ಯೂ ಟ್ಯೂಬ್ ವೀಡಿಯೋ ಅನುಕರಣೆ: ಬೆಂಕಿ ತಗುಲಿದ ಬಾಲಕ ಮೃತ್ಯು

ಯೂ ಟ್ಯೂಬ್ ವೀಡಿಯೋ ಅನುಕರಣೆ: ಬೆಂಕಿ ತಗುಲಿದ ಬಾಲಕ ಮೃತ್ಯು
republicday728
republicday468
republicday234

ತಿರುವನಂತಪುರಂ: ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿದ 12 ವರ್ಷದ ಬಾಲಕ ಸುಟ್ಟಗಾಯಗಳಿಂದ ಮೃತಪಟ್ಟಿದ್ದಾನೆ.  ಪ್ರಕಾಶ್ ಮತ್ತು ಅನುಷಾ ದಂಪತಿಗಳ ಪುತ್ರ ಏಳನೇ ತರಗತಿ ವಿದ್ಯಾರ್ಥಿ ಶಿವನಾರಾಯಣನ್ ವೇಂಙನೂರ್ ಮೃತಪಟ್ಟ ಬಾಲಕ.

      ಬೆಂಕಿ ಜ್ವಾಲೆಗಳನ್ನು ಉಪಯೋಗಿಸಿ ಕೂದಲನ್ನು ನೇರವಾಗಿಸುವ ವೀಡಿಯೋವನ್ನು ಅನುಕರಿಸಲು ಪ್ರಯತ್ನಿಸುವಾಗ  ಬಟ್ಟೆಗಳಿಗೆ ಬೆಂಕಿ ತಗುಲಿದೆ ಎಂದು ನಂಬಲಾಗಿದೆ.  ಯೂಟ್ಯೂಬ್ ವೀಡಿಯೊದಲ್ಲಿ ಸ್ಪಿರಿಟ್ ಉಪಯೋಗಿಸಿ ಕೂದಲನ್ನು ನೇರಗೊಳಿಸುವ ವಿಧಾನವನ್ನು ತೋರಿಸಲಗಿತ್ತು. ಶಿವನಾರಾಯಣನ್ ತನ್ನ ಕೂದಲಿಗೆ ಸೀಮೆಎಣ್ಣೆ ಹಚ್ವಿಕೊಂಡು ಬೆಂಕಿಯಿಂದ  ಕೂದಲನ್ನು ನೇರಗೊಳಿಸುವ ಪ್ರಯತ್ನದಲ್ಲಿ ಬೆಂಕಿಯು ಪ್ರಜ್ವಲಿಸಿತ್ತು.


      ಘಟನೆಯ ಸಮಯದಲ್ಲಿ ಮನೆಯಲ್ಲಿ ಅಜ್ಜಿ ಒಬ್ಬಳೇ ಇದ್ದಳು.  ಮಗುವಿನ ಕೂಗು ಕೇಳಿ ಓಡಿಹೋದಾಗ ಬಾಲಕನಿಗೆ ವಿಪರೀತ ಸುಟ್ಟ ಗಾಯಗಳಾಗಿತ್ತು.  ನಂತರ ಬಾಲಕನನ್ನು ತಿರುವನಂತಪುರಂನ ಎಸ್ಎಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಬಾಲಕ ಆಸ್ಲತ್ರೆಯಲ್ಲಿ  ಮೃತಪಟ್ಟಿದ್ದಾನೆ.

      ಅದಾಗ್ಯೂ ಹುಡುಗ ಇಂಟರ್ನೆಟ್ ಆಟ ಆಡಿದ ನಂತರ, ಆಟದಲ್ಲಿ ಸೋತು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದಾನೆ ಎಂದೂ ಹೇಳಲಾಗಿದೆ. ಓನ್ ಲೈನ್ ಆಟದಲ್ಲಿ ಹುಡುಗನಿಗೆ ವಿಪರೀತ ಅಸಕ್ತಿಯಿತ್ತು ಎಂದು ಸಂಬಂಧಿಕರು ಹೇಳುತ್ತಿದ್ದಾರೆ.  ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.


   ಶಿವನಾರಾಯಣನ್ ವೇಂಙನೂರು ವಿ.ಪಿ.ಎಚ್‌. ಎಸ್‌.ಎಸ್‌ನ ಏಳನೇ ತರಗತಿ ವಿದ್ಯಾರ್ಥಿ.  ತಂದೆ ಪ್ರಕಾಶ್ ಪೊಲೀಸ್ ಅಧಿಕಾರಿ ಮತ್ತು ತಾಯಿ ಶಿಕ್ಷಕಿ.  ಸಹೋದರ ಕೈಲಾಸ್ ನಾಥ್.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ