ರಾಜಕೀಯದಿಂದ ಹಿಂದೆ ಸರಿದ ರಜನೀಕಾಂತ್

ರಾಜಕೀಯದಿಂದ ಹಿಂದೆ ಸರಿದ ರಜನೀಕಾಂತ್

ಚೆನ್ನೈ: ಕೆಲವು ದಿನಗಳ ಹಿಂದೆ ರಾಜಕೀಯ ಪ್ರವೇಶದ ಬಿರುಗಾಳಿ ಸುದ್ದಿಯನ್ನು ನೀಡಿದ್ದ ಸೂಪರ್ ಸ್ಟಾರ್ ರಜಿನಿಕಾಂತ್ ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಆರೋಗ್ಯ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನಲೆಯಲ್ಲಿ ತಾನು ರಾಜಕೀಯ ಪ್ರವೇಶ ಮಾಡುತ್ತಿಲ್ಲ ಎಂದು ಸ್ವತಃ ರಜಿನಿಕಾಂತ್ ತಮ್ಮ  ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.  ಹೊಸ ರಾಜಕೀಯ ಪಕ್ಷದ  ನಿರೀಕ್ಷೆಯಲ್ಲಿ ಇದ್ದ ರಜಿನಿಕಾಂತ್ ಅಭಿಮಾನಿಗಳಿಗೆ  ಸೂಪರ್ ಸ್ಟಾರ್ ನಿರ್ಧಾರದಿಂದ ಬಹಳ ನಿರಾಸೆ ಮೂಡಿಸಿದೆ. 

ಚಲನ ಚಿತ್ರವೊಂದರ ಚಿತ್ರೀಕರಣ ಸಮಯದಲ್ಲಿ ಕಳೆದ ವಾರ ರಕ್ತದೊತ್ತಡ ಕಂಡು ಬಂದಿತ್ತು. ಈ ಸಮಸ್ಯೆಯಿಂದಾಗಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು ರಜಿನಿಕಾಂತ್ ಅವರನ್ನು ಹೈದರಾಬಾದ್ ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ