ಯುಎಇ ವಿಖಾಯ ಸಮಿತಿಯಿಂದ ಬೃಹತ್‌ ರಕ್ತದಾನ ಶಿಬಿರ

ಯುಎಇ ವಿಖಾಯ ಸಮಿತಿಯಿಂದ ಬೃಹತ್‌ ರಕ್ತದಾನ ಶಿಬಿರ

ದುಬೈ: ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ವಿಖಾಯ ಸಮಿತಿಯು ಇತ್ತೀಚೆಗೆ ದುಬೈನಲ್ಲಿ ಆಯೋಜಿಸಿದ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆಯಿತು.

      ದುಬೈ ಲತೀಫ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 164 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಸಮಿತಿಯ ನೇತಾರರು, ಉಲಮಾಗಳು ಭಾಗವಹಿಸಿ ಶುಭ ಹಾರೈಸಿದರು.

      ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಳ್‌ರವರ ದುವಾದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಸಮಿತಿಯ ಉಪಾಧ್ಯಕ್ಷರಾದ ಉದ್ಯಮಿ ಜನಾಬ್ ಅಶ್ರಫ್ ಶಾ ಮಾಂತೂರು ಕಾರ್ಯಕ್ರಮ ಉದ್ಘಾಟಿಸಿದರು. ಕೋಶಾಧಿಕಾರಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ಸ್ವಾಗತಿಸಿದರು.

      ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಮಿರೇಟ್ಸ್ ಎಕ್ಸ್ಚೇಂಜ್‌ನ ರವಿ ಶೆಟ್ಟಿ ಅವರು ಮಾತನಾಡಿ ರಕ್ತದಾನ ಶಿಬಿರಕ್ಕೆ ಶುಭ ಹಾರೈಸಿದರು. ದುಬೈ ಮತ್ತು ಶಾರ್ಜಾದ ವಿವಿಧ ಸ್ಥಳಗಳಿಂದ ಆಗಮಿಸಿದ್ದ ರಕ್ತದಾನಿಗಳು ಭಾಗವಹಿಸಿದ್ದರು. 164 ಯುನಿಟ್ ರಕ್ತ ಸಂಗ್ರಹಿಸುವ ಮೂಲಕ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

      ರಕ್ತದಾನಿಗಳಿಗೆ ಫಲಾಹಾರ ಹಾಗೂ ಜ್ಯೂಸ್ ವಿತರಣೆ ಮಾಡಲಾಗಿತ್ತು. ದುಬೈ ಮತ್ತು ಶಾರ್ಜಾ ದ ವಿವಿಧ ಸ್ಥಳಗಳಿಂದ ರಕ್ತದಾನಿಗಳಿಗಾಗಿ ವಾಹನದ ವ್ಯವಸ್ಥೆ ಏರ್ಪಡಿಸಲಾಗಿತ್ತು.

      ಸಮಾರೋಪ ಸಮಾರಂಭದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ, ವಿಖಾಯ ಕರ್ನಾಟಕ ಯುಎಇ ಸಮಿತಿಯ ಚಯರ್ ಮೇನ್ ನವಾಝ್ ಬಿ.ಸಿ.ರೋಡ್ ಇವರುಗಳು ಮಾತನಾಡಿ ರಕ್ತದಾನಿಗಳಿಗೆ ಮತ್ತು ಸ್ವಯಂ ಸೇವರಾಗಿ ಸೇವೆ ಸಲ್ಲಿಸಿದ ವಿಖಾಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

      ರಕ್ತದಾನ ಶಿಬಿರದಲ್ಲಿ ಯುಎಇ ಸಮಸ್ತ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಜನಾಬ್ ಶಂಸುದ್ದೀನ್ ಸೂರಲ್ಪಾಡಿ, ಜನಾಬ್ ಬದ್ರುದ್ದೀನ್ ಹೆಂತಾರ್, ಜನಾಬ್ ಅಬ್ದುಲ್ ಸಲಾಂ ಬಪ್ಪಲಿಗೆ, ಜನಾಬ್ ಶೆರೀಫ್ ಕಾವು, ಜನಾಬ್ ಶೆರೀಫ್ ಕೊಡಿನೀರು, ಅಬ್ದುಲ್ ಲತೀಫ್ ಮದರ್ ಇಂಡಿಯಾ ಹಾಗೂ ಸಿರಾಜುದ್ದೀನ್ ಫೈಝಿ ಬಂಟ್ವಾಳ, ಎಸ್‌ಕೆಎಸ್‌ಎಸ್‌ಎಫ್ GCC ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ಬಜೆಗುಂಡಿ, ಕೋಶಾಧಿಕಾರಿ ರಝಾಕ್ ಫೈಝಿ ಎಡಪ್ಪಾಲ್ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.

      ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಸಮಿತಿ,  ದಾರುನ್ನೂರು ಯುಎಇ ರಾಷ್ಟ್ರೀಯ ಸಮಿತಿ, ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿ,  ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರು ಯುಎಇ ಸಮಿತಿ,  ದಾರುಸ್ಸಲಾಂ ಎಜುಕೇಶನ್ ಸೆಂಟರ್ ಯುಎಇ ಸಮಿತಿಯ ಪದಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ಯಶಸ್ವಿಗೆ ಸಹಕರಿಸಿದ್ದರು.

      ವಿಖಾಯ ಕರ್ನಾಟಕ ಯುಎಇ ರಕ್ತದಾನ ಸಮಿತಿಯ ಕೊ-ಚಯರ್ ಮೇನ್ ಜಲೀಲ್ ಉಕ್ಕುಡ ಅವರು ರಕ್ತದಾನಿಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ