ಮಹಿಳೆಯನ್ನು ನಗ್ನಗೊಳಿಸಿ ವಿಕೃತ ಮೆರೆದ ಖದೀಮರು: ನಾಲ್ವರ ಬಂಧನ

ಮಹಿಳೆಯನ್ನು ನಗ್ನಗೊಳಿಸಿ ವಿಕೃತ ಮೆರೆದ ಖದೀಮರು: ನಾಲ್ವರ ಬಂಧನ

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಮಹಿಳೆಯನ್ನು ನಗ್ನ ಗೊಳಿಸಿ ಅಂಗಾಂಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸಿರುವುದಲ್ಲದೆ, ಕಬ್ಬಿನದ ರಾಡಿನಿಂದ ಹಲ್ಲೆ ನಡೆಸಿ ಪೈಶಾಚಿಕತೆ ಮೆರೆಯಲಾಗಿದೆ.

      ಘಟನೆಯು 8-9 ತಿಂಗಳ ಹಿಂದೆಯೇ ನಡೆದಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ನಿಂಗರಾಜ್ ಭೀಮರಾಯ ಬೇವಿನಹಳ್ಳಿ, ಅಯ್ಯಪ್ಪ ಸಂಗಪ್ಪ ನಾಟೆಕಾರ್, ಭಿಮಾಶಂಕರ್ ಮಲ್ಲಯ್ಯ, ಶರಣು ಮಹಾದೇವಪ್ಪ ನಾಯಕೋಡಿ ಬಂಧಿತರು.

      ಯಾದಗಿರಿ-ಶಹಾಪುರ ಮಧ್ಯೆ ಹೆದ್ದಾರಿ ಬದಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಕುರಿತ ವೀಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಪೋಲೀಸರು, ವೀಡಿಯೋದಲ್ಲಿದ್ದ ಮಹಿಳೆಯನ್ನು ಪತ್ತೆ ಮಾಡಿ ಅವರ ಹೇಳಿಕೆಯ ಸಾರಾಂಶದ ಮೇಲೆ ಶಹಪುರ ಠಾಣಾ ಅಪರಾಧ ಸಂಖ್ಯೆ 212/2021 ಕಲಂ 354(b), 366, 394,376(d), 504,506 r/w 34 ಐಪಿಸಿ ಮತ್ತು 3(1)(w), 3(2)(v) SC/ST PA act ಅಡಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

      ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ