ಮಂಗಳೂರು: ನ್ಯಾಯಾಲಯಕ್ಕೆ ಹಾಜರಾದ ವ್ಯಕ್ತಿ ನ್ಯಾಯಾಲಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾದ ವ್ಯಕ್ತಿ ನ್ಯಾಯಾಲಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ಮಂಗಳೂರು: ಮಂಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿಯೊಬ್ಬ ನ್ಯಾಯಾಲಯ ಕಟ್ಟಡದಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ

      ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ರವಿರಾಜ್ (32) ಎಂಬ ಆರೋಪಿ ಕೋರ್ಟಿಗೆ ಹಾಜರುಪಡಿಸಿದ ವೇಳೆ, ನಗರದ ನ್ಯಾಯಾಲಯ ಸಂಕೀರ್ಣದ ಆರನೇ ಮಹಡಿಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.

      ತಲಪಾಡಿ ಕಿನ್ಯ ನಿವಾಸಿ ರವಿರಾಜ್ ಅವರನ್ನು ಸೋಮವಾರ ತೊಕ್ಕೊಟ್ಟಿನ ಸೆಬಾಸ್ಟಿಯನ್ ಕಾಲೇಜು ಬಳಿ ಅಪ್ರಾಪ್ತ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು.

      ಉಳ್ಳಾಲ ಪೊಲೀಸರು ಇಂದು ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿ ಹೊರಗೆ ತಂದು ಕುಳಿತಿರುವಂತೆ ಸೂಚಿಸಿದ್ದರು. ಆತನ ಪರವಾಗಿ ಹಾಜರಾಗಿದ್ದ ವಕೀಲರು ರವಿರಾಜ್ ಬಳಿ ಮಾತನಾಡಿದ್ದು ಅಲ್ಲಿಯೇ ಇದ್ದರು‌. ಆದರೆ, ಅದೇ ವೇಳೆಗೆ ಹಠಾತ್ತಾಗಿ ಆರೋಪಿ ರವಿರಾಜ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಆರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಕೋರ್ಟ್ ಒಳಗಡೆಯೇ ಲಿಫ್ಟ್ ಇರುವ ಜಾಗದಲ್ಲಿ ಮೇಲಿನಿಂದ ಕೆಳಕ್ಕೆ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು ಕಂಡಿದ್ದಾನೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ