ಮುಂಬೈ ರೈಲಿನಲ್ಲಿ ರೇಪ್: ರೈಲಿನಿಂದ ಯುವತಿಯನ್ನು ಹೊರಕ್ಕೆ ತಳ್ಳಿ ಕೊಲೆಗೆ ಯತ್ನ !!

ಮುಂಬೈ ರೈಲಿನಲ್ಲಿ ರೇಪ್: ರೈಲಿನಿಂದ ಯುವತಿಯನ್ನು ಹೊರಕ್ಕೆ ತಳ್ಳಿ ಕೊಲೆಗೆ ಯತ್ನ !!

ಮುಂಬೈ: ಯುವತಿಯೊಬ್ಬಳ ಮೇಲೆ ರೈಲಿನಲ್ಲಿ ಪೈಶಾಚಿಕವಾಗಿ ಅತ್ಯಾಚಾರಗೈದ ದುರುಳರು, ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಎಸೆದ ಘಟನೆಯು ಮುಂಬೈನಲ್ಲಿ ಬೆಳಕಿಗೆ ಬಂದಿದೆ.‌

ವಾಶಿ ಕ್ರೀಕ್ ಸೇತುವೆಯ ಸಮೀಪ ಇರುವ ರೈಲ್ವೇ ಹಳಿಯ ಬಳಿ ಯುವತಿ ಪ್ರಜ್ಞಾಹೀನಳಾಗಿ ಪತ್ತೆಯಾಗಿದ್ದಳು. ಸಾವು - ಬದುಕಿನಲ್ಲಿ ಹೋರಾಡುತ್ತಿದ್ದ ಯುವತಿಯನ್ನು ಗಮನಿಸಿದ ಸ್ಥಳೀಯರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಾಶಿ ಜಿಆರ್‍ಪಿಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಯುವತಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆಂದು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪರೀಕ್ಷೆ ನಡೆಸಿದ ವೈದ್ಯರು, ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಆಕೆಯನ್ನು ರೈಲಿನಿಂದ ಹೊರಗೆ ತಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಯುವತಿ 20 ವರ್ಷದವಳಾಗಿದ್ದು ಟಿಟ್ವಾಲಾ ನಿವಾಸಿ. ಪೊವಾಯಿ ಎಂಬಲ್ಲಿ ಮನೆಗೆಲಸ ಮಾಡಿಕೊಂಡಿದ್ದಳು. ಯುವತಿಯನ್ನು ರೈಲಿಗೆ ಯಾಕೆ ಒಯ್ದಿದ್ದಾರೆ ಎನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ. ಕೊಲೆ ಮಾಡಲೆಂದೇ ಚಲಿಸುತ್ತಿರುವ ರೈಲಿನಿಂದ ತಳ್ಳಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ