ಮಸೀದಿಗಳಲ್ಲಿ ಕೋವಿಡ್ ಸೆಂಟರ್ ಕುತಂತ್ರ ವಿಫಲಗೊಳಿಸಿ: ಇಬ್ರಾಹಿಂ ಅಹ್ಮದ್‌ ಜೋಕಟ್ಟೆ

ಮಸೀದಿಗಳಲ್ಲಿ ಕೋವಿಡ್ ಸೆಂಟರ್ ಕುತಂತ್ರ ವಿಫಲಗೊಳಿಸಿ: ಇಬ್ರಾಹಿಂ ಅಹ್ಮದ್‌ ಜೋಕಟ್ಟೆ

ಬೆಂಗಳೂರು: ಇತ್ತೀಚೆಗೆ ಮುಸೀದಿಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಪರಿವರ್ತಿಸುವ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿವೆ. ಇದು ಖಂಡಿತಾ ಪ್ರಾಯೋಗಿಕವಾಗಲಾರದು ಎಂದು ಸಾಮಾಜಿಕ ಹೋರಾಟಗಾರ ಮುಸ್ಲಿಂ ಲೀಗ್‌ ಮುಖಂಡ ಇಬ್ರಾಹಿಂ ಅಹ್ಮದ್‌ ಜೋಕಟ್ಟೆ ಅಭಿಪ್ರಾಯಪಟ್ಟರು.

       ಪ್ರಮುಖ ನಗರಗಳೂ ಸೇರಿ ರಾಜ್ಯದಾದ್ಯಂತ ಅರೆಬಿಕ್ ಕಾಲೇಜುಗಳು, ನೂರಾರು ಇಂಜಿನಿಯರಿಂಗ್, ಮೆಡಿಕಲ್ ಮತ್ತು ಸ್ನಾನಕೋತ್ತರ ಕಾಲೇಜುಗಳಿವೆ. ಇಂತಹ ಕಾಲೇಜುಗಳಲ್ಲಿ ಅಡುಗೆ ಕೋಣೆಗಳು, ಸಾಕಷ್ಟು ಶೌಚಾಲಯಗಳು, ಪ್ರತ್ಯೇಕ ವಾಸಕ್ಕೆ ವ್ಯವಸ್ಥಗಳು ಎಲ್ಲವೂ ಇದೆ.  ಆದ್ದರಿಂದ ಅವುಗಳನ್ನು  ಕೋವಿಡ್ ಸೆಂಟರ್ ಆಗಿ ಪರಿವರ್ತಿಸುವುದೇ ಸೂಕ್ತ ಎಂದು ಅವರು ಹೇಳಿದರು.

      ಆರಾಧನಾ ಕೇಂದ್ರಗಳನ್ನು ಸದ್ಯದ ಲಾಕ್ ಡೌನ್ ಕಾರಣದಿಂದಷ್ಟೇ ಅದನ್ನು ಸಾರ್ವಜನಿಕರಿಗೆ ನಿರ್ಭಂದಿಸಲ್ಪಟ್ಟಿದೆ. ದಿನ ನಿತ್ಯದ ಪೂಜಾ ಕರ್ಮಗಳನ್ನು ನಡೆಸಲು ಕೋವಿಡ್‌-19ರ ನಿಯಮಾನುಸಾರ ದೇವಾಲಯಗಳ ಅರ್ಚಕರಿಗೂ, ಮಸೀದಿಗಳ ಇಮಾಮರಿಗೂ, ಚರ್ಚುಗಳ ಪಾದ್ರಿಗಳಿಗೂ ಅವಕಾಶ ಒದಗಿಸಿದೆ. ಇದರಂತೆ ಎಲ್ಲಾ ಪೂಜಾ ಸ್ಥಳಗಳೂ ಕಾರ್ಯ ನಿರ್ವಹಿಸುತ್ತಿದೆ.  ಶೀಘ್ರದಲ್ಲಿಯೇ ಲಾಕ್ ಡೌನ್ ಕೊನೆಗೊಳ್ಳಲಿದ್ದು ಮಂದಿರ, ಮಸೀದಿಗಳೂ ಸಾರ್ವಾಜನಿಕರಿಗೆ ಮತ್ತೆ ತೆರೆದುಕೊಳ್ಳಲಿದೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಹಿಂದಿನಂತೆಯೇ ಆರಂಭವಾಗಲಿದೆ. ಈಗಿರುವ  ಇಮಾಮರುಗಳು ನಿರ್ವಹಿಸುತ್ತಿರುವ ಐದು ಹೊತ್ತಿನ ನಮಾಝುಗಳನ್ನು ಮೊಟಕುಗೊಳಿಸಿ ಮಸೀದಿಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಪರಿವರ್ತಿಸಲ್ಪಟ್ಟರೆ ಅದು ವಿಶ್ವಾಸಿಗಳಿಗೆ ಮಾಡುವ ಮಹಾ ದ್ರೋಹವಾಗಿರುತ್ತದೆ. ಕೋವಿಡ್‌ ಕೇಂದ್ರಗಳಾಗಿ ಮಾರ್ಪಡಿಸಿದ ಮಸೀದಿಗಳು ಲಾಕ್‌ ಡೌನ್‌ ಮುಗಿದರೂ ಬೇಗನೆ ಧಾರ್ಮಿಕ ವಿಧಿವಿಧಾನಗಳಿಗೆ ಬಿಟ್ಟು ಕೊಡಲು ಸಾದ್ಯವಾಗದೆ ಇರಬಹುದು. ಇದರಿಂದ ಪರಿಸರದ ವಿಶ್ವಾಸಿಗಳ ದೈನಂದಿನ ಧಾರ್ಮಿಕ ವಿಧಿಗಳಿಗೆ ಅಡಚಣೆಯಾಗಲಿದೆ.

     ಅದೂ ಅಲ್ಲದೆ ಮಸೀದಿಗಳು ಪುಣ್ಯಸ್ಥಳ. ಮಸೀದಿಗಳ ಪ್ರವೇಶಕೂ ಕೆಲವು ಮಾನದಂಡಗಳಿವೆ. ಕೆಲವು ರೀತಿಯ ಅಶುದ್ದಿಯುಳ್ಳವರು ಮಸೀದಿಗಳನ್ನು ಪ್ರವೇಶಿಸುವಂತಿಲ್ಲ. ಮಸೀದಿಗಳು ಕೋವಿಡ್‌ ಕೇಂದ್ರವಾದರೆ ಮಸೀದಿಗಳ ಪಾವಿತ್ರತೆ ಹಾಳಾಗಬಹುದು . ಸದ್ಯಕ್ಕಂತೂ ಮಸೀದಿಗಳನ್ನೂ ಕೋವಿಡ್‌ ಕೇಂದ್ರಗಳನ್ನಾಗಿ ಮಾರ್ಪಡಿಸಬೇಕಾದ ತುರ್ತು ಅಗತ್ಯತೆ ಇಲ್ಲವೇ ಇಲ್ಲ. ರಾಜ್ಯ ಸರಕಾರ ಕೋವಿಡ್‌ ನಿಯಂತ್ರಣಕ್ಕೂ ಶ್ರಮಿಸುತ್ತಿದ್ದು, ಸುಖಾ ಸುಮ್ಮನೆ ಮಸೀದಿಗಳನ್ನು ಕೋವಿಡ್‌ ಕೇಂದ್ರವಾಗಿ ಮಾರ್ಪಡಿಸುವ ಪ್ರಯತ್ನಗಳನ್ನು ಕೈ ಬಿಡಬೇಕು ಎಂದು ಅವರು ಆಗ್ರಹಿಸಿದರು.

      ಇನ್ನು ಮಂಗಳೂರಿನಂತಹ ಸುನ್ನಿಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ನೂತನ ವಾದವನ್ನು ಮಂಡಿಸುತ್ತಿರುವ ಕೆಲವರು ಒಳ ನುಸುಳಲು ಇದೇ ಸೂಕ್ತ ಸಮಯವೆಂದು ಕುತಂತ್ರಗಳನ್ನು ಹೆಣೆಯುತ್ತಿದ್ದಾರೆ.  ಮಸೀದಿಗಳ ಪದಾಧಿಕಾರಿಗಳೇ ಅಲ್ಲದ ಕೆಲವರು ಮಸೀದಿಗಳ ಅಸೋಶಿಯೇಷನ್‌ ಎಂದು ರಚಿಸಿಕೊಂಡು ಸಾರ್ವಜನಿಕರನ್ನು‌ ಹಾಗೂ ಮುಗ್ಧ ಗ್ರಾಮೀಣ ಮಸೀದಿಗಳ ಪದಾಧಿಕಾರಿಗಳನ್ನು ವಂಚಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಸಮೂಹದ ದಾರ್ಮಿಕ ಗುರುಗಳು, ಮುತವಲ್ಲಿ ಪ್ರಮುಖರು ಮತ್ತು ಆಡಳಿತ ಮಂಡಳಿಗಳು ಯೋಚಿಸಬೇಕು. ತುಟಿಬಿಚ್ಚಿ ತೀರ್ಮಾನಗಳನ್ನು ಹೊರ ಹಾಕಬೇಕು. ಸರಕಾರ ಕೋವಿಡ್‌ ನಿಯಂತ್ರಿಸಲು ನಡೆಸುತ್ತಿರುವ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತು ಇಂತಹ ಗೊಂದಲ ಉಂಟು ಮಾಡುವವರನ್ನು ದೂರೀಕರಿಸಬೇಕು ಎಂದು ಅವರು ವಿನಂತಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ