ಮಗು ಮುಹಮ್ಮದ್‌ ಚಿಕಿತ್ಸೆ: ಮನವಿ ಮಾಡಿದ್ದು 18 ಕೋಟಿಗೆ, ಸಾಮಾಜಿಕ ಜಾಲ ತಾಣಗಳ ಮೂಲಕ ಸಂಗ್ರಹವಾಗಿದ್ದು 46.78 ಕೋಟಿ!

Spinal Masqular Atrophy (ಎಸ್‌ಎಂಎ) ಸ್ನಾಯು ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿದ್ದ ರಫೀಕ್ ಮತ್ತು ಮರಿಯಮ್‌ರ ಒಂದೂವರೆ ವರ್ಷದ ಮಗ ಮುಹಮ್ಮದ್ ಅವರ ವೈದ್ಯಕೀಯ ನೆರವಿಗಾಗಿ 18 ಕೋಟಿ ರೂಪಾಯಿಗಳ ಅಗತ್ಯವಿತ್ತು. ಆದರೆ ದಾನಿಗಳ ನೆರವಿನಿಂದ ಸಂಗ್ರಹವಾಗಿದ್ದು 46,78,72,125.48 ಎರಡು ಬ್ಯಾಂಕುಗಳಲ್ಲಾಗಿ ಹಣ ಜಮಾವಣೆ ಮಾಡಿ ಈ ಸಹಾಯ ನಿಧಿಯಲ್ಲಿ ಭಾಗಿಯಾದವರು ಒಟ್ಟು 7,77,000 ಮಂದಿ.

ಮಗು ಮುಹಮ್ಮದ್‌ ಚಿಕಿತ್ಸೆ: ಮನವಿ ಮಾಡಿದ್ದು 18 ಕೋಟಿಗೆ,  ಸಾಮಾಜಿಕ ಜಾಲ ತಾಣಗಳ ಮೂಲಕ  ಸಂಗ್ರಹವಾಗಿದ್ದು 46.78 ಕೋಟಿ!

ಕಣ್ಣೂರು, ಕೇರಳ: ಇದು ನಂಬಲಸಾಧ್ಯ. ಆದರೂ ಸತ್ಯ. ಮಾನವೀಯತೆಗೆ ಮತ್ತೊಂದು ಉದಾಹರಣೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ದಾಖಲಾಗಿದೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗು ಮುಹಮ್ಮದ್‌ನ ಚಿಕಿತ್ಸೆಗಾಗಿ ಸಾಮಾಜಿಕ ಮಾಧ್ಯಮಗಳ ಮನವಿ ಮಾಡಿಕೊಂಡಿದ್ದು 18 ಕೋಟಿ ರೂಪಾಯಿಗಳಿಗಾಗಿ. ಸಂಗ್ರಹವಾಗಿದ್ದು 46.78 ಕೋಟಿ ರೂಪಾಯಿಗಳು. ಮುಹಮ್ಮದ್‌ನ ಚಿಕಿತ್ಸೆಗಾಗಿ ಈ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವಿಶ್ವ ಮಲೆಯಾಳಿಗಳು ಕ್ರೌಡ್ ಫಂಡಿಂಗ್ ಧನ ಸಹಾಯದ ಮೂಲಕ ಪರಸ್ಪರ ಕೈ ಜೋಡಿಸಿದ್ದಾರೆ ಎಂದು ಮುಹಮ್ಮದ್ ಚಿಕಿತ್ಸಾ ಸಹಾಯ ಸಮಿತಿ ತಿಳಿಸಿದೆ.

      Spinal Masqular Atrophy (ಎಸ್‌ಎಂಎ) ಸ್ನಾಯು ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿದ್ದ ರಫೀಕ್ ಮತ್ತು ಮರಿಯಮ್‌ರ ಒಂದೂವರೆ ವರ್ಷದ ಮಗ ಮುಹಮ್ಮದ್ ಅವರ ವೈದ್ಯಕೀಯ ನೆರವಿಗಾಗಿ 18 ಕೋಟಿ ರೂಪಾಯಿಗಳ ಅಗತ್ಯವಿತ್ತು. ಆದರೆ ದಾನಿಗಳ ನೆರವಿನಿಂದ ಸಂಗ್ರಹವಾಗಿದ್ದು 46,78,72,125.48. (ನಲ್ವತ್ತಾರು ಕೋಟಿ ಎಪ್ಪತ್ತೆಂಟು ಲಕ್ಷದ ಎಪ್ಪತ್ತೆರಡು ಸಾವಿರದ ಒಂದು ನೂರ ಇಪ್ಪತ್ತೈದು ರೂಪಾಯಿಗಳು ಮತ್ತು ನಲ್ವತ್ತೆಂಟು ಪೈಸೆ) ಮುಹಮ್ಮದ್‌ನ ಚಿಕಿತ್ಸೆಗೆ ಅಗತ್ಯವಾದ ಸೋಲ್ಜೆನ್ಸ್‌ಮಾ ಎಂಬ ಔಷಧಿಯನ್ನು ಅಮೇರಿಕಾದಿಂದ ತರಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

      ಮುಂದಿನ ತಿಂಗಳು ಪ್ರಥಮ ಹಂತದ ಚಿಕಿತ್ಸೆ ನೀಡಲು ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ‌. ಸಂಗ್ರಹವಾದ ಹಣವನ್ನು ಮುಹಮ್ಮದ್ ಹಾಗೂ ಇದೇ ರೀತಿಯ ಖಾಯಿಲೆಯಿಂದ  ಬಳಲುತ್ತಿರುವ ಅವನ ಸಹೋದರಿ ಅಫ್ರಾ ಅವರ ಚಿಕಿತ್ಸೆಗಾಗಿ ಉಪಯೋಗಿಸಿ ಉಳಿದ ಹಣವನ್ನು ಸರಕಾರದ ಜಿತೆ ಚರ್ಚಿಸಿ ಸಮಾನಾಂತರ ವಾದ ರೋಗಿಗಳಿಗೆ ನೀಡಲಾಗುವುದು ಎಂದು ಚಿಕಿತ್ಸಾ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.‌

     ಹದಿನೈದರ ಹರೆಯದ ಅಫ್ರಾಳ ರೋಗವನ್ನು ಆರಂಭದಲ್ಲೇ ಪತ್ತೆ ಮಾಡಲಾಗಿರಲಿಲ್ಲ.  ಎಸ್‌ಎಮ್‌ಎ ಕಾಯಿಲೆಗೆ ಎರಡು ವರ್ಷ ತುಂಬುವ ಮೊದಲೇ ಚಿಕಿತ್ಸೆಯನ್ನು ನೀಡಬೇಕು.  ಅಫ್ರಾ ಅವರ ಬೆನ್ನು ಹುರಿ ಮತ್ತು ಕಾಲುಗಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲು ವೈದ್ಯರು ಸೂಚಿಸಿದ್ದಾರೆ.

      ನಿಧಿ ಸಂಗ್ರಹಕ್ಕಾಗಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ರಂಗದಲ್ಲಿ ಇರುವವರನ್ನು ಸೇರಿಸಿಕೊಂಡು ಮುಹಮ್ಮದ್ ಚಿಕಿತ್ಸಾ ಸಮಿತಿ ರಚಿಸಲಾಗಿತ್ತು. ಜುಲೈ 5ರಂದು ನಿಧಿ ಸಂಗ್ರಹದ ಉದ್ದೇಶಿತ ಗುರಿ 18 ಕೋಟಿ ತಲುಪುವುದರೊಂದಿಗೆ ಇನ್ನು ಹಣ ಕಳುಹಿಸಬೇಡಿ ಎಂದು ಮನವಿ ಮಾಡಲಾಗಿತ್ತು. ಆದರೂ ಉದ್ದೇಶಿತ ಗುರಿಯ ಎರಡು ಪಟ್ಟಿಗಿಂತಲೂ ಅಧಿಕ ಹಣ ಸಂಗ್ರಹವಾಗಿದೆ.

ಈ ಬೃಹತ್ ಮೊತ್ತ ಸಂಗ್ರಹದ ವಿವರಗಳು:

ಸಹಾಯ ಸಮಿತಿಗೆ ಲಭಿಸಿದ  ಅತಿದೊಡ್ಡ ಮೊತ್ತ 5 ಲಕ್ಷ ರೂ.

ಎರಡು ಬ್ಯಾಂಕುಗಳಲ್ಲಾಗಿ ಹಣ ಜಮಾವಣೆ ಮಾಡಿ ಈ ಸಹಾಯ ನಿಧಿಯಲ್ಲಿ ಭಾಗಿಯಾದವರು ಒಟ್ಟು 7,77,000 ಮಂದಿ 

ಐದು ಲಕ್ಷ ನೀಡಿದವರು ಒಬ್ಬರು.

ಮೂರು ಲಕ್ಷ ನೀಡಿದವರು ಒಬ್ಬರು.

ತಲಾ ಒಂದು ಲಕ್ಷ ಆಥವಾ ಅದಕ್ಕಿಂತ ಹೆಚ್ಚು ನೀಡಿದವರು 42 ಮಂದಿ

ಕೇರಳ ಗ್ರಾಮೀಣ ಬ್ಯಾಂಕ್ ಮಾಟುಲ್ ಶಾಖೆಯ ಖಾತೆಯಲ್ಲಿ 19,95,55,000.07

ಫೆಡರಲ್ ಬ್ಯಾಂಕ್ ಕಣ್ಣೂರು ಶಾಖೆಯ ಖಾತೆಯಲ್ಲಿ 26,73,97,527.41 ರೂ.

ಸಹಾಯ ಸಮಿತಿ ಕಛೇರಿ ಮತ್ತು ಮುಹಮ್ಮದ್‌ನ ಮನೆಯಲ್ಲಿ ಸಂಗ್ರಹವಾದ ಒಟ್ಟು ಹಣ 9,19,598

ಮುಹಮ್ಮದ್‌ ಚಿಕಿತ್ಸಾ ಸಹಾಯ ಸಮಿತಿ ಸದಸ್ಯರುಗಳಾದ ಶಾಸಕ ಎಂ.ವಿಜಿನ್, ಕೆ.ಫಾರಿಷ, ಟಿ.ಪಿ.ಅಬ್ಬಾಸ್ ಹಾಜಿ, ಗಫೂರ್ ಮಾಟ್ಟುಲ್, ಕೆ.ವಿ.ಮುಹಮ್ಮದಲಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಈ ವಿವರಗಳನ್ನು ಹಂಚಿಕೊಂಡರುನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ