ಮುಸ್ಲಿಮರ ಮೇಲೆ  ಕಿಡಿಗೇಡಿಗಳಿಂದ ಹಲ್ಲೆ: ದ.ಕ.ಜಿಲ್ಲಾ ಮುಸ್ಲಿಮ್  ಒಕ್ಕೂಟ ಖಂಡನೆ

ಮುಸ್ಲಿಮರ ಮೇಲೆ  ಕಿಡಿಗೇಡಿಗಳಿಂದ ಹಲ್ಲೆ: ದ.ಕ.ಜಿಲ್ಲಾ ಮುಸ್ಲಿಮ್  ಒಕ್ಕೂಟ ಖಂಡನೆ
republicday728
republicday468
republicday234

ಮಂಗಳೂರು: ಕೋಮು ಸೂಕ್ಷ್ಮವೆನಿಸಿದ  ದ.ಕ.ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಸಮಾಜ ಘಾತುಕ ಶಕ್ತಿಗಳು ಮುಸ್ಲಿಮರ ಮೇಲೆ ಹಲ್ಲೆ ನಡೆಸುತ್ತಿದ್ದು, ಇಂತಹ ಘಟನೆಗಳನ್ನು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟ ತೀವೃವಾಗಿ ಖಂಡಿಸಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದೆ.

     ನಿರಂತರವಾಗಿ ಅನೈತಿಕ ಪೋಲೀಸ್ ಗಿರಿ ನಡೆಸುತ್ತಿರುವ ಶಕ್ತಿಗಳು ಬೇರೆ ಬೇರೆ ರೂಪದಲ್ಲಿ ಬೇರೆ ಸ್ಥಳಗಳಲ್ಲಿ ಮುಸ್ಲಿಮರ ಮೇಲೆ ಧಾಳಿ ನಡೆಸುತ್ತಿದೆ. ಈ ಮೂಲಕ ಜಿಲ್ಲೆಯ ಶಾಂತಿ ಕದಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಮಾಜಿ ಮೇಯರ್ ಅಶ್ರಫ್ ರವರು ಆರೋಪಿಸಿದ್ದಾರೆ.
      ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಯುವಕನಿಗೆ ಸುರತ್ಕಲ್ ನಲ್ಲಿ ಲವ್ ಜಿಹಾದ್ ಹೆಸರಲ್ಲಿ ಮಾರಣಾಂತಿಕ ಹಲ್ಲೆ ನಡೆಸಲಾಯಿತು. ಬೆಳ್ತಂಗಡಿ ಸಮೀಪದ ಮೇಲಂತಬೆಟ್ಟುವಿನಲ್ಲಿ ಖಾಲಿ  ಪಿಕಪ್ ವಾಹನದಲ್ಲಿ ಹೋಗುತ್ತಿದ್ದ ಯುವಕರಿಗೆ  ಗೋ ಕಳ್ಳ ಸಾಗಾಟದ ಹೆಸರಲ್ಲಿ ಮಾರಣಾಂತಿಕವಾಗಿ ಥಳಿಸಲಾಯಿತು. ಫರಂಗಿಪೇಟೆಯ ಮಸೀದಿಯೊಂದಕ್ಕೆ ನುಗ್ಗಿದ ಕೆಲ ಗೂಂಡಾಗಳು ವಿನಾಕಾರಣ ಅಲ್ಲಿನ ಧರ್ಮಗುರುಗಳಿಗೇ ಹಲ್ಲೆ ನಡೆಸಿದರು. ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ವ್ಯಕ್ತಿಗೆ ಪಂಪುವೆಲ್ ನಲ್ಲಿ ಬಸ್ಸಿನಿಂದ ಹೊರಗೆಳೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದರು.
      ಇಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇದ್ದು ಜನಸಾಮಾನ್ಯರು ಆತಂಕಕ್ಕೀಡಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪವಿತ್ರ ರಂಝಾನ್ ತಿಂಗಳು ಪ್ರಾರಂಭವಾಗಲಿದ್ದು ಕಿಡಿಗೇಡಿಗಳು ಕೋಮುಗಲಭೆ ನಡೆಸುವ ಬಗ್ಗೆ ಸಂಚು ರೂಪಿಸಿದ ಶಂಕೆ ವ್ಯಕ್ತವಾಗುತ್ತಿದೆ. 
     ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾದರೆ ಮಾತ್ರ ಇಂತಹ ಘಟನೆಗಳನ್ನು ನಿಯಂತ್ರಿಸಲು ಸಾಧ್ಯ. ಸಮಾಜಘಾತುಕ ಶಕ್ತಿಗಳು ಎಷ್ಟೇ ಬಲಿಷ್ಟವಾಗಿದ್ದರೂ ಅವರನ್ನು ಕಾನೂನಿನ ತೆಕ್ಕೆಗೆ ತಂದು ನಿಯಂತ್ರಿಸಬೇಕಾದುದು ಪೋಲೀಸರ ಜವಾಬ್ದಾರಿ ಎಂದು ಸಂಘಟನೆ ಅಭಿಪ್ರಾಯ ಪಟ್ಟಿದೆ.
     ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಪೋಲೀಸ್ ಆಯುಕ್ತರಿಗೆ ಒಕ್ಕೂಟವು ದೂರು ಸಲ್ಲಿಸಿದೆ.
       ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಮಾಜಿ ಮೇಯರ್ ಕೆ.ಅಶ್ರಫ್, ಸುರತ್ಕಲ್ ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ, ಸುರತ್ಕಲ್ ಮುಹಿಯುದ್ದೀನ್  ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ಅಝೀಝ್, ಆಹಾರ ಸಂರಕ್ಷಣಾ ಕಾರ್ಯದರ್ಶಿ ಬಶೀರ್ ಹೊಕ್ಕಾಡಿ, ರಾಜ್ಯ ಗೌರವ ಸಾಧಕ ಸನ್ಮಾನಿತ ಸೋಶಿಯಲ್ ಫಾರೂಕ್,  ನವಾಝ್ ಚೊಕ್ಕಬೆಟ್ಟು, ಅಖಿಲ ಭಾರತ ಬ್ಯಾರಿ ಪರಿಷತ್ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಕೆ.ಎಸ್.ಅಬೂಬಕ್ಕರ್ ಪಲ್ಲಮಜಲು, ಬಂದರ್ ಮೀನು ಮಾರಾಟಗಾರರ ಸಂಘದ ಅಧ್ಯಕ್ಷರಾದ ಸಿ.ಎಮ್. ಮುಸ್ತಫಾ, ವಕೀಲರಾದ ಮುಹಮ್ಮದ್ ಹನೀಫ್, ಅದ್ದು ಕೃಷ್ಣಾಪುರ, ಅಹ್ಮದ್ ಬಾವ ಬಜಾಲ್, ಎಸ್.ಡಿ ಪಿ.ಐ. ಮುಖಂಡ ಅಬೂಬಕ್ಕರ್ ಕುಳಾಯಿ, ಸಾಮಾಜಿಕ ಮುಂದಾಳು ಮಟನ್ ಮೋನಾಕ, ಕೆ.ಎಮ್. ಶೆರೀಫ್, ಶೆರೀಫ್ ದೇರಳಕಟ್ಟೆ, ಸಮೀರ್ ಆರ್.ಕೆ. ಅಳೇಕಲ, ನವಾಝ್ ಚೊಕ್ಕಬೆಟ್ಟು,  ಹೈದರ್ ಸೌದಿ ಕೃಷ್ಣಾಪುರ, ನೌಷಾದ್ ಬಂದರ್ ಮೊದಲಾದವರು ಉಪಸ್ತಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ