ಮದುವೆಯಾಗಿ ಅಗಲುವ ಭೀತಿ: ಆತ್ಮಹತ್ಯೆ ಮಾಡಿಕೊಂಡ ಅವಳಿ ಸಹೋದರಿಯರು

ಮದುವೆ ಆಗಿ ಬಿಟ್ಟರೆ ಬೇರೆ ಬೇರೆ ಆಗ್ತೀವಿ ಎಂಬ ಭಯದಿಂದ ಅವಳಿ ಸಹೋದರಿಯರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ: ಮದುವೆ ಆಗಿ ಬಿಟ್ಟರೆ ಬೇರೆ ಬೇರೆ ಆಗ್ತೀವಿ ಎಂಬ ಭಯದಿಂದ ಅವಳಿ ಸಹೋದರಿಯರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

      ಶ್ರೀರಂಗಪಟ್ಟಣ ತಾಲೂಕಿನ ಹಣಸನಹಳ್ಳಿ ಗ್ರಾಮದ ನಿವಾಸಿಗಳಾದ ಸುರೇಶ್ ಮತ್ತು ಯಶೋದ ದಂಪತಿಯ ಅವಳಿ ಪುತ್ರಿಯರಾದ ದೀಪಿಕಾ ಮತ್ತು ದಿವ್ಯಾ (19) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

      ಅವಳಿ ಸಹೋದರಿಯರು ಚಿಕ್ಕಂದಿನಿಂದಲೂ ಬಹಳ ಅನ್ಯೋನ್ಯತೆಯಿಂದಿದ್ದು, ಇಬ್ಬರೂ ಪರಸ್ಪರ ಬಿಟ್ಟಿರಲಾರದ ಸ್ಥಿತಿಯಲ್ಲಿದ್ದರು. ವಯೋ ಸಹಜವೆಂಬತೆ ಮಕ್ಕಳಿಗೆ ಮದುವೆ ಮದುವೆ ಮಾಡಿಸುವ ತೀರ್ಮಾನವು ಈ ಘೋರ ಘಟನೆಗೆ ಕಾರವಾಯಿತು ಎನ್ನಲಾಗಿದೆ. ಪೋಷಕರು ಅವಳಿ ಮಕ್ಕಳನ್ನು ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಬಯಸಿದ್ದರು. ಬೇರೆ ಬೇರೆ ಮನೆಗೆ ಮದುವೆಯಾದರೆ ತಮ್ಮ ಬಾಂಧವ್ಯ ಕೊನೆಯಾಗುತ್ತದೆ ಎಂದು ಆತಂಕಗೊಂಡ ಸೋದರಿಯರು ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ