ಮಂಜೇಶ್ವರ: ಯುಡಿಎಫ್ ಅಭ್ಯರ್ಥಿಯಾಗಿ ಅಶ್ರಫ್ ಎಕೆಎಂ

ಮಂಜೇಶ್ವರ: ಯುಡಿಎಫ್ ಅಭ್ಯರ್ಥಿಯಾಗಿ ಅಶ್ರಫ್ ಎಕೆಎಂ
republicday728
republicday468
republicday234

ಮಂಜೇಶ್ವರ, ಮಾ,12: ಮಂಜೇಶ್ವರ ವಿಧಾನ ಸಭಾ ಯುಡಿಎಫ್ ಅಭ್ಯರ್ಥಿಯಾಗಿ ಮಂಜೇಶ್ವರ ತಾಲೂಕು ಪಂಚಾಯತ್ ಮಾಜಿ  ಅಧ್ಯಕ್ಷ ಹಾಗೂ ಯೂತ್ ಲೀಗ್ ಕೇರಳ ರಾಜ್ಯ ಕಾರ್ಯದರ್ಶಿ, ಸ್ಥಳೀಯ ನಿವಾಸಿಯಾಗಿರುವ ಎ.ಕೆ.ಎಂ ಅಶ್ರಫ್ ರವನ್ನು ಘೋಷಿಸಲಾಗಿದೆ.
 ಪಾಣಕ್ಕಾಡ್ ಸಯ್ಯದ್ ಹೈದರ್ ಅಲಿ  ಶಿಹಾಬ್ ತಂಙಳ್ ಮುಸ್ಲಿಂ ಲೀಗಿನ ಎಲ್ಲಾ ೨27 ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದ್ದು ಮಂಜೇಶ್ವರ ಕ್ಷೇತ್ರದಲ್ಲಿ ಎಕೆಎಂ ಅಶ್ರಫ್ ಅಭ್ಯರ್ಥಿಯಾಗಿದ್ದಾರೆ. ಅಂತಾರಾಜ್ಯ ಗಡಿಪ್ರದೇಶವಾದ ಮಂಜೇಶ್ವರಕ್ಕೆ ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಾಗಿದೆ ಎಂದು ಪ್ರಶಂಸೆ ವ್ಯಕ್ತವಾಗಿದೆ.
      ಹಲವಾರು ಹೋರಾಟಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದು, ಮಂಜೇಶ್ವರ ತಾಲೂಕು ಪಂಚಾಯತ್ ನ ಅದ್ಯಕ್ಷರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದವರು. ಸ್ಥಳಿಯರಾಗಿದ್ದುಕೊಂಡು ಕ್ಷೇತ್ರದ ಉದ್ದಗಲಕ್ಕಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಲ್ಲವರು. ಎಲ್ಲ ಜನರೊಂದಿಗೆ ಸುಲಭವಾಗಿ ಬೆರೆಯಬಲ್ಲ, ಕನ್ನಡ, ತುಳು, ಮಲೆಯಾಳಂ ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲ ವಾಗ್ಮಿಯೂ ಹೌದು. ಮುಸ್ಲಿಂ ಯೂತ್ ಲೀಗಿನ ರಾಜ್ಯ ಕಾರ್ಯದರ್ಶಿಯಾಗಿದ್ದುಕೊಂಡು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಜಾತಿ-ಪಂಥಗಳ ಭೇಧವಿಲ್ಲದೆ ಎಲ್ಲ ವರ್ಗದ ಜನರು ಇಷ್ಟಪಡುವ ಎಕೆಎಂ ಜಯಭೇರಿ ಬಾರಿಸುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಮಲಪ್ಪುರಂ ಉಪ ಚುನಾವಣೆ: ಅಚ್ಚರಿಯ ಬೆಳವಣಿಗೆಯಲ್ಲಿ ಪಕ್ಷದ ವರಿಷ್ಟ ಪಿ.ಕೆ. ಕುಂಞಆಲಿಕುಟ್ಟಿ ಸಾಹೇಬ್ ರಾಜೀನಾಮೆ ನೀಡಿ ತೆರವಾದ ಮಲಪ್ಪುರಂ ಲೋಕಸಭಾ ಸ್ಥಾನಕ್ಕೆ ಮಾಜಿ ಸಂಸದ ಖ್ಯಾತ ವಾಗ್ಮಿ ಅಬ್ದುಸ್ಸಮದ್ ಸಮದಾನಿಯವರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ ರಾಜಕಾರಣದಿಂದ ರಾಜ್ಯ ರಾಜಕೀಯಕ್ಕೆ ಮರಳುವ ಕುಂಞಆಲಿ ಕುಟ್ಟಿ ನಿರ್ಧಾರದಿಂದ ಮಲಪ್ಪುರಂ ಲೋಕಸಭಾ ಸ್ಥಾನ ತೆರವಾಗಿತ್ತು.
ಈ ಸಂದರ್ಭದಲ್ಲಿ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಆಲಿಕುಟ್ಟಿ, ಸಂಘಟನಾ ಕಾರ್ಯದರ್ಶಿ ಇ.ಟಿ. ಮುಹಮ್ಮದ್ ಬಷೀರ್, ಕೆ.ಪಿ.ಅಬ್ದುಲ್ ಮಜೀದ್, ಪಿ.ವಿ. ವಹ್ಹಾಬ್ ಹಾಗೂ ಡಾ.ಎಂ.ಕೆ. ಮುನೀರ್ ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ