ಮಾಣಿಯೂರು ಅಬ್ದುಲ್ ಕಾದರ್ ಅಲ್-ಖಾಸಿಮಿ ವಿಧಿವಶ
ಕಾಸರಗೋಡು: ಪ್ರಮುಖ ಪಂಡಿತರೂ, ಕಾಸರಗೋಡು ಜಿಲ್ಲೆಯ ಪಯ್ಯಕ್ಕಿ ಉಸ್ತಾದ್ ಅಕಾಡೆಮಿ ಪ್ರಾಂಶುಪಾಲರೂ, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಸೂಫಿವರ್ಯ ಮಾಣಿಯೂರ್ ಅಹ್ಮದ್ ಮುಸ್ಲಿಯಾರ್ (ಮಾಣಿಯೂರ್ ಉಸ್ತಾದ್) ರವರ ಸಹೋದರ ಮಾಣಿಯೂರು ಅಬ್ದುಲ್ ಖಾದರ್ ಅಲ್-ಖಾಸಿಮಿ (62) ಇಂದು (ಜನವರಿ28 ಶುಕ್ರವಾರ) ಬೆಳಿಗ್ಗೆ 7 ಗಂಟೆಗೆ ಮೃತಪಟ್ಟಿದ್ದಾರೆ.
ಎಡವಚ್ಚಲ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದಾಗಿ ನಿಧನರಾಗಿರುವುದಾಗಿ ವರದಿಯಾಗಿದೆ.
ನಂದಿ ದಾರುಸ್ಸಲಾಂನಲ್ಲಿ ಮುದರ್ರಿಸ್ಸರಾಗಿದ್ದ ಉಸ್ತಾದ್, ಒಳವರ, ಮಾಂಕಾವ್, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ದಫನ ಕಾರ್ಯವು ಇಂದು ಮಧ್ಯಾಹ್ನ 12.30ಕ್ಕೆ ಮಾಣಿಯೂರು ಪಾರಾಲ್ ಜುಮ್ಮಾ ಮಸೀದಿ ಖಬರಸ್ಥಾನದಲ್ಲಿ ನಡೆಯಲಿದೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ