ಯೂತ್ ಕಾಂಗ್ರೆಸ್ ಚುನಾವಣೆ: ಈ ಬಾರಿ ಆನ್ ಲೈನ್ ಗೆ ಸೀಮಿತ

ಹುಬ್ಬಳ್ಳಿ : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ( KPYC ) ಸಾಂಸ್ಥಿಕ ಚುನಾವಣೆ ಈ ಬಾರಿ ಆನ್‌ಲೈನ್‌ನಲ್ಲಿ ನಡೆಯಲಿದ್ದು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಜೆ.ಎಂ. ಲಿಂಗ್ಡೋ ರವರ ನೇತೃತ್ವದ ಫೌಂಡೇಷನ್ ಫಾರ್ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಆಫ್ ಎಲೆಕ್ಷನ್ ಸಂಸ್ಥೆಯು ಚುನಾವಣಾ ಪ್ರಕ್ರಿಯೆಯನ್ನು ನಡೆಸಲಿದೆ. ಕೆಪಿವೈಸಿ ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ಬ್ಲಾಕ್ ಪದಾಧಿಕಾರಿಗಳ ಆಯ್ಕೆ ಪ್ರತಿಕ್ರಿಯೆ ನಡೆಯಲಿದೆ.
ಕೋವಿಡ್ ಕಾರಣಕ್ಕೆ ಈ ಬಾರಿ ಆನ್‌ಲೈನ್ ಚುನಾವಣೆ ನಡೆಸಲಾಗುತ್ತಿದ್ದು ಕೆಪಿವೈಸಿ ಸದಸ್ಯ ರೆಲ್ಲರೂ ಮತದಾನಕ್ಕೆ ಅರ್ಹರಾಗಿದ್ದಾರೆ. ಚುನಾವಣೆ ದಿನ ಅವರ ಮೊಬೈಲ್ ಫೋನ್‌ಗೆ ಒಂದು ಬಾರಿ ಬಳಸುವ ಪಾಸ್‌ವರ್ಡ್ (OTP) ಕಳುಹಿಸಲಾ ಗುತ್ತದೆ. ಇದನ್ನು ಬಳಸಿ ಅವರು ಮತ ಚಲಾಯಿಸಬಹುದು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ತಿಳಿಸಿದ್ದಾರೆ.
ಮತದಾನದ ವೇಳೆ ಸೆಲ್ಫಿ ಕಳುಹಿಸುವುದು ಕಡ್ಡಾಯ. ಆದ್ದರಿಂದ ಯಾರದ್ದೋ ಮೊಬೈಲ್ ಫೋನ್ OTP ಬಳಸಿ ಇನ್ಯಾರೋ ಮತ ಚಲಾಯಿಸಲಾಗದು ಎಂದು ಅವರು ಮಾಹಿತಿ ನೀಡಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ