ಮುಂದುವರಿದ ದಾಳಿ: ಕಾಣೆಯಾದ ಆಕಿಫ್ ಕೊಲೆಯಾಗಿ ಪತ್ತೆ- ಮುಸ್ಲಿಂ ಒಕ್ಕೂಟ ಖಂಡನೆ

ಮುಂದುವರಿದ ದಾಳಿ: ಕಾಣೆಯಾದ ಆಕಿಫ್ ಕೊಲೆಯಾಗಿ ಪತ್ತೆ- ಮುಸ್ಲಿಂ ಒಕ್ಕೂಟ ಖಂಡನೆ
republicday728
republicday468
republicday234

ಮಂಗಳೂರು: ಕೋಟೆಕಾರು ನಿವಾಸಿ ಹನೀಫ್ ರವರ ನಾಪತ್ತೆಯಾದ ಮಗ ಆಕಿಫ್ (12) ಎಂಬ ಬಾಲಕ ಇಂದು ಬೆಳಿಗ್ಗೆ  ತಲಪಾಡಿ ಜಮೀಯತುಲ್ ಫಲಾಹ್  ಶಾಲೆಯ ವಠಾರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಕೃತ್ಯವನ್ನು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮಾಜಿ ಮೇಯರ್ ಅಶ್ರಫ್ ತೀವೃವಾಗಿ ಖಂಡಿಸಿದ್ದಾರೆ.
     ಬಾಲಕನ ಕೊಲೆಯ ಬಗ್ಗೆ ವಿವಿಧ ಸಂಶಯಗಳು  ಸೃಷ್ಟಿ ಯಾಗಿದ್ದು, ಕೊಲೆಯ ಮೂಲವನ್ನು ಕೆದಕಿದಾಗ ಆನ್ ಲೈನ್ ಗೇಮಿಂಗ್ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಕೊಲೆಮಾಡಲಾಗಿದೆ ಎಂಬ ಮಾಹಿತಿ ಇದೆ. 
     ಪೊಲೀಸರು ಈಗಾಗಲೆ ಒಬ್ಬನನ್ನು ಬಂಧಿಸಿದ್ದು, ದಕ್ಷ ಅಧಿಕಾರಿಯಾಗಿರುವ ಮಂಗಳೂರು ಕಮಿಷನರ್ ರವರ ಮಾರ್ಗದರ್ಶನದಲ್ಲಿ  ಎಲ್ಲಾ ಆಯಾಮಗಳ ತನಿಖೆಯನ್ನು ನಡೆಸಲಾಗುತ್ತಿದೆ.
     ಈ ಬಗ್ಗೆ ಹೇಳಿಕೆ ನೀಡಿರುವ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟಗಳ ಅಧ್ಯಕ್ಷ ಮಾಜಿ ಮೇಯರ್ ಅಶ್ರಫ್, ಕಮೀಷನರ್ ರವರ  ಕಾರ್ಯವೈಕರಿಯಲ್ಲಿ ನಮಗೆ ವಿಶ್ವಾಸವಿದೆ. ಆದುದರಿಂದ  ಕೂಡಲೆ ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಸಮಗ್ರ ತನಿಖೆಯನ್ನು ನಡೆಸಿ ನ್ಯಾಯವನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
      ಕಳೆದ 10 ದಿನಗಳಿಂದ ಮುಸ್ಲಿಮ್ ಯುವಕರನ್ನು ಟಾರ್ಗೆಟ್ ಮಾಡಿ ಅಲ್ಲಲ್ಲಿ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿರುವುದನ್ನು ಈಗಾಗಲೆ ಉನ್ನತ ಪೋಲೀಸ್ ಅಧಿಕಾರಿಗಳಿಗೆ ಮುಸ್ಲಿಮ್ ಒಕ್ಕೂಟವು ಮನದಟ್ಟು ಮಾಡಿದೆ. ಅದರ ಮುಂದುವರಿದ ಭಾಗವಾಗಿ ಬಾಳಿ ಬದುಕಬೇಕಾಗಿದ್ದ ಎಳೆಯ ಪ್ರಾಯದ ಬಾಲಕನನ್ನೇ ಅಪಹರಿಸಿ ಕೊಲೆ ಮಾಡಿರುವುದು ಇಡೀ ಸಮಾಜವೆ ತಲೆ ತಗ್ಗಿಸುವಂತೆ ಮಾಡಿದೆ. ಈ ರೀತಿ ಅಮಾಯಕರನ್ನು ಕೊಲೆಮಾಡಿ ವಿಘ್ನ ಸಂತೋಷ ಪಡುವ ದುಷ್ಟ ಶಕ್ತಿಗಳು ಅಂತ್ಯವಾಗಬೇಕು. ಈ ಕೃತ್ಯದ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಕೂಡ ಅಪರಾಧಿಗಳನ್ನು ಬಯಲಿಗೆಳೆಯಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಒತ್ತಾಯಿಸಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ