒಂದೂವರೆ ಲಕ್ಷ ಮಹಿಳೆಯರು ಮತ್ತುಕ್ಯಾಂಪಸ್ ವಿದ್ಯಾರ್ಥಿನಿಗಳಿಗಾಗಿ‌ ನಡೆಸಿದ ಪೆನ್‌ ಕ್ವೀನ್‌ ಸ್ಪರ್ಧೆಯಲ್ಲಿ 1,500 ಮಂದಿ ಬಾಗವಹಿಸದ್ದರು.

      ಮಲಬಾರ್ ಆಂದೋಲನದ 100 ನೇ ವಾರ್ಷಿಕೋತ್ಸವವನ್ನು ಒಂದು ವರ್ಷದ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ.  ಮಲಬಾರ್ ಹೋರಾಟ ಹಿಂದೂ ಮತ್ತು ಮುಸ್ಲಿಮರು ಒಟ್ಟು ಸೇರಿ ನಡೆಸಿದ ಸ್ವಾತಂತ್ರ್ಯ ಹೋರಾಟ ಎಂಬ ಸಂದೇಶವನ್ನು ವಿವಿಧ ಕಾರ್ಯಕ್ರಮಗಳ ಮೂಲಕ ನಾವು ಸಾರಿದ್ದೇವೆ.  ದೇಶ ಭ್ರಷ್ಟರಾಗಿ ಅಂಡಮಾನಿಗೆ ಗಡಿಪಾರು ಮಾಡಲ್ಪಟ್ಟವರ 75 ಕುಟುಂಬಗಳನ್ನು ಕರೆ ತಂದು ಮಂಜೇರಿಯಲ್ಲಿ ನಡೆಸಿದ ಅಂಡಮಾನ್‌ ಮಲೆಯಾಳಿ ಕಾನ್ಫರೆನ್ಸ್‌ ಇದರ ಭಾಗವಾಗಿತ್ತು.  ಕೋವಿಡ್ ಸಮಯದಲ್ಲೂ, ನಂತರದಲ್ಲೂ ಆನ್‌ಲೈನ್ ಮತ್ತು ಸಾಮಾಜಿಕ ಮಾಧ್ಯಮ ಸಂವಹನಗಳಲ್ಲಿ ಮೀಡಿಯಾವಿಂಗ್ ಮತ್ತು ಎಸ್‌ಕೆಐಸಿಅರ್ ಮಹತ್ವದ ಪಾತ್ರವನ್ನು ವಹಿಸಿದೆ.

      ಆರ್ಗನೆಟ್ ಸಂಘಟನೆಯ ಸಂವಿಧಾನ ನಿರ್ವಹಣೆ ಮತ್ತು ತರಬೇತಿ ನೀಡುವ  ಕೆಲಸವನ್ನು ಮಾಡುತ್ತಿದೆ.  ಈ ಅವಧಿಯಲ್ಲಿಯೇ ಫಾರ್ವರ್ಡ್ ಫೌಂಡೇಶನ್ ಎಂಬ ಎನ್‌ಜಿಒ ರೂಪುಗೊಂಡಿತು.  ಕೇರಳದ ಹೊರತಾಗಿ, ಬೆಂಗಳೂರು, ಹೈದರಾಬಾದ್, ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ ಸರ್ಕಾರಿ ಏಜೆನ್ಸಿಗಳ ಸಹಯೋಗದೊಂದಿಗೆ ವಿವಿಧ ಶೈಕ್ಷಣಿಕ ಸಬಲೀಕರಣ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಎಸ್‌ಕೆಎಸ್‌ಎಸ್‌ಎಫ್‌ ಸ್ಥಾಪಿಸಲ್ಪಟ್ಟು ಮೂವತ್ತೆರಡು ವರ್ಷಗಳ ನಂತರ ಹಿಂದಿರುಗಿ ನೋಡುವಾಗ ಸಂಘಟನೆಯ ಕಾಲ, ಚರಿತ್ರೆ, ಪಯಣ ಕುರಿತಾದ ಒಂದು ಚರಿತ್ರೆ ಪುಸ್ತಕವನ್ನು ಸದ್ಯದಲ್ಲೇ ಸಮರ್ಪಿಸಲಾಗುತ್ತಿದೆ.

      ಕೇರಳದ ಒಳಗೂ, ಹೊರಗೂ, ವಿದೇಶದಲ್ಲೂ ಮುಸ್ಲಿಂ ಸಮುದಾಯದ ಧಾರ್ಮಿಕ ಜಾಗೃತಿ ಮತ್ತು ಸಾಮಾಜಿಕ ಭದ್ರತೆಯನ್ನು ಎತ್ತಿಹಿಡಿಯುವುದು ಸಂಸ್ಥೆಯ ಸಾಮಾನ್ಯ ನಿಲುವಾಗಿದೆ.  ಇಲ್ಲಿನ ಧಾರ್ಮಿಕ ಮತ್ತು ಸಾಮಾಜಿಕ ಗುಂಪುಗಳು ಕೇರಳದ ಶ್ರೀಮಂತ ಪಾಂಡಿತ್ಯ ಪಾರಂಪರ್ಯೆ ಮತ್ತು ಸಯ್ಯಿದರುಗಳ ಶೃಂಖಳೆಯ ನೆರಳಿನಲ್ಲಿ ಇಲ್ಲಿನ ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಅವಕಾಶವನ್ನು ಹೊಂದಿದ್ದವು.  ಇಂತತಹ ಸಾಮುದಾಯಿಕ ವಾತಾವರಣವಿಲ್ಲದ ಇತರ ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯಕ್ಕಾಗಿ ಕೆಲಸ ಮಾಡುವುದರ ಹೊರತಾಗಿ, ಇಸ್ಲಾಮೋಫೋಬಿಯಾ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಾಕರಿಸಲ್ಪಡುವ ಕೇರಳದಲ್ಲಿ ಇದು ಪ್ರಬಲ ಶಕ್ತಿಯಾಗಿದೆ.  ಸಂಘಟನೆಯ ಸಾಂಪ್ರದಾಯಿಕ ಮಾನದಂಡಗಳನ್ನು ಮೀರದೆ, ಸಮಕಾಲೀನವಾದ ಕಾರ್ಯಸೂಚಿಯನ್ನು ರೂಪಿಸಲು ಸಾಧ್ಯವಾಗುತ್ತಿರುವುದು ವಿಶೇಷವಾಗಿದೆ.  ಫ್ಯಾಸಿಸ್ಟ್ ಕಾಲದಲ್ಲಿ ಅಧಿಕಾರ ಹಂಚಿಕೆ ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ.

      ರಾಜಿಯಾಗದ ಸ್ವಾಭಿಮಾನ ಎಂಬ ಸಂದೇಶದೊಂದಿಗೆ ಸಂಘಟನೆಯ ಸದಸ್ಯತ್ವ ಅಭಿಯಾನ ಡಿಸೆಂಬರ್ 1 ರಿಂದ 15 ರವರೆಗೆ ನಡೆಯುತ್ತಿದೆ.  ಇದಕ್ಕೂ ಮೊದಲು ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ವ್ಯವಸ್ತಿತವಾಗಿ ಅದಾಲತ್‌ಗಲನ್ನು ನಡೆಸಲಾಯಿತು. ಅದಾಲತ್‌ನಲ್ಲಿ ಭಾಗವಹಿಸಿದ ಅಧಿಕೃತ ಶಾಖೆಗಳಿಗೆ ಮಾತ್ರ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.  ಪ್ರತಿ ಶಾಖೆಯಲ್ಲೂ ಗರಿಷ್ಠ ಪ್ರಮಾಣದ ಸದಸ್ಯರನ್ನು ಸೇರಿಸಿಕೊಳ್ಳುವುದನ್ನು ಸಹ ಕಾರ್ಯಕರ್ತರು ಗಮನದಲ್ಲಿಟ್ಟುಕೊಳ್ಳಬೇಕು.  ಸಮಸ್ತದ ಆಶಯಾದರ್ಶಗಳಿಗೆ ಪ್ರಾಮುಖ್ಯತೆ ನೀಡುವ, ಶಕ್ತರಾದ ಹೊಸ ಮುಖಗಳನ್ನೂ ನಾವು ಮೇಲಕ್ಕೆ ತರಬೇಕು.

      ಸಮುದಾಯವು ಒಂದು ದೇಹವಿದ್ದಂತೆ.  ಎಲ್ಲಾ ಅಂಗಾಂಗಗಳು ಆರೋಗ್ಯವಾಗಿದ್ದರೆ ಮತ್ತು ಮನಸ್ಸು ಎಚ್ಚರವಾಗಿದ್ದರೆ ಮಾತ್ರ ದೇಹವು ಆರೋಗ್ಯವಾಗಿರಲು ಸಾಧ್ಯ. ಸಮುದಾಯವು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆದರೆ ಮಾತ್ರ ಉತ್ತಮ ಸಮುದಾಯವನ್ನು ಸಾಧಿಸಲು ಸಾಧ್ಯ ಎಂಬುದು ಸಂಘಟನೆಯ ದೃಷ್ಟಿಕೋನವಾಗಿದೆ.  ಆ ಗುರಿಯನ್ನು ಸಾಧಿಸಲು ಎಲ್ಲಾ ಕ್ಷೇತ್ರಗಳಲ್ಲಿ ಜಾಗರೂಕರಾಗಿರಲು ಮತ್ತು ಸಕ್ರಿಯವಾಗಿ ಶ್ರಮಿಸುವುದು ನಮ್ಮ ನಿರ್ಧಾರವಾಗಿದೆ.  ಸಾಂಪ್ರದಾಯಿಕವಾದ ಸವಿ ನೆನಪುಗಳು ಜೊತೆಯಲ್ಲಿವೆ.  ಹೊಸ ತಲೆಮಾರಿನ ಕ್ರಿಯಾಶೀಲತೆಯೂ ಇದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ