ನಂದಿ ಗ್ರಾಮದಿಂದ ಸ್ಪರ್ಧೆ: ಮಮತಾ - 50,000 ಮತಗಳಿಂದ ಸೋಲಿಸುವೆ:ಸುವೇಂದು ಅಧಿಕಾರಿ

ಕೊಲ್ಕೋತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಭದ್ರಕೋಟೆ ನಂದಿಗ್ರಾಮದಿಂದ ಸ್ಪರ್ಧಿಸುವ ಘೋಷಣೆ ಮಾಡುತ್ತಿದ್ದಂತೆ; ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಸೋಮವಾರ ಉತ್ತರಿಸಿದ್ದಾರೆ.
ಅವರನ್ನು (ಮಮತಾರನ್ನು) ಕನಿಷ್ಠ ಅರ್ಧ ಲಕ್ಷ ಮತಗಳಿಂದ ಸೋಲಿಸುತ್ತೇನೆ ಇಲ್ಲವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಅದಾಗ್ಯೂ ಸುವೇಂದು ಅಧಿಕಾರಿ ತಮ್ಮ ಮಾಜಿ ರಾಜಕೀಯ ನೇತಾರೆ ಮಮತಾರ ವಿರುದ್ಧ ತಾವೇ ಸ್ಪರ್ಧಿಸುವುದನ್ನು ದೃಡೀಕರಿಸಿಲ್ಲ. ಕೊಲ್ಕೋತ್ತಾದ ರ಼್ಯಾಲಿಯೊಂದರಲ್ಲಿ ಮಾತನಾಡಿದ ಸುವೇಂದು ಅಧಿಕಾರಿ ನಂದಿಗ್ರಾಮ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹಾಕುವುದು ಅಂತಿಮವಾಗಿ ಪಕ್ಷದ ತೀರ್ಮಾನವಾಗಿರಲಿದೆ ಎಂದೂ ಹೇಳಿದ್ದಾರೆ.
ರಾಜಕೀಯವಾಗಿ ಪ್ರಾಧಾನ್ಯತೆ ಪಡೆದಿರುವ ನಂದಿ ಗ್ರಾಮ ಕ್ಷೇತ್ರದಲ್ಲಿ ಈ ಹಿಂದೆ ಸುವೇಂದು ಅಧಿಕಾರಿ ಅವರು ಟಿಎಂಸಿಯಿಂದಲೇ ಗೆದ್ದಿದ್ದರು. ಅದೇ ಕ್ಷೇತ್ರದಿಂದ ತಾನು ಸ್ಪರ್ಧಿಸುವುದಾಗಿ ಘೋಷಿಸಿ, ಮಮತಾ ಬ್ಯಾನರ್ಜಿ ಸೋಮವಾರ ಅಚ್ಚರಿ ಮೂಡಿಸಿದ್ದರು.
ನನ್ನನ್ನು ಎಲ್ಲಿಂದ ಕಣಕ್ಕಿಳಿಸಲಾಗುತ್ತದೆ ಎಂದು ಗೊತ್ತಿಲ್ಲ. ಆದರೆ ನಂದಿಗ್ರಾಮದಿಂದ ಕಣಕ್ಕಿಳಿಸಿದರೆ ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸುವೆ ಇಲ್ಲವೇ ರಾಜಕೀಯದಿಂದ ನಿವೃತ್ತಿಯಾಗುವೆ. ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಅವರಿಂದ ನಿರಂಕುಶವಾಗಿ ನಡೆಯುತ್ತಿರುವ ಟಿಎಂಸಿಯಂತಲ್ಲದೆ, ಬಿಜೆಪಿಯಲ್ಲಿ ಚರ್ಚೆಯ ನಂತರ ಅಭ್ಯರ್ಥಿಗಳನ್ನು ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಚುನಾವಣೆಗೆ ಮೊದಲು ಮಮತಾ ಬ್ಯಾನರ್ಜಿ ನಂದಿಗ್ರಾಮವನ್ನು ನೆನಪಿಸಿಕೊಳ್ಳುತ್ತಾರೆ. ನಂದಿಗ್ರಾಮದಲ್ಲಿ ಗುಂಡಿನ ದಾಳಿ ನಡೆಸಿದ್ದ ಐಪಿಎಸ್ ಅಧಿಕಾರಿಗೆ ಅವರು ನಾಲ್ಕು ಬಾರಿ ಭಡ್ತಿ ನೀಡಿದ್ದಾರೆ ಎಂದು ಆರೋಪಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ