ಮಾ. 9-13: ಪೇರಮೊಗರು ಬದ್ರಿಯಾ ಜುಮಾ ಮಸೀದಿಯಲ್ಲಿ ಮಖಾಂ ಉರೂಸ್

ಮಾ. 9-13:  ಪೇರಮೊಗರು ಬದ್ರಿಯಾ ಜುಮಾ ಮಸೀದಿಯಲ್ಲಿ ಮಖಾಂ ಉರೂಸ್
republicday728
republicday468
republicday234

ಬಂಟ್ವಾಳ: ಪೇರಮೊಗರು ಬದ್ರಿಯಾ ಜುಮಾ ಮಸೀದಿಯಲ್ಲಿ ಅಂತ್ಯವಿಶ್ರಮಿಸುತ್ತಿರುವ ಹಝ್ರತ್ ಘೈಬಾನ್ ಶಾಹ್ ಫೀರ್ ವಲಿಯುಲ್ಲಾಹಿ (ಖ. ಸಿ)  ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು  ಬರುತ್ತಿರುವ ಉರೂಸ್ ಸಮಾರಂಭ ಮತ್ತು  ವಾರ್ಷಿಕ ಸ್ವಲಾತ್ ಕಾರ್ಯಕ್ರಮವು  ಮಾ. 9ರಿಂದ 13ರ ತನಕ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷರು ತಿಳಿಸಿದ್ದಾರೆ. ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಅಸ್ಸಯಿದ್ ಅಬ್ದುರ್ರಹ್ಮಾನ್ ಸಾದಾತ್ ಬಾಅಲವಿ ತಂಙಳ್ ಗುರುವಾಯನಕೆರೆಯವರ ಅಧ್ಯಕ್ಷತೆಯಲ್ಲಿ ಸಮಾರಂಭವು ನಡೆಯಲಿದ್ದು, ಉರೂಸಿನ ಉದ್ಘಾಟನಾ ಸಮಾರಂಭದ ದ್ವಜಾರೋಹಣ ವನ್ನು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಇಬ್ರಾಹಿಂ  ಹಾಜಿಯವರು ನೆರವೇರಿಸಲಿದ್ದಾರೆ ಎಂದು ಮಸೀದಿಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ