ಮುಖ್ಯಮಂತ್ರಿ ತವರಿನಲ್ಲಿ ಜೆಡಿಎಸ್ ಗೆಲುವು

ಮುಖ್ಯಮಂತ್ರಿ ತವರಿನಲ್ಲಿ ಜೆಡಿಎಸ್ ಗೆಲುವು

ಮಂಡ್ಯ: ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಬೂಕನಕೆರೆ ಗ್ರಾಮ ಪಂಚಾಯಿತಿ ಫಲಿತಾಂಶ ಬಹಳ ಆಸಕ್ತಿದಾಯಕವಾಗಿತ್ತು. ಇಬ್ಬರು ಅಭ್ಯರ್ಥಿಗಳು ಸಮಾನ ಮತ ಪಡೆದಿದ್ದರಿಂದ ಡ್ರಾ ಮೂಲಕ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದರು.

     ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ ಮತ್ತು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಮಂಜುಳಾ ತಲಾ 183 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು. ಇದರಿಂದಾಗಿ ಚುನಾವಣಾಧಿಕಾರಿಗಳು ಲಾಟರಿಯ ಮೊರೆ ಹೋಗಬೇಕಾಯಿತು. ಲಾಟರಿಯಲ್ಲಿ ಅದೃಷ್ಟದ ಲಾಭ ಪಡೆದ ಜೆಡಿಎಸ್‌ ಬೆಭಲಿತ ಅಭ್ಯರ್ಥಿ ಮಂಜುಳಾ ಗೆಲುವು ಸಾಧಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ