ಮಕ್ಕಳ ಪ್ರಕರಣವನ್ನು ಮುಚ್ಚಿಹಾಕ್ಬೇಡಿ: ಎಸೈ ಪ್ರಸನ್ನ ಕುಮಾರ್

ಮಕ್ಕಳ ಪ್ರಕರಣವನ್ನು ಮುಚ್ಚಿಹಾಕ್ಬೇಡಿ: ಎಸೈ ಪ್ರಸನ್ನ ಕುಮಾರ್

ಬಂಟ್ವಾಳ: ಮಕ್ಕಳ ಪ್ರಕರಣಗಳನ್ನು ತಕ್ಷಣ ಸಂಬಂಧಿತ ಕಾನೂನು ಪ್ರಾಧಿಕಾರಗಳ ಗಮನಕ್ಕೆ ತನ್ನಿ.   ಅವುಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡ್ಬೇಡಿ ಎಂದು ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಕುಮಾರ್ ಹೇಳಿದರು.

      ಕರ್ನಾಟಕ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಘಟಕ, ಕಾವಳಪಡೂರು-ವಗ್ಗ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಇವುಗಳ ಜಂಟಿ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಸೈಬರ್ ಕ್ರೈಮ್ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಮಾಹಿತಿ ನೀಡಿದರು.

     ಆನ್ ಲೈನ್ ಮೂಲಕ ಕಂಪನಿ ಉತ್ಪನ್ನಗಳನ್ನು ಖರೀದಿಸುವಾಗ  ಜಾಗೃತಿ ವಹಿಸಬೇಕು. ಇಲ್ಲದಿದ್ದರೆ ಗ್ರಾಹಕರು ಮೋಸ ಹೋಗುವ ಸಂದರ್ಭ ಎದುರಾಗಬಹುದು ಎಂದವರು, ಸೈಬರ್ ಕ್ರೈಮ್ ತಡೆಗಟ್ಟಲು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಪ್ರಕರಣ ದಾಖಲಿಸುವ ವಿಧಾನಗಳನ್ನು ವಿವರಿಸಿದರು.

     ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಉದ್ಘಾಟಿಸಿ, ಮಾತನಾಡಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಂಕಲ್ಪಕ್ಕೆ ಶಿಕ್ಷಕ- ಪೋಷಕ ವರ್ಗದ ಜತೆಗೆ ನಾವೆಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು. ತಾಲೂಕು ಘಟಕ ಅಧ್ಯಕ್ಷ ಫಾರೂಕ್ ಗೂಡಿನಬಳಿ ಸಭಾದ್ಯಕ್ಷತೆ ವಹಿಸಿ  ಮಾತನಾಡಿದರು.

      ಮುಖ್ಯ ಅತಿಥಿಗಳಾಗಿ ಪ್ರೌಢ ಶಾಲಾ ವಿಭಾಗದ ಕಾರ್ಯಾಧ್ಯಕ್ಷ ಪಿ.ಜಿನರಾಜ ಆರಿಗ, ಸಾಮಾಜಿಕ ಮುಖಂಡ ಇಬ್ರಾಹಿಂ ಕೈಲಾರ್, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಉಪಸ್ಥಿತಿದ್ದರು. ಪೌಢಶಾಲಾ ಮುಖ್ಯ ಶಿಕ್ಷಕ ಶೇಖ್ ಆದಂ ಸಾಹೇಬ್ ಸ್ವಾಗತಿಸಿ, ಲೈಲಾ ಪರ್ವೀಸ್ ವಂದಿಸಿದರು. ಶಿಕ್ಷಕ ಫೆಡ್ರಿಕ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಪೋಷಕರು ಸಂವಾದದಲ್ಲಿ ಪಾಲ್ಗೊಂಡರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ