ಭಾರತ ಮಾರಾಟಕ್ಕಿದೆ: 6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಾಟದ ಬಗ್ಗೆ ಕಾರ್ಟೂನಿಷ್ಟರ ವ್ಯಂಗ್ಯ

ಭಾರತ ಮಾರಾಟಕ್ಕಿದೆ: 6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಾಟದ ಬಗ್ಗೆ ಕಾರ್ಟೂನಿಷ್ಟರ ವ್ಯಂಗ್ಯ

ಸೋಮವಾರ (ಆಗಸ್ಟ್ 23) ವಿತ್ತೀಯ ಕೊರತೆ ನೀಗಿಸಲು ದೇಶದ 6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧರಿಸಲಾಗಿದೆ ಕೇಂದ್ರದ ಹಣಕಾಸು ಇಲಾಖೆ ನಿರ್ಧರಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸುತ್ತಲೇ ತೀವೃ ಟೀಕೆಗೆ ಗುರಿಯಾಗಿದ್ದರು.

      ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಯೋಜನೆಯಡಿಯಲ್ಲಿ 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧರಿಸಲಾಗಿದೆ. ಇದರ ಮೂಲಕ ಸರ್ಕಾರಿ- ಖಾಸಗಿ ವಲಯಗಳು ಭಾಗಿ ಆಗಬಹುದು ಎನ್ನಲಾಗಿದೆ. ಈಗಾಗಲೇ ಹತ್ತಾರು ಸಾರ್ವಜನಿಕ ಸಂಸ್ಥೆಗಳನ್ನು ಮೋದಿ ಸರ್ಕಾರ ಮಾರಾಟ ಮಾಡಿದೆ. ಈಗ ಮತ್ತಷ್ಟು ಮಾರಲು ಹೊರಟಿರುವುದುಕ್ಕೆ ತೀವ್ರ ಟೀಕೆ ಕೇಳಿಬಂದಿದೆ.

        ಭಾರತ ಮಾರಾಟಕ್ಕಿದೆ ಎಂಬ ಟ್ರೋಲ್ ಸಾಮಾನ್ಯವಾಗುತ್ತಿದೆ. ಭಾರತದ ಆಸ್ತಿ ಮಾರಾಟದ ಬಗ್ಗೆ ಖ್ಯಾತ ಕಾರ್ಟೂನಿಸ್ಟ್‌ಗಳು ವಿವಿಧ ರೀತಿಯಲ್ಲಿ ಸರ್ಕಾರವನ್ನು ವ್ಯಂಗ್ಯವಾಗಿ ವಿಮರ್ಶಿಸಿದ್ದಾರೆ. ನೂರಾರು ಪದಗಳಳ್ಲಿ ಹೇಳಬೇಕಾದ್ದನ್ನು ಕಾರ್ಟೂನಿಸ್ಟ್‌ಗಳು ಒಂದು ಚಿತ್ರದಲ್ಲಿ ಸೂಕ್ಷ್ಮವಾಗಿ ವಿವರಿಸುತ್ತಾರೆ. ಕನ್ನಡದ ಖ್ಯಾತ ಕಾರ್ಟೂನಿಸ್ಟ್ ಪಿ.ಮಹಮ್ಮದ್‌ರವರು “ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಹೆಸರಿನಲ್ಲಿ ಭಾರತದ ಸಂಪತ್ತನ್ನು ಹೇಗೆ ಪ್ರಧಾನಿ ಮತ್ತು ಹಣಕಾಸು ಸಚಿವರು ಮಾರುತ್ತಿದ್ದಾರೆ” ಎಂಬದನ್ನು ಚಿತ್ರಿಸಿದ್ದಾರೆ.‌

      ಕನ್ನಡದ ಮತ್ತೊಬ್ಬ ಪ್ರತಿಭಾವಂತ ಕಾರ್ಟೂನಿಸ್ಟ್ ದಿನೇಶ್ ಕುಕ್ಕಜಡ್ಕರವರು ಪ್ರಸಿದ್ದ ವಾಷಿಂಗ್ ಪೌಡರ್ ನಿರ್ಮಾ ಜಾಹೀರಾತಿನೊಂದಿಗೆ ಮೋದಿ ಮತ್ತು ನಿರ್ಮಲಾ ಸೀತಾರಾಮನ್‌ರವರನ್ನು ಸೇರಿಸಿ ವ್ಯಂಗ್ಯ ಚಿತ್ರ ರಚಿಸಿದ್ದಾರೆ. ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಇಬ್ಬರು ಹಾಳುಗೆಡುವುದರ ಚಿತ್ರಣ ಇದಾಗಿದೆ. ಅರವಿಂದ್ ಜಿ ಮೆನನ್ ಎಂಬುವವರು ನೆಹರುರವರು ಕಟ್ಟಿ ಬೆಳೆಸಿದ ಸಾರ್ವಜನಿಕ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಆದರೆ ಅವನ್ನು ಮೋದಿ-ನಿರ್ಮಲ ಜೋಡಿ ಕುಯ್ದು ಮಾರುತ್ತಿವೆ ಎಂದು ವ್ಯಂಗ್ಯ ಚಿತ್ರ ರಚಿಸಿದ್ದಾರೆ.

      ಕನ್ನಡದ ಖ್ಯಾತ ವ್ಯಂಗ್ಯಚಿತ್ರಕಾರರಾದ, ದೇಶದಾದ್ಯಂತ ಪ್ರಸಿದ್ದಿಯಾಗಿರುವ ಸತೀಶ್ ಆಚಾರ್ಯರವರು ತೀಕ್ಷ್ಣ ವ್ಯಂಗ್ಯ ಚಿತ್ರ ರಚಿಸಿದ್ದಾರೆ. ಮಿತ್ರರೆ 70 ವರ್ಷ ಅವರೇನೂ ಮಾಡಿಲ್ಲ ಎಂದು ಮೋದಿ ಟೀಕಿಸುತ್ತಾ ಎಲ್ಲವನ್ನು ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಹೆಸರಿನಲ್ಲಿ ಮಾರುತ್ತಿರುವುದನ್ನು ಚಿತ್ರಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ