ಮಹಾತ್ಮ ಗಾಂಧೀಜಿ ಪುತ್ಥಳಿ ಮೇಲೆ ಬಿಜೆಪಿ ಬಾವುಟ:ಪ್ರತಿಭಟನೆ

ಮಹಾತ್ಮ ಗಾಂಧೀಜಿ ಪುತ್ಥಳಿ ಮೇಲೆ ಬಿಜೆಪಿ ಬಾವುಟ:ಪ್ರತಿಭಟನೆ

ಕೇರಳ, ಜನವರಿ13:  ಮಹಾತ್ಮ ಗಾಂಧೀಜಿ ಪುತ್ಥಳಿ ಮೇಲೆ ಬಿಜೆಪಿ ಬಾವುಟ ಹಾರಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಡಿವೈಎಫ್‌ಐ, ಸಿಪಿಐಎಂ, ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

     ಇತ್ತೀಚೆಗಷ್ಟೇ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಂದಳಂ ಮತ್ತು ಪಾಲಕ್ಕಾಡ್ ನಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿತ್ತು. ಇದೀಗ ಪಾಲಕ್ಕಾಡ್ ಪಂಚಾಯತಿ ಕಚೇರಿ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಬಿಜೆಪಿ ಬಾವುಟ ಹೊದಿಸಿರುವುದೂ ಅಲ್ಲದೆ, ಅಲ್ಲಲ್ಲಿ ಜೈ ಶ್ರೀ ರಾಮ್ ಎಂಬ ಬ್ಯಾನರ್ ಗಳೂ ಕಂಡುಬಂದಿವೆ.

      ಸ್ಥಳೀಯ ಪಂಚಾಯತಿ ಕಾರ್ಯದರ್ಶಿಯು ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 153 ಅನ್ವಯ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಸಿಕ್ಕಿದ್ದು, ವ್ಯಕ್ತಿಯೊಬ್ಬ ರಾತ್ರಿ ವೇಳೆ ಗಾಂಧಿ ಪ್ರತಿಮೆ ಹತ್ತಿ ಪಕ್ಷದ ಬಾವುಟ ಹೊದಿಸಿ, ಕೆಳಗಿಳಿದು ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಾಲಕ್ಕಾಡ್ ತಿರುನೆಲ್ಲೈ ಮೂಲದ ಬಿನೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ