ಮುಸ್ಲಿಂ ರಾಜಕೀಯದ ಪ್ರಬಲ ಪ್ರತಿಪಾದಕ
ಶ್ರೀ ಅಣ್ಣಾದೊರೈರವರನ್ನು ಕರೆದು ಮಣ್ಣಿನ ಮಕ್ಕಳ ಹೋರಾಟಕ್ಕೆ ನಕ್ಷಲಿಝಮ್ ಪರಿಹಾರವಲ್ಲ, ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕಾರ ತೆಕ್ಕೆಗೆ ಪಡೆಯುವುದೇ ಏಕ ಮಾತ್ರ ಪರಿಹಾರ ಎಂಬುದನ್ನು ಮನದಟ್ಟು ಮಾಡಿಸಿ ತನ್ನ ನೇತೃತ್ವದಲ್ಲಿಯೇ ದ್ರಾವಿಡ ಪಕ್ಷಕ್ಕೂ ನಾಂದಿ ಹಾಡಿದ್ದರು.

(ಲೇಖನ: ಇಬ್ರಾಹಿಂ ಎ.ಜೋಕಟ್ಟೆ)
ಇಂದು ಜೂನ್ 5. ಮುಸ್ಲಿಂ ರಾಜಕೀಯದ ಪ್ರಬಲ ಪ್ರತಿಪಾದಕ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗಿನ ಸ್ಥಾಪಕ ಖಾಯಿದೆ ಮಿಲ್ಲತ್ ಇಸ್ಮಾಯಿಲ್ ಸಾಹೇಬರ ಜನ್ಮದಿನ. ಭಾರತದ ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿ, ಡಾಕ್ಟರ್ ಬಿ.ಆರ್. ಅಂಬೆಡ್ಕರ್ ರವರ ಜೊತೆ ಸೇರಿಕೊಂಡು ಈ ರಾಷ್ಟ್ರದ ಸಂವಿಧಾನವನ್ನು ರೂಪಿಸಿದ ಸಂವಿಧಾನ ಶಿಲ್ಪಿ. ಈಗಿನ ಯುವ ಜನಾಂಗಕ್ಕೆ ಖಾಯಿದೆ ಮಿಲ್ಲತ್ ಒಬ್ಬ ಮುಸ್ಲಿಂ ಲೀಗಿನ ಸ್ಥಪಕ ಮಾತ್ರ. ಅವರ ವಿಚಾರದಾರೆಗಳ ಬಗ್ಗೆ ಅರಿವಿಲ್ಲ. ಎಷ್ಟು ವರ್ಷಗಳು ಕಳೆದರೂ ಅವರ ವಿಚಾರಧಾರೆಗಳು ನಿತ್ಯ ನೂತನ. ಅದು ಹಿಂದೆಂದಿಗಿಂತಲೂ ಈಗ ಹೆಚ್ಚು ಅನಿವಾರ್ಯ ಎಂದೆನಿಸುತ್ತಿದೆ. ಈ ಬಗ್ಗೆ ಒಂದು ಪುಟ್ಟ ವಿಮರ್ಶೆ.
ಅವಿಭಜಿತ ಭಾರತದ, ಮದ್ರಾಸ್ ಪ್ರಾಂತ್ಯ ವಿಧಾನಸಭಾ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿದ್ದ ಖಾಯಿದೆ ಮಿಲ್ಲತ್ ಮುಹಮ್ಮದ್ ಇಸ್ಮಾಯೀಲ್ ಸಾಹೇಬರು ಭಾರತೀಯ ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿದ್ದರು. ಅವರು ಸ್ವಾತಂತ್ರಕ್ಕಿಂತ ಮೊದಲು ಮದ್ರಾಸ್ ಪ್ರಾಂತ್ಯದ ಭಾರತೀಯ ಮುಸ್ಲಿಂ ಲೀಗಿನ ಅಧ್ಯಕ್ಷರಾಗಿದ್ದರು. ಸ್ವಾತಂತ್ರ್ಯಾ ನಂತರ ಕಾಂಗ್ರೇಸ್ಸಿನ ಹಿರಿಯ ನಾಯಕ ಅಬ್ದುಲ್ ಕಲಾಮ್ ಆಝಾದರು ಒಂದು ಸಭೆ ಕರೆದರು. ಆ ಸಭೆಯಲ್ಲಿ ʼಭಾರತೀಯ ಮುಸ್ಲಿಮರಿಗೆ ಕಾಂಗ್ರೇಸ್ಸ್ ಪಕ್ಷವೇ ಆಸರೆಯಾಗಲಿದ್ದು, ತಮ್ಮದೇ ಆದ ಬೇರೆ ರಾಜಕೀಯ ಪಕ್ಷದ ಅಗತ್ಯತೆ ಇರುವುದಿಲ್ಲʼ ಎಂಬ ತೀರ್ಮಾಣವನ್ನು ಕೈಗೊಳ್ಳುತ್ತಾರೆ. ಸಭೆಯಲ್ಲಿ ಭಾಗವಹಿಸಿದ್ದ ಖಾಯಿದೆ ಮಿಲ್ಲತ್ ಇಸ್ಮಾಯಿಲ್ ಸಾಹೇಬ್ ಈ ನಿರ್ಣಯವನ್ನು ವಿರೋಧಿಸಿ ಜಂ-ಇಯ್ಯತುಲ್ ಉಲಮಾ ನೇತೃತ್ವದಲ್ಲಿ ಸಭೆಯನ್ನು ಬಹಿಷ್ಕರಿಸಿದರು.
ಅದು1948 ರ ಮಾರ್ಚ್ ಹತ್ತು. ಇಸ್ಮಾಯಲ್ ಸಾಹೇಬರು ಮದ್ರಾಸ್ಸಿನಲ್ಲಿ ಸಮಾನ ಮನಸ್ಕ ಮುಸ್ಲಿಂ ನಾಯಕರುಗಳ ಸಭೆಯೊಂದನ್ನು ಕರೆಯುತ್ತಾರೆ. ಸ್ವತಂತ್ರ ಪೂರ್ವದಂತೆ, ಸ್ವಾತಂತ್ರ್ಯಾ ನಂತರವೂ, ಮುಸ್ಲಿಮರಿಗೆ ತಮ್ಮದೇ ಆದ ಪ್ರಾತಿನಿಧಿಕ ಸಂಘಟನೆಯ ಅಗತ್ಯ ಮಾತ್ರವಲ್ಲ, ಅನಿವಾರ್ಯ ಕೂಡಾ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅದರಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಎಂಬ ಮುಸ್ಲಿಂ ರಾಜಕೀಯ ಸಂಘಟನೆಗೆ ಬುನಾದಿ ಹಾಕಿದರು. (ಆಝಾದರ ಕಾಂಗ್ರೇಸ್ಸ್ ಈ ದೇಶದ ಮುಸ್ಲಿಮರಿಗೆ ಆಸರೆಯಾದ ಬಗ್ಗೆ ಆ ಪಕ್ಷದ ಸರಕಾರವೇ ರಚಿಸಿದ ಸಾಚಾರ್ ಸಮಿತಿ ಬಹಿರಂಗ ಪಡಿಸಿದೆ. ಇಲ್ಲಿಯೇ ನಮಗೆ ಇಸ್ಮಾಯೀಲ್ ಸಾಹೇಬರ ದೀರ್ಘ ದೃಷ್ಟಿಯ ಆಳ ಅರ್ಥವಾಗುವುದು.) ಈ ಸಂಘಟನೆಯನ್ನು ಕೇರಳ-ತಮಿಳುನಾಡಿಗೆ ಸೀಮಿತಗೊಳಿಸಿ ಕರುನಾಡ ಸಹಿತ ಭಾರತೀಯ ಮುಸ್ಲಿಮರು ಮತ್ತೆ ಮತ್ತೆ ತಪ್ಪೆಸಗುತ್ತಾ ಜಾತ್ಯತೀತತೆಯ ಮುಖವಾಡ ಧರಿಸಿರುವ ಗೋಮುಖವ್ಯಾಘ್ರಗಳನ್ನೇ ನಂಬುತ್ತಿರುವುದು ದುರಂತವೇ ಸರಿ.
1962-67 ರಲ್ಲಿ ಭಾರತೀಯ ರಾಜ್ಯಸಭೆ ಸದಸ್ಯರಾಗಿದ್ದ ಇಸ್ಮಾಯೀಲ್ ಸಾಹೇಬ್ 1962-67, 1967-70, ಮತ್ತು 1971-72 ರಲ್ಲಿ ಲೋಕಸಭಾ ಸದಸ್ಯರಾಗಿದ್ದರು. ತಮಿಳುನಾಡಿನ ಮಣ್ಣಿನ ಮಕ್ಕಳ ಪ್ರದೇಶಿಕ ಚಳುವಳಿ ದ್ರಾವಿಡ ಕಳಗಮ್ ಹಾದಿ ತಪ್ಪಿ ನಕ್ಷಲಿಝಮ್'ನತ್ತ ಮುಖಮಾಡಿದಾಗ ಶ್ರೀ ಅಣ್ಣಾದೊರೈರವರನ್ನು ಕರೆದು ಮಣ್ಣಿನ ಮಕ್ಕಳ ಹೋರಾಟಕ್ಕೆ ನಕ್ಷಲಿಝಮ್ ಪರಿಹಾರವಲ್ಲ, ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕಾರ ತೆಕ್ಕೆಗೆ ಪಡೆಯುವುದೇ ಏಕ ಮಾತ್ರ ಪರಿಹಾರ ಎಂಬುದನ್ನು ಮನದಟ್ಟು ಮಾಡಿಸಿ ತನ್ನ ನೇತೃತ್ವದಲ್ಲಿಯೇ ದ್ರಾವಿಡ ಪಕ್ಷಕ್ಕೂ ನಾಂದಿ ಹಾಡಿದ್ದರು.
ತಾನು ಪ್ರತಿನಿಧಿಸುವ ಮುಸ್ಲಿಂ ಲೀಗಿಗೆ ಸ್ಥಾನ-ಮಾನದ ಅಪೇಕ್ಷೆಯೇ ಇಲ್ಲದೆ ದ್ರಾವಿಡರ ಪಕ್ಷಕ್ಕೆ ಮುಸ್ಲಿಂ ಮಕ್ಕಳ ಬೇಷರತ್ ಬೆಂಬಲ ಕೊಟ್ಟು ತಮಿಳುನಾಡಿನ ಇತಿಹಾಸದಲ್ಲಿ ದ್ರಾವಿಡ ಪಕ್ಷ ಅಧಿಕಾರ ಗದ್ದುಗೆ ಏರುವ ಚಾರಿತ್ರಿಕ ಸನ್ನಿವೇಶ ನಿರ್ಮಿಸಿದರು. ಈ ರಾಷ್ಟ್ರ ಕಂಡ ಅದ್ಬುತ ನಾಯಕರಾಗಿದ್ದಾರೆ. ಇಸ್ಮಾಯಿಲ್ ಸಾಹೇಬ್. ದ್ರಾವಿಡ ಮಕ್ಕಳ ದ್ರಾವಿಡ ಪಕ್ಷ, ಮುಸ್ಲಿಂ ಮಕ್ಕಳ ಪಕ್ಷ ಮುಸ್ಲಿಂ ಲೀಗ್ ಹೊಂದಾಣಿಕೆ ಈ ರಾಷ್ಟ್ರದ ಇತರ ರಾಜ್ಯಗಳಿಗೂ ಮಾದರಿಯಾಗದಿರುವುದು ದುರಂತವೇ ಸರಿ. ಈ ಬಗ್ಗೆ ಕರುನಾಡ ಮುಸ್ಲಿಮರು, ಹಿಂದುಲಿದವರು ಯೋಚಿಸಬೇಕಾದ ಅನಿವಾರ್ಯತೆ ಹಿಂದೆಗಿಂತಲೂ ಈಗ ಅಧಿಕವಾಗಿದೆ ಎಂಬುದನ್ನು ಈ ನಾಡಿನ ಬುದ್ದಿ ಜೀವಿಗಳು (ಎಡ ಮತ್ತು ಬಲ ಪಂತದವರು ಹೊರತು ಪಡಿಸಿ) ಧಾರ್ಮಿಕ, ಸಾಮಾಜಿಕ ಮತ್ತು ರಾಜಕಿಯ ಮುಖಂಡರು ಅರ್ಥಮಾಡಿದರೆ ಮುಸ್ಲಿಮರ ರಾಜಕೀಯ ಪ್ರಾತಿನಿದ್ಯದ ಕೊರಗು ಪರಿಹಾರವಾಗುವುದು ಖಂಡಿತಾ.
ಸದ್ಯ ಕರುನಾಡ ಮಣ್ಣಲ್ಲಿ ನೂರಾರು ದಲಿತ ಸಂಘಟನೆಗಳು ಆಸ್ಥಿತ್ವದಲ್ಲಿದೆ. ಆ ದಲಿತ ಸಂಘಟನೆಗಳು ದಲಿತರನ್ನು ಸಮರ್ಪಕವಾಗಿ ಸಂಘಟಿಸುವಲ್ಲಿ ವಿಫಲವಾಗಿದೆ. (ಅವರು ಒಪ್ಪುತ್ತಾರೆ ಎಂದು ನಾನು ನಂಬುವುದಿಲ್ಲ) ಆ ಎಲ್ಲಾ ದಲಿತ ಸಂಘಟನೆಗಳು ತಮ್ಮ ಸಂಘಟನೆಗಳಲ್ಲಿ ದಲಿತರಿಗಿಂತಲೂ ಹೆಚ್ಚಾಗಿ ಮುಸ್ಲಿಮರಿಗೇ ಪ್ರಾಧಾನ್ಯತೆ ಕೊಡುವುದು ಹಿಂದಿನಿಂದಲೂ ನಡೆಯುತ್ತಾ ಬರುತ್ತಿದೆ. ಬಿಎಸ್ಪಿಯ ಆರಂಭದಲ್ಲಿ ಬೀದರಿನ ಝುಲ್ಪಿಕರ್ ಹಶ್ಮಿ ರಾಜ್ಯಾಧ್ಯಕ್ಷರಾಗಿ ಶಾಸಕರಾಗಿದ್ದು, ಡಿಎಂಎಸ್ ರಾಜ್ಯಾಧ್ಯಕ್ಷರಾಗಿ ಹತ್ತಾರು ವರ್ಷಗಳಿಂದ ಎ.ಜೆ ಖಾನ್ ಸಾಹೇಬರು ಮುನ್ನಡೆಸುವುದು, ಇತ್ತೀಚೆಗೆ ರಾಜ್ಯದಲ್ಲಿ ಸಂಘಟನಾ ಶಕ್ತಿಯನ್ನು ವೃದ್ದಿಸುತ್ತಿರುವ ಬೀಮ್ ಆರ್ಮಿಯಲ್ಲೂ ಮುಸ್ಲಿಂ ನಾಯಕರುಗಳೇ ತುಂಬಿರುವುದು ಕೆಲವು ಉದಾಹರಣೆ ಮಾತ್ರ. ಆದರೆ ದಕ್ಷಿಣ ಭಾರತದಲ್ಲಿ ಆಸ್ತಿತ್ವವೇ ಇಲ್ಲದ ಬಿಜೆಪಿ ಪಕ್ಷ ಕರುನಾಡ ಮಣ್ಣಲ್ಲಿ ಸರಕಾರದ ರಚನೆಗೆ ಲಿಂಗಾಯತರಿಗಿಂತಲೂ ಹೆಚ್ಚಾಗಿ ಈ ನಾಡಿನ ದಲಿತರ ಎಡಕೈ -ಬಲಕೈ ತೊಳಲಾಟ ಎಂಬುದೇ ವಾಸ್ತವ. (ಶ್ರೀನಿವಾಸ ಪ್ರಸಾದ್, ಜಿಗಜಿಣಗಿ, ರಾಮುಲು, ಜಾದವ್, ಲಿಂಬಾವಳಿ, ಜಾರಕಿಹೊಳಿ ಮುಂತದ ನೂರಾರು ಸ್ವಾರ್ಥ ದಲಿತ ನಾಯಕರುಗಳ (ಬಿಎಸ್ಪಿಯ ಮಹೇಶ್ ಹೊಸ ಸೇರ್ಪಡೆಯೂ ಸೇರಿದಂತೆ) ಕೃಪಾಕಟಾಕ್ಷವೇ ರಾಜ್ಯದಲ್ಲಿ ಸಂಘೀ ಸರಕಾರದ ಬುನಾದಿಗೆ ಕಾರಣ.) ಈ ಬಗ್ಗೆ ಚರ್ಚೆ ನಡೆಸುತ್ತಾ ಇನ್ನಷ್ಟು ವಿಷಯಗಳ ಬಗ್ಗೆ ಸಹೃದಯದೊಂದಿಗೆ ವಿಮರ್ಶೆ ನಡೆದರೆ ಕರುನಾಡಿನಲ್ಲಿ ಸಂಘೀ ಮನಸ್ಥಿಯ ವಿನಾಶದೊಂದಿಗೆ ಅಂಬೇಡ್ಕರರ ಪವಿತ್ರ ಸಂವಿಧಾನ ಪರವಿರುವ ವಿಚಾರವಂತರ ವಿಕಾಸಕ್ಕೆ ಕಾರಣವಾದೀತು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ