ಮಂಗಳೂರು ಶಾಸಕ ಯು.ಟಿ. ಖಾದರ್ ಹತ್ಯೆಗೆ ಸಂಚು?

ಮಂಗಳೂರು ಶಾಸಕ ಯು.ಟಿ. ಖಾದರ್ ಹತ್ಯೆಗೆ ಸಂಚು?
republicday728
republicday468
republicday234

ಮಂಗಳೂರು, ಡಿಸೆಂಬರ್‌ 23: ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಹತ್ಯಾ ಪ್ರಯತ್ನವೊಂದು ನಡೆದ ಬಗ್ಗೆ ವರದಿಯಾಗಿದೆ. ದೇರಳಕಟ್ಟೆಯಲ್ಲಿ ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿ ಬೆಂಗಳೂರಿಗೆ‌ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಹೊಂಚು ಹಾಕಿ ನಿಂತಿದ್ದ ಅಪರಿಚಿತ ವ್ಯಕ್ತಿ‌ KA 19 EN 6055 ನಂಬ್ರದ ಬೈಕಿನಲ್ಲಿ  ಅನುಮಾನಾಸ್ಪದ ರೀತಿಯಲ್ಲಿ ಶಾಸಕರ  ಕಾರನ್ನೇ ಹಿಂಬಾಲಿಸಿಕೊಂಡು ಬಂದಿತ್ತು. ದೇರಳಕಟ್ಟೆಯಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತ. ಅನುಮಾನಾಸ್ಪದವಾಗಿ ಹಿಂಬಾಲಿಸುತ್ತಿದ್ದ ಬೈಕಿನ ಬಗ್ಗೆ ಅರಿತ ಶಾಸಕರ ಕಾವಲು ಪಡೆಯ ಮುಖ್ಯಸ್ಥ ಸುಧೀರ್  ರವರು ಕದ್ರಿ ಟ್ರಾಫೀಕ್ ಪೋಲಿಸ್ ಠಾಣೆಗೆ ಮಾಹಿತಿಯನ್ನು ನೀಡಿದರು.

     ಪೋಲಿಸರು ನಂತೂರು ಬಳಿ ಅನುಮಾನಸ್ಪದ ವ್ಯಕ್ತಿಯನ್ನು ಬಂಧಿಸಲು ಪ್ರಯತ್ನಿಸಿದಾಗ ವ್ಯಕ್ತಿ ಪರಾರಿಯಾಗಿದ್ದು ಈ ಬಗ್ಗೆ ಕದ್ರಿ ಠಾಣ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಶಾಸಕರಿಗೆ ಹೆಚ್ಚಿನ ಭದ್ರತೆಯನ್ನೂ ನೀಡಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ