ಮಂಗಳೂರು ಸಬ್‌ ಜೈಲಿನಲ್ಲಿ ಪೊಲೀಸರ ದಿಢೀರ್ ದಾಳಿ..!! ಗಾಂಜಾ, ಡ್ರಗ್‌ ಪ್ಯಾಕೇಟ್‌ಗಳು ವಶ

ಮಂಗಳೂರು ಸಬ್‌ ಜೈಲಿನಲ್ಲಿ ಪೊಲೀಸರ ದಿಢೀರ್ ದಾಳಿ..!! ಗಾಂಜಾ, ಡ್ರಗ್‌ ಪ್ಯಾಕೇಟ್‌ಗಳು ವಶ

ಮಂಗಳೂರು: ಮಂಗಳೂರು ನಗರ ಪೊಲೀಸರು ಇಂದು(ಜು.25) ಮುಂಜಾನೆ ಏಕಾಏಕಿ ಮಂಗಳೂರು ಸಬ್‌ ಜೈಲಿಗೆ ದಾಳಿ ಮಾಡಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗರ್ವಾಲ್‌ ಅವರ ಸೂಚನೆಯಲ್ಲಿ ಮುಂಜಾನೆ 4 ಗಂಟೆಗೆ ದಾಳಿ ಮಾಡಿದ್ದು, ಕಾರ್ಯಾಚರಣೆ ಸಂದರ್ಭದಲ್ಲಿ ಆರೋಪಿಗಳಿಂದ 25 ಮೊಬೈಲ್ ಫೋನ್‌ಗಳು, 1 ಬ್ಲೂಟೂತ್, 5 ಇಯರ್‌ಫೋನ್‌ಗಳು, 1 ಪೆನ್ ಡ್ರೈವ್, 5 ಚಾರ್ಜರ್‌ಗಳು, 1 ಜೊತೆ ಕತ್ತರಿ, 3 ಕೇಬಲ್‌ಗಳು ಮತ್ತು ಗಾಂಜಾ ಮತ್ತು ಇತರ ಮಾದರಿಯ ಡ್ರಗ್‌ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

       ಈ ಕಾರ್ಯಾಚರಣೆಯಲ್ಲಿ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಪಿಐಗಳು, ಸುಮಾರು 150 ಮಂದಿ ಸಿಬ್ಬಂದಿ ಪಾಲ್ಗೊಂಡಿದ್ದರು. ಜೈಲಿನ ಎಲ್ಲಾ ಕೊಠಡಿಗಳಲ್ಲೂ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು. ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ದಾಳಿ ಕಾರ್ಯಾಚರಣೆಯ ಗೋಪ್ಯತೆಯನ್ನು ಕೊನೆಕ್ಷಣದವರೆಗೂ ಕಾಯ್ದುಕೊಳ್ಳಲಾಗಿತ್ತು. ಜೈಲಿನೊಳಗೆ ನಡೆಯುವ ಅಹಿತಕರ ಘಟನೆ, ಹೊಡೆದಾಟ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಅದರ ಭಾಗವಾಗಿ ಇಂದು ನಸುಕಿನ ವೇಳೆಯೂ ಕಾರ್ಯಾಚರಣೆ ನಡೆಸಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ