ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗ: ಹಾನಗಲ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯ

ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗ: ಹಾನಗಲ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯ

ಹಾನಗಲ್:‌ ಜಿದ್ದಾ ಜಿದ್ದಿನಿಂದ ಕೂಡಿದ್ದ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯ‌ ಫಲಿತಾಂಶ ಹೊರಬಂದಿದೆ. ಮುಖ್ಯಮಂತ್ರಿ ತವರು ಜಿಲ್ಲೆ ಹಾನಗಲ್‌ನಲ್ಲಿ ಬಿಜೆಪಿ ಮುಖಭಂಗ ಅನುಭವಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮುಖಭಂಗ ಅನುಬವಿಸಿದ್ದಾರೆ.ಹಾನಗಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ.

      ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ಎರಡೂ ಕ್ಷೇತ್ರಗಳಲ್ಲಿ ಮೂರನೇ ಪಕ್ಷವಾಗಿದ್ದ ಜೆಡಿಎಸ್‌ ಹೀನಾಯ ಹಿನ್ನಡೆ ಅನುಭವಿಸಿ ಠೇವಣಿ ಕಳೆದುಕೊಂಡಿದೆ. ಹಾನಗಲ್‌ ಕ್ಷೇತ್ರದಲ್ಲಿ ಜೆಡಿಎಸ್‌ ನಾಲ್ಕಂಕಿಯನ್ನೂ ತಲುಪಿಲ್ಲ.

      ಬಿಜೆಪಿ ಪ್ರತಿನಿಧಿಸುತ್ತಿದ್ದ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಬಿಜೆಪಿ ತೀವೃ ಮುಖಭಂಗ ಅನುಭವಿಸಿದೆ. ಹಾವೇರಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರ ತವರು ಕ್ಷೇತ್ರವೂ ಹೌದು. ಮುಖ್ಯಮಂತ್ರಿಗಳು ಹಾಗೂ ಇಡೀ ಸಚಿವ ಸಂಪುಟ ಹಾನಗಲ್‌ನಲ್ಲಿ ಬೀಡುಬಿಟ್ಟಿದ್ದರೂ ಕ್ಷೇತ್ರವನ್ನು ಉಳಿಸಿಕೊಳ್ಳಲಾಗಿಲ್ಲ. ಇದು ಒಂದು ರೀತಯಲ್ಲಿ ಮುಖ್ಯಮಂತ್ರಿಗಳಿಗೆ ಹಿನ್ನಡೆಯೇ ಸರಿ. ಬೊಮ್ಮಾಯಿಯವರು ಮುಖ್ಯಮಂತ್ರಿ ಆದ ನಂತರ ಇದು ಮೊದಲ ಚುನಾವಣೆ.

ಹಾನಗಲ್‌ ಕ್ಷೇತ್ರದಲ್ಲಿ ಮತಗಳಿಕೆ ವಿವರ:

ಶ್ರೀನಿವಾಸ್‌ ಮಾನೆ (ಕಾಂಗ್ರೆಸ್)‌ - 8̧̧̧̧7,113

ಶಿವರಾಜ್‌ ಸಜ್ಜನರ (ಬಿಜೆಪಿ) - 79,515

ನಿಯಾಜ್‌ ಶೇಕ್‌ (ಜೆಡಿಎಸ್)‌ 921

ಗೆಲುವಿನ ಅಂತರ:7,598

ಸಿಂದಗಿ ಕ್ಷೇತ್ರದಲ್ಲಿ ಮತಗಳಿಕೆ ವಿವರ:

ರಮೇಶ್‌ ಭೂಸನೂರ (ಬಿಜೆಪಿ) - 93,380

ಅಶೋಕ್‌ ಮನಗೂಳಿ (ಕಾಂಗ್ರೆಸ್)‌ - 62,292

ನಾಜಿಯಾ ಅಂಗಡಿ (ಜೆಡಿಎಸ್)‌ - 4,321

ಗೆಲುವಿನ ಅಂತರ: 31,088

      ಜೆಡಿಎಸ್‌ ಪ್ರತಿನಿಧಿಸುತ್ತಿದ್ದ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜೆಡಿಎಸ್ ಹೀನಾಯ ಪ್ರದರ್ಶನ ನೀಡಿದ್ದು, ಕೇವಲ 4,353 ಮತಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಕLೇದ ಬಾರಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಗಮನಾರ್ಹ ಸಾಧನೆ ಮಾಡಿದ್ದು, ಎರಡನೇ ಸ್ಥಾನದಲ್ಲಿ 62 ಸಾವಿರಕ್ಕಿಂತಲೂ ಅಧಿಕ ಮತಗಳನ್ನು ಪಡೆದು ಭರವಸೆ ಮೂಡಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಮನಗೂಳಿ ಜೆಡಿಎಸ್‌ನಿಂದ ವಲಸೆ ಬಂದವರಾದ್ದರಿಂದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಆಗದೇ ಇರುವುದು ಕಾಂಗ್ರೆಸ್‌ ಸOಲಿಗೆ ಕಾರಣ ಎಂದು ಅಭಿಪ್ರಾಯ ಪಡಲಾಗಿದೆ.

      

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ