ಮೊಳಗಲಿದೆ ಸೌಹಾರ್ದತೆಯ ಸಂದೇಶ: ನಾಳೆ ಬಿ.ಸಿ.ರೋಡಿನಲ್ಲಿ ಮಾನವ ಸರಪಳಿ

ಮೊಳಗಲಿದೆ ಸೌಹಾರ್ದತೆಯ ಸಂದೇಶ: ನಾಳೆ ಬಿ.ಸಿ.ರೋಡಿನಲ್ಲಿ ಮಾನವ ಸರಪಳಿ
republicday728
republicday468
republicday234

ಬಂಟ್ವಾಳ: ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕೇತ ಎಂಬ ಘೋಷ ವಾಕ್ಯದೊಂದಿಗೆ  ಗಣರಾಜ್ಯೋತ್ಸವದ ಅಂಗವಾಗಿ SKSSF ಹಮ್ಮಿಕೊಂಡಿರುವ ಮಾನವ ಸರಪಳಿಯು ಬಿ.ಸಿ.ರೋಡಿನಲ್ಲಿ ನಡೆಯಲಿದೆ ಎಂದು SKSSF ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಳಿಸಿದ್ದಾರೆ.

     ಪ್ರತಿ ವರ್ಷದಂತೆ ಈ ಬಾರಿಯೂ ದೇಶದಾದ್ಯಂತ ಸುಮಾರು 200 ಕೇಂದ್ರಗಳಲ್ಲಿ  ಕಾರ್ಯಕ್ರಮವು ಜರುಗಲಿದೆ. ಗಣರಾಜ್ಯೋತ್ಸವದಂದು ಸಾಯಂಕಾಲ 4 ಗಂಟೆಗೆ ಎಲ್ಲಾ ಕೇಂದ್ರಗಳಲ್ಲೂ ಏಕಕಾಲದಲ್ಲಿ ಈ ಮಾನವ ಸರಪಳಿ ಕಾರ್ಯಕ್ರಮವು ಜರುಗಲಿದೆ.
     ಯುವ ಸಮೂಹದಲ್ಲಿ ರಾಷ್ಟ್ರೀಯತೆ, ಭಾವೈಕ್ಯತೆ ಸಾಹೋದರ್ಯತೆಯನ್ನು ತುಂಬಿ ಮುಂದಿನ ತಲೆಮಾರಿಗೆ ದೇಶಪ್ರೇಮವನ್ನು ಹಂಚಿಕೊಡುವ ಕೆಲಸವನ್ನು SKSSF ಮಾಡುತ್ತಿದೆ.
      ದ.ಕ.ಜಿಲ್ಲೆಯಲ್ಲಿ ಈ ಬಾರಿ ಬಿ.ಸಿ.ರೋಡಿನ ಪೂಂಜಾ ಮೈದಾನದಲ್ಲಿ ಮಾನವ ಸರಪಳಿ ಕಾರ್ಯಕ್ರಮವು SKSSF ಜಿಲ್ಲಾ ಅಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಜರುಗಲಿದೆ‌. ಅಂದು ಸಾಯಂಕಾಲ 3.15ಕ್ಕೆ ಮಿತ್ತಬೈಲು ಉಸ್ತಾದರ ಖಬರ್ ಝಿಯಾರತ್ ನೊಂದಿಗೆ ನಕ್ಷಬಂಧಿ ನಗರದಿಂದ ಆರಂಭವಾಗುವ ಕಾಲ್ನಡಿಗೆ ಜಾಥಾವು ಸಮ್ಮೇಳನ ನಗರ ಮಿತ್ತಬೈಲು ಉಸ್ತಾದ್ ವೇದಿಕೆಗೆ ತಲುಪಲಿದೆ.
      ಕಾರ್ಯಕ್ರಮದಲ್ಲಿ ಉನ್ನತ ಮಟ್ಟದ ಉಲಮಾಗಳೂ, ಸಾಮಾಜಿಕ, ಧಾರ್ಮಿಕ  ನೇತಾರರೂ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ