ಮಂಗಳೂರು: ಕಾನೂನುಬಾಹಿರ ಕೃತ್ಯಗಳಿಗೆ ಬಿಜೆಪಿ ಬೆಂಬಲ ಏಕೆ ? ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ
ಮಂಗಳೂರು: ಯಾರು ಅಪರಾಧ ಮಾಡುತ್ತಾರೆಯೋ, ಅನೇಕ ಪ್ರಕರಣಗಳಲ್ಲಿ ಯಾರು ಶಾಮೀಲಾಗಿದ್ದರೋ ಅವರನ್ನು ಪೊಲೀಸರು ಸೂಕ್ತ ತನಿಖೆ ನಡೆಸುತ್ತಾರೆ. ಅದಕ್ಕೆ ಜಾತಿ, ಧರ್ಮ ಅಡ್ಡ ಬರುವುದಿಲ್ಲ ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡೂರಾವ್ ಹೇಳಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಬಜರಂಗದಳದ ಕಾರ್ಯಕರ್ತರಿಗೆ ಗಡೀಪಾರು ನೋಟೀಸ್ ನೀಡಲಾಗಿದೆ.
ಹಿಂದುಗಳನ್ನು ಟಾರ್ಗೆಟ್ ಮಾಡಿಕೊಂಡು ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎನ್ನುವ ಬಿಜೆಪಿಗರ ಆರೋಪದ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ನಮಗೂ, ಆರೋಪಿಗಳಿಗೂ ರಾಜಕೀಯ ನಂಟು ಏನೂ ಇಲ್ಲ. ಆರೋಪಿಗಳ ಮೇಲೆ ಕೇಸು ಇರುವ ಕಾರಣಕ್ಕೆ 60ಕ್ಕೂ ಹೆಚ್ಚು ಜನರನ್ನು ಗಡೀಪಾರು ಮಾಡಲಾಗಿದೆ.
ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಧರ್ಮಕ್ಕೂ, ರಾಜಕಾರಣಕ್ಕೂ ಸಂಬಂಧ ಇಲ್ಲ. ಕಾನೂನು ಬಾಹಿರ ಚಟುವಟಿಕೆಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದಾದರೆ ಅಪರಾಧಿಗಳಿಗೆ ಅವರ ಬೆಂಬಲ ಇದೆ ಎಂದಾಯಿತು ಎಂದರು.
ಇವೆಲ್ಲವೂ ಜನರ ದಾರಿ ತಪ್ಪಿಸಲೆಂದು ಬಿಜೆಪಿಗರು ಮಾಡುವ ಸುಳ್ಳಿನ ಆರೋಪಗಳು. ಪೊಲೀಸರಿಗೆ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ.
ನೈತಿಕ ಪೊಲೀಸ್‌ಗಿರಿ, ಡ್ರಗ್ಸ್ ಮಾಫಿಯಾ ಇರಬಹುದು, ಅಥವಾ ಇನ್ಯಾವುದೇ ವಿಚಾರದ ಬಗ್ಗೆಯೂ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ