ಮುಂಬೈ | ಅಕ್ರಮವಾಗಿ ಸಾಗಿಸುತ್ತಿದ್ದ ₹6.5 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ವಶ

ಮುಂಬೈ: ವಿಶೇಷ ಗುಪ್ತಚರ ಮತ್ತು ತನಿಖಾ ವಿಭಾಗವು ನವಿ ಮುಂಬೈನ ಜವಾಹರಲಾಲ್ ನೆಹರೂ ಬಂದರಿನಲ್ಲಿ ಸುಮಾರು ₹6.5 ಕೋಟಿ ಮೌಲ್ಯದ ವಿದೇಶಿ ಬ್ರ್ಯಾಂಡ್ ಸಿಗರೇಟ್‌ಗಳನ್ನು ಒಳಗೊಂಡಿದ್ದ ಕಂಟೈನರ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜವಾಹರಲಾಲ್ ನೆಹರೂ ಕಸ್ಟಮ್ ಹೌಸ್, ರಾಯಗಢ ಜಿಲ್ಲೆಯ ನ್ಹವಾ ಶೇವಾ ಪ್ರದೇಶದಲ್ಲಿ ನೆಲೆಗೊಂಡಿದೆ. ಇದು ಬಂದರಿನಲ್ಲಿ ಆಮದು ಮತ್ತು ರಫ್ತು ಸರಕುಗಳನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.
ಕಂಟೈನರ್ ಶೋಧದ ವೇಳೆ 63.16 ಲಕ್ಷ ಸಿಗರೇಟ್‌ಗಳು ಪತ್ತೆಯಾಗಿವೆ. ಆಮದು ದಾಖಲೆಗಳಲ್ಲಿ ‘ಪಿಪಿ ಸ್ಪೋರ್ಟ್ಸ್ ಫ್ಲೋರಿಂಗ್’ ವಸ್ತು ಎಂದು ತಪ್ಪಾಗಿ ಉಲ್ಲೇಖಿಸುವ ಮೂಲಕ ಕಳ್ಳಸಾಗಣೆ ಮಾಡಲು ಯತ್ನಿಸಿದ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ