ಮಕ್ಕಳಿಗೆ ತಿಂಡಿ ಹಂಚಿದ ಅಪರಿಚಿತ ತಂಡ: ದೇರಳಕಟ್ಟೆಯಲ್ಲಿ ಆತಂಕ

ಮಕ್ಕಳಿಗೆ ತಿಂಡಿ ಹಂಚಿದ ಅಪರಿಚಿತ ತಂಡ: ದೇರಳಕಟ್ಟೆಯಲ್ಲಿ ಆತಂಕ

ಮಂಗಳೂರು, ಜನವರಿ 8: ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಯುವಕರ ಗುಂಪೊಂದನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಪೋಲೀಸರಿಗೆ ಒಪ್ಪಿಸಿದ ಸ್ವಾರಸ್ಯಕರ ಘಟನೆ ಮಂಗಳೂರು ತಾಲೂಕಿನ ದೇರಳಕಟ್ಟೆ ಬಳಿ ನಡೆದಿದೆ. ಜನರು ಅನುಮಾನಾಸ್ಪದವಾಗಿ ಕಂಡು ಬಂದ ತಂಡದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿ ಬಂದ ಪೋಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿ ಸತ್ಯ ವಿಷಯಗಳನ್ನು ಹೊರ ಹಾಕಿದ್ದಾರೆ.

          ಎರಡು ಕಾರುಗಳಲ್ಲಿ ಬಂದ ಯುವಕರ ತಂಡ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯ ಪ್ರಚಾರ ನಡೆಸಲು ದೇರಳಕಟ್ಟೆ ಬಳಿ ತೆರಳಿತ್ತು. ಅಲ್ಲಿಯೇ ಸಮೀಪದಲ್ಲಿ ಇದ್ದ ಟೀ ಅಂಗಡಿ ಮುಂದೆ ಮಕ್ಕಳಿಗೆ ಆ ಯುವಕರು ತಿಂಡಿಗಳನ್ನು ಹಂಚಿದರು. ಇದನ್ನು ಕಂಡ ಸ್ಥಳಿಯ ಜನರು ಮಕ್ಕಳ ಕಳ್ಳರೆಂದು ಭಾವಿಸಿ ಪೊಲೀಸರಿಗೆ ದೂರು ನೀಡಿದ್ದರು. ಪೋಲೀಸರು ಬಂದು ತಂಡವನ್ನು ಪೋಲೀಸ್‌ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಸತ್ಯ ಬಯಲಾಗಿತ್ತು. ಬಂದವರು ಮಕ್ಕಳ ಕಳ್ಳರಾಗಿರದೆ, ಯುವ ಕಾಂಗ್ರೆಸ್ಸಿನ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದರು. ವಿಚಾರಣೆಯ ನಂತರ ತಂಡವನ್ನು ಕಳುಹಿಸಿ ಕೊಡಲಾಗಿದೆ.  ಕಾರಿನ ಹಿಂಬದಿಯಲ್ಲಿ ಮೊಹಮ್ಮದ್ ನಲಪ್ಪಾಡ್ ಭಾವಚಿತ್ರವಿರುವ ಪೋಸ್ಟರುಗಳು ಕಂಡು ಬಂದಿವೆ

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ