ಮೆಲ್ಕಾರ್: ಸ್ನೇಹ ಸ್ಟಡಿ ಸೆಂಟರ್ ಉದ್ಘಾಟನೆ

ಮೆಲ್ಕಾರ್: ಸ್ನೇಹ ಸ್ಟಡಿ ಸೆಂಟರ್ ಉದ್ಘಾಟನೆ
republicday728
republicday468
republicday234

ಪಾಣೆಮಂಗಳೂರು:  ವಿಧ್ಯಾರ್ಥಿ ಯುವಕರಲ್ಲಿ ಸಹನೆ, ಸಂಯಮ ಅತ್ಯಗತ್ಯ. ದುಡುಕುತನ  ಅವರಲ್ಲಿರಬಾರದು. ವಿಧ್ಯಾರ್ಥಿಗಳು ಕೆಡುಕಿನಿಂದ ದೂರವಾಗಿ ಸಮಾಜಕ್ಕೆ ಬೆಳಕಾಗಬೇಕು ಎಂದು ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಗಳ್ ರವರು ಹೇಳಿದರು.

     ಅವರು ಇಲ್ಲಿನ ಸುಲ್ತಾನ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ  ನಿರ್ಮಾಣವಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಒ) ಪಾಣೆಮಂಗಳೂರು ಶಾಖೆಯ ನೂತನ ಕಛೇರಿಯಾದ ಸ್ನೇಹ ಸ್ಟಡಿ ಸೆಂಟರನ್ನು ಉದ್ಘಾಟಿಸಿ  ಮಾತನಾಡುತ್ತಿದ್ದರು. 

      ಇದೇ ಸಂದರ್ಭದಲ್ಲಿ ಹಾಜರಿದ್ದ ಜಮಾಅತೆ ಇಸ್ಲಾಮೀ ಹಿಂದ್(ಜೆ.ಐ.ಹೆಚ್) ದ.ಕ. ಜಿಲ್ಲಾ ಸಂಚಾಲಕ ಸಈದ್ ಇಸ್ಮಾಯೀಲ್ ಮಾತನಾಡಿ, ಎಸ್.ಐ.ಓ ನಿಂದ ತರಬೇತಿಗೊಂಡ ವಿಧ್ಯಾರ್ಥಿ ಗಳು ಸಮಾಜಕ್ಕೆ ಮಾರ್ಗದರ್ಶಕರಾಗಬೇಕು. ಎಸ್.ಐ.ಓ. ಅಂತಹ ಹಲವಾರು ಯುವಕರನ್ನು ತಯಾರುಗೊಳಿಸಿದೆ. ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಅಂತಹ ಮಾರ್ಗದರ್ಶಕ  ಕೇಂದ್ರವಾಗಿ ಈ ಕಛೇರಿಯು ಮೂಡಿ ಬರಲಿ ಎಂದು ಹಾರೈಸಿದರು.

     ಜೆ.ಐ.ಹೆಚ್.ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಯು. ಸಮಾರೋಪ ನುಡಿಗಳನ್ನಾಡುತ್ತ, ಸಂಘಟನೆಯ ಧ್ಯೇಯದೊಂದಿಗೆ ಮುನ್ನುಗ್ಗಿ ಯುವಕರು ಕಾರ್ಯಪ್ರವೃತ್ತರಾಗಬೇಕು ಎಂದು ಕರೆಯಿತ್ತರು. ಅತಿಥಿಗಳಾಗಿ ಭಾಗವಹಿಸಿದ್ದ ಜೆ.ಐ.ಹೆಚ್. ಪಾಣೆಮಂಗಳೂರು ಶಾಖಾಧ್ಯಕ್ಷ  ಮುಖ್ತಾರ್ ಅಹ್ಮದ್, ಎಸ್.ಐ.ಓ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ದಾನಿಶ್ ಚೆಂಡಾಡಿ ಮತ್ತು ಸಮಾಜ ಸೇವಕ ಶರೀಫ್ ಸಾದ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

     ಕಾರ್ಯಕ್ರಮದ ಪ್ರಾರಂಭದಲ್ಲಿ ಸಫ್ವಾನ್ ಬೋಳಂಗಡಿ ಕಿರಾಅತ್ ಪಠಿಸಿದರು. ಕೊನೆಯಲ್ಲಿ ಎಸ್.ಐ.ಓ. ಪಾಣೆಮಂಗಳೂರು ಘಟಕಾಧ್ಯಕ್ಷ ಮುತಹ್ಹರ್ ಬೋಳಂಗಡಿ ಧನ್ಯವಾದವಿತ್ತರು. ಸಲ್ವಾನ್ ಬೋಳಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ