ಯುಎಇ ಅಧ್ಯಕ್ಷ ಶೈಖ್ ಖಲೀಫ ಬಿನ್ ಝಾಯೆದ್ ವಿಧಿ ವಶ: ಎಸ್‌ಕೆಎಸ್‌ಎಸ್‌ಎಪ್ ಕರ್ನಾಟಕ ಯುಎಇ ಸಮಿತಿ ಸಂತಾಪ

ದುಬೈ, ಮೇ.13: ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರು, ಅಬುಧಾಬಿ ಎಮಿರೇಟ್ಸ್ ಆಡಳಿತಗಾರ ಶೈಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಮೆ 13 ಶುಕ್ರವಾರ ಕೊನೆಯುಸಿರೆಳೆದಿದ್ದು, ಅವರ ನಿಧನಕ್ಕೆ ಎಸ್‌ಕೆಎಸ್‌ಎಸ್‌ಎಪ್ ಕರ್ನಾಟಕ ಯುಎಇ ಸಮಿತಿ ಸಂತಾಪ ವ್ಯಕ್ತಪಡಿಸಿದೆ.
ಶೈಖ್ ಖಲೀಫ ಬಿನ್ ಝಾಯೆದ್‌ರವರು ದೀರ್ಘ ಕಾಲದ ಆಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಸುಮಾರು 73 ವರ್ಷ ವಯಸ್ಸಾಗಿತ್ತು. ಪ್ರಬುದ್ಧ ಆಡಳಿತ ನೀಡಿದ್ದ ಶೈಖ್ ಖಲೀಫ ಅವರು ದೇಶದ ಬಹುತ್ವ, ಸಾಮರಸ್ಯವನ್ನು ಬಹಳವಾಗಿ ಗೌರವಿಸಿದ್ದರು. ಯುಎಇಯ ಮೊದಲ ಅಧ್ಯಕ್ಷರಾಗಿದ್ದ ಶೈಖ್ ಝಾಯೆದ್ ಅವರ ವಿಯೋಗದ ಬಳಿಕ 2004 ನವೆಂಬರ್ ನಲ್ಲಿ ಎರಡನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ಶೈಖ್ ಖಲೀಫ ಅವರ ವಿಯೋಗಕ್ಕೆ ಮುಸ್ಲಿಂ ಜಗತ್ತು ಹಾಗೂ ಜಾಗತಿಕ ನಾಯಕರಿಂದ ಸಂತಾಪಗಳ ಸುರಿಮಳೆ ಹರಿದು ಬರುತ್ತಿದೆ. ಶೈಖ್ ಖಲೀಫರ ವಿಯೋಗದ ಪ್ರಯುಕ್ತ ಯುಎಇ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.
ಶೈಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ವಿಯೋಗಕ್ಕೆ ಎಸ್‌ಕೆಎಸ್‌ಎಸ್‌ಎಪ್ ಕರ್ನಾಟಕ ಯುಎಇ ಸಮಿತಿ ಅಧ್ಯಕ್ಷರಾದ ಸೈಯ್ಯದ್ ಅಸ್ಕರ್ ಅಲಿ ತಂಙಳ್ ಮತ್ತು ಅಧೀನ ಸಮಿತಿಗಳ ಪ್ರಮುಖರು ಅಗಾಧ ದುಃಖವನ್ನು ವ್ಯಕ್ತಪಡಿಸಿ ಸಂತಾಪವನ್ನು ಸೂಚಿಸಿದ್ದಾರೆ. ಮೃತರ ಮೇಲೆ ಎಲ್ಲಾ ದೀನಿ ಸಹೃದಯರು ಮಯ್ಯಿತ್ ನಮಾಝ್ ಮತ್ತು ವಿಶೇಷ ದುಆ ಕಾರ್ಯವನ್ನು ನೆರವೇರಿಸಬೇಕೆಂದು ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ