ಮಿಷನ್ A+ ಯಶಸ್ಸುಗೊಳಿಸಲು ಸಜ್ಜಾಗಿ - ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್

ಮಿಷನ್ A+ ಯಶಸ್ಸುಗೊಳಿಸಲು ಸಜ್ಜಾಗಿ - ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್
ಮಿಷನ್ A+ ಯಶಸ್ಸುಗೊಳಿಸಲು ಸಜ್ಜಾಗಿ - ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್  ಉಪ ಸಮಿತಿಗಳಲ್ಲಿ ಒಂದಾದ ಟ್ರೆಂಡ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ  ಲೀಡರ್ಸ್ ಮೀಟ್ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಬಿ.ಸಿರೋಡ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  ನಡೆಯಿತು. 
      ಶರೀಫ್ ಅಝ್ಹರಿ ದುಆ ನೇರವೇರಿಸುವುದರೊಂದಿಗೆ ಚಾಲನೆ ನೀಡಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಟ್ರೆಂಡ್  ಜಿಲ್ಲಾಧ್ಯಕ್ಷ ಅಬ್ದುಲ್ ಸಮದ್ ಸಾಲೆತ್ತೂರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೋವಿಡ್ ದುರಂತ ಕಾಲದಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ಉತ್ತೇಜಿಸುವ ಸಲುವಾಗಿ  ಜಾರಿಗೆ ತಂದಿರುವ ಮಿಷನ್ A+ ಕಾರ್ಯಕ್ರಮ ಮತ್ತು ಸ್ಮೈಲ್ ಯೋಜನೆಯ ಕುರಿತು ವಿವರಿಸಿದರು.
      ಟ್ರೆಂಡ್ ಕೇಂದ್ರ ಸಮಿತಿ ಅಧ್ಯಕ್ಷ ರಶೀದ್ ಮಾಸ್ಟರ್ ಕೊಡಿಯೂರ ಜಿಲ್ಲಾ ಟ್ರೆಂಡ್ ನಾಯಕರುಗಳಿಗೆ ಮನಮೋಹಕ ಶೈಲಿಯಲ್ಲಿ ತರಬೇತಿ ನೀಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಇರುವ ಸೇವೆಯ ಸಾಧ್ಯತೆಯ ಕುರಿತು ಮಾಹಿತಿ ನೀಡಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರನ್ನು ಗುರಿ ತಲುಪಿಸಬೇಕಾದುದು ನಮ್ಮ ಕರ್ತವ್ಯ ಎಂದರು. ಮಕ್ಕಳಿಗೆ ಯಾವುದೇ ಸಮಯದಲ್ಲಿ ನಮ್ಮ ಯಾವುದೋ ಒಂದು ಮಾತು ಪ್ರೇರಣೆಯಾಗಿ ಅವರ ಜೀವನವೇ ಬದಲಾಗಬಹುದು. ಆದ್ದರಿಂದ ಸದಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಗುರಿಯೆಡೆಗೆ ತಲುಪಲು ಪ್ರೇರಕರಾಗಬೇಕು ಎಂದು ಹೇಳಿದರು. 
      ಟ್ರೆಂಡ್ ಕೇಂದ್ರ ಸಮಿತಿಯ ರಾಷ್ಟ್ರೀಯ ಪ್ರಾಜೆಕ್ಟ್ ಕಾರ್ಡಿನೇಟರ್ ಇಕ್ಬಾಲ್ ಬಾಳಿಲ ದಿಕ್ಸೂಚಿ ಭಾಷಣ ಮಾಡುತ್ತಾ ಮಿಷನ್ A+ ಕಾರ್ಯಕ್ರಮ ವಿಜಯಿಯಾಗಲು ಪ್ರತೀ ಶಾಖೆಯ ಟ್ರೆಂಡ್ ಕಾರ್ಯದರ್ಶಿಗಳು ಸಕ್ರಿಯವಾಗಿ ರಂಗಕ್ಕಿಳಿಯಬೇಕು ಎಂದು ಕರೆ ನೀಡಿದರು.
      ಅಫ್ಹಮ್ ಅಲಿ ತಂಙಳ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ  ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ  ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರೆಂಡ್ ಹೊಸ ಹೊಸ ಯೋಜನೆಗಳೊಂದಿಗೆ ಸಕ್ರಿಯವಾಗಿದ್ದು ಅದನ್ನು ಜಾರಿಗೊಳಿಸಲು SKSSFನ ಎಲ್ಲಾ ಕಾರ್ಯಕರ್ತರು ಸಜ್ಜಾಗಬೇಕು. ಇದು ಮುನ್ನಡೆ ಯಾತ್ರೆಯ ಮುಂದುವರಿದ ಭಾಗ ಎಂದು ಸಿದ್ದೀಕ್ ಅಬ್ದುಲ್ ಖಾದರ್ ಹೇಳಿದರು. ಅಪ್ಹಾಮ್ ತಂಙಳ್ ಮಾತನಾಡಿ ಉನ್ನತ ವಿದ್ಯಾಭ್ಯಾಸದ ವಿವಿಧ ವಲಯಗಳನ್ನು ಪರಿಚಯಿಸಿದರು.

     ವೇದಿಕೆಯಲ್ಲಿ, ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ
ಕೋಶಾಧಿಕಾರಿ ಯು.ಪಿ ಬಶೀರ್ ಬೆಳ್ಳಾರೆ, ವೈಸ್ ಕನ್ವೀನರ್ ನಬ್ಝೀರ್,  ಸಿದ್ದೀಕ್ ನಾವೂರ್, ಅಡ್ವಕೇಟ್ ನೌಶಾದ್ ಅನ್ಸಾರಿ, ಶಫೀಕ್ ಕಟ್ಟತ್ತಿಲ, ಯೂಸುಫ್ ಮುಂಡೋಳೆ ಮುಂತಾದವರು ಉಪಸ್ಥಿತರಿದ್ದರು.
      ಇದೇ ಸಂದರ್ಭದಲ್ಲಿ ಮದ್ರಸ ಅಧ್ಯಾಪಕರಾಗಿದ್ದುಕೊಂಡು ಉನ್ನತ ಶಿಕ್ಷಣದ ಮೂಲಕ ನ್ಯಾಯವಾದಿಯಾಗಿ ಸೇವಾ ರಂಗಕ್ಕಿಳಿದ ನ್ಯಾಯವಾದಿ ನೌಷಾದ್ ಅನ್ಸಾರಿಯವರನ್ನು ಟ್ರೆಂಡ್ ವತಿಯಿಂದ ಸನ್ಮಾನಿಸಲಾಯಿತು.

ಕ್ಯಾಂಪಸ್ ವಿಂಗ್ ಹೊಸ ಯೋಜನೆಗೆ ಚಾಲನೆ:
ಕ್ಯಾಂಪಸ್ ವಿಂಗ್ ವಿದ್ಯಾರ್ಥಿಗಳ ವಿವರಗಳನ್ನು ಸಂಗ್ರಹಿಸಿಡುವ ಕನೆಕ್ಟ್ ಎಂಬ ಹೊಸ ಯೋಜನೆಗೆ ರಷೀದ್ ಮಾಸ್ಟರ್ ಕೊಡಿಯೂರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ವಿಂಗ್ ರಾಜ್ಯ ಸಂಚಾಲಕ ಸಯ್ಯದ್ ಮುನಾಝ್ ಹಾಗೂ ಕ್ಯಾಂಪಸ್ ವಿಂಗ್ ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಯಾಸರ್ ಅರಾಫತ್ ಕೊಲ್ನಾಡು ಹಾಜರಿದ್ದರು.
      ಜಿಲ್ಲಾ ಕನ್ವೀನರ್ ಅಬ್ದುಸ್ಸಲಾಂ ಸ್ವಾಗತಿಸಿ ವಂದಿಸಿದರು. ವೈಸ್ ಚೈರ್ಮೆನ್ ಅಡ್ವಕೇಟ್ ಬದ್ರುದ್ದೀನ್ ಕುಕ್ಕಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ