ಮಿಲಿಟರಿ ವಲಯವಾಗಿ ಪರಿವರ್ತನೆಗೊಂಡ ಅಮೆರಿಕ ಕ್ಯಾಪಿಟಲ್

ಮಿಲಿಟರಿ ವಲಯವಾಗಿ ಪರಿವರ್ತನೆಗೊಂಡ ಅಮೆರಿಕ ಕ್ಯಾಪಿಟಲ್
republicday728
republicday468
republicday234

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಅಮೆರಿಕ ರಾಜಧಾನಿ ಹಾಗೂ ಸುತ್ತು ಮುತ್ತಲಿನ ಪ್ರದೇಶಗಳನ್ನು ಮಿಲಿಟರಿ ವಲಯವನ್ನಾಗಿ ಪರಿವರ್ತಿಸಲಾಗಿದೆ.

     ಅಮೇರಿಕದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಗೊಂಡ ಜೋ ಬೈಡನ್ ಇದೇ ಜನವರಿ 20ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.  ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಇತ್ತೀಚೆಗಷ್ಟೇ ಕ್ಯಾಪಿಟಲ್ ಕಟ್ಟಡಕ್ಕೆ ದಾಳಿ ನಡೆಸಿ ಹಿಂಸಾಚಾರ ನಡೆಸಿದ್ದರು. ಇದು ಜಾಗತಿಕ ಮಟ್ಟದಲ್ಲಿ ಅಮೇರಿಕ ವರ್ಚಸ್ಸಿಗೆ ಕಪ್ಪು ಮಸಿ ಬಳಿದಿತ್ತು. ಅಮೆರಿಕದ ಆಂತರಿಕ ಭದ್ರತೆಯನ್ನೇ ಅಲುಗಾಡಿಸಿತ್ತು. ಈಗ ಕ್ಯಾಪಿಟಲ್ ಗಲಭೆಯ ಹಿನ್ನೆಲೆಯಲ್ಲಿ ಗರಿಷ್ಠ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.

    ಶಸ್ತ್ರಸಜ್ಜಿತ 25,000 ನ್ಯಾಷನಲ್ ಗಾರ್ಡ್ ಪಡೆಗಳನ್ನು ನಿಯೋಜಿಸಲಾಗುವುದು. ಕ್ಯಾಪಿಟಲ್ ಸುತ್ತುಮುತ್ತಲಿನ ಪ್ರತಿಯೊಂದು ಪ್ರದೇಶದ ಮೇಲೂ ಸೂಕ್ಷ್ಮ ನಿಗಾ ವಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

     ಅಮೆರಿಕದಲ್ಲಿ ಐತಿಹಾಸಿಕ 'ಸಿವಿಲ್ ವಾರ್' ಬಳಿಕ ಇದೇ ಮೊದಲ ಬಾರಿಗೆ ಭಾರಿ ಭದ್ರತೆ ಏರ್ಪಡಿಸಲಾಗುತ್ತಿದೆ. ಅಮೇರಿಕ ಇಂತಹ ಪರಿಸ್ಥಿತಿಯನ್ನು ಎಂದಿಗೂ ಎದುರಿಸಿರಲಿಲ್ಲ. ಅಮೆರಿಕ ಮೇಲೆ ದಾಳಿ ನಡೆದ 9/11ರ  ವೇಳೆಯಲ್ಲೂ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಟ್ರಂಪ್ ಬೆಂಬಲಿಗರಿಂದ ಬೃಹತ್ ರ‍್ಯಾಲಿ ಭೀತಿಯ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ನಲ್ಲಿ ಗರಿಷ್ಠ ಭದ್ರತೆಯನ್ನು ಏರ್ಪಡಿಸಲಾಗುತ್ತಿದೆ.

     ಈ ಮಧ್ಯೆ ಪ್ರತಿಭಟನಾಕಾರರು ಕೆಲವು ನಗರಗಳಲ್ಲಿ ಒಗ್ಗೂಡಲಾರಂಭಿಸಿದ್ದಾರೆ ಎಂಬುದೂ ವರದಿಯಾಗಿದೆ. ಓಹಿಯೋ ಸ್ಟೇಟ್ ಹೌಸ್ ಹಾಗೂ ದಕ್ಷಿಣ ಕರೊಲಿನಾದಲ್ಲಿ ಗನ್‌ಗಳನ್ನು ಹೊತ್ತುಕೊಂಡು ಕೆಲವರು ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ