ಮಂಜೇಶ್ವರ ಮುಸ್ಲಿಂ ಲೀಗ್ ಕೈಯಲ್ಲಿ ಭದ್ರ: ಬಿಜೆಪಿಗೆ ಮುಖ ಭಂಗ

ಮಂಜೇಶ್ವರ ಮುಸ್ಲಿಂ ಲೀಗ್ ಕೈಯಲ್ಲಿ ಭದ್ರ: ಬಿಜೆಪಿಗೆ ಮುಖ ಭಂಗ

ಮಂಜೇಶ್ವರ: ಕೇರಳ ವಿಧಾನ ಸಭಾ ಚುನಾವಣೆಯ ಜಿದ್ದಾ ಜಿದ್ದಿನ ಹೋರಾಟದಲ್ಲಿ ಯುಡಿಎಫ್ ಮಿತ್ರ ಪಕ್ಷ ಮುಸ್ಲಿಂ ಲೀಗ್ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಸ್ಲಿಂ ಲೀಗಿನ ಎಕೆಎಂ ಅಶ್ರಫ್‌ 1,143 ಮತಗಳಿಂದ ವಿಜಯಿಯಾದರು.
      ಮುಸ್ಲಿಂ ಲೀಗಿನ ಭದ್ರ ಕೋಟೆಯೆಂದೇ ಪ್ರಸಿದ್ದವಾಗಿರುವ ಮಂಜೇಶ್ವರ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಬಿಜೆಪಿ ಶತಾಯ ಗತಾಯ ಪ್ರಯತ್ನಿಸಿತ್ತು. ಈ ಸ್ಥಾನವನ್ನು ಪಡೆಯಲು ಬಿಜೆಪಿ ತನ್ನ ರಾಷ್ಟ್ರ ಮಟ್ಟದ ಘಟಾನುಘಟಿ ನಾಯಕರನ್ನು ರಂಗಕ್ಕಿಳಿಸಿತ್ತು. ಬಿಜೆಪಿಯ ಬಹಳ ನಿರೀಕ್ಷೆಯ ಈ ಕ್ಷೇತ್ರವನ್ನು ಮುಸ್ಲಿಂ ಲೀಗ್ ತನ್ನಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
      ಕನ್ನಡಿಗನಾದ ಎ.ಕೆ.ಎಂ ಅಶ್ರಫ್ ಯೂತ್ ಲೀಗ್ ನಾಯಕನಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನ ನಾಯಕರಾಗಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾಗಿಯೂ ಅನುಭವ ಹೊಂದಿದ್ದಾರೆ. ಈ ಬಾರಿ ಕೇರಳ ವಿಧಾನ ಸಭೆಯಲ್ಲಿ ಕನ್ನಡ ಧ್ವನಿ ಮೊಳಗಲಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ