ಮಾಣಿ: ಹಿಂದೂ ರುದ್ರಭೂಮಿ ಪುನರ್ ನಿರ್ಮಾಣದ ಬಗ್ಗೆ ಸಭೆ 

ಮಾಣಿ: ಹಿಂದೂ ರುದ್ರಭೂಮಿ ಪುನರ್ ನಿರ್ಮಾಣದ ಬಗ್ಗೆ ಸಭೆ 
republicday728
republicday468
republicday234

ವಿಟ್ಲ, ಮಾರ್ಚ್ 9: ಮಾಣಿ ಗ್ರಾಮ ವ್ಯಾಪ್ತಿಯ ಹಿಂದೂ ರುದ್ರಭೂಮಿಯ ಪುನರ್ ನಿರ್ಮಾಣದ ಬಗ್ಗೆ ಸಮಾಲೋಚನಾ ಸಭೆಯು ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ  ಸಭೆಯ ಅಧ್ಯಕ್ಷತೆ ವಹಿಸಿದ್ದರು.

      ಸಭೆಯಲ್ಲಿ ರುದ್ರಭೂಮಿ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಪ್ರಫುಲ್ಲ ಆರ್ ರೈ ವಿಠಲಕೋಡಿ, ಕಾರ್ಯಾಧ್ಯಕ್ಷರಾಗಿ ಜಗನ್ನಾಥ ಚೌಟ ಬದಿಗುಡ್ಡೆ, ಉಪಾಧ್ಯಕ್ಷರಾಗಿ ಸುಬ್ರಾಯ ನಾಯಕ್ ಮಾಣಿ, ಗೌರವ ಸಲಹೆಗಾರರಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಸದಸ್ಯರಾದ ಮಂಜುಳಾ ಕುಶಲ ಪೆರಾಜೆ, ಕಾರ್ಯದರ್ಶಿಯಾಗಿ ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ, ಜೊತೆ ಕಾರ್ಯದರ್ಶಿಗಳನ್ನಾಗಿ ಗ್ರಾಮಕರಣಿಕರಾದ ಸುರಕ್ಷಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಪ್ರೇಮ ಮತ್ತು ನರಸಿಂಹ ಶೆಟ್ಟಿ ಮಾಣಿ ಹಾಗೂ ಕೋಶಾಧಿಕಾರಿಯಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿ ಮತ್ತು ಪಂಚಾಯತ್ ಸದಸ್ಯರು ಹಾಗೂ ಊರಿನ ಗಣ್ಯರು ಒಟ್ಟು 19 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಯಿತು.
     ಸಭೆಯಲ್ಲಿ ರುದ್ರಭೂಮಿಯ ಪುನರ್ ನಿರ್ಮಾಣದ ರೂಪುರೇಷೆ ಮತ್ತು ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಚರ್ಚಿಸಲಾಯಿತು.

     ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ ಹಾಗೂ ಸದಸ್ಯರು ಉಪಸ್ಥಿತರಿದ್ದರು 
    ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿಯವರು ಸ್ವಾಗತಿಸಿ ವಂದಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ