ಭಾರತದಲ್ಲಿ ಕೋವಿಡ್ ಮೂರನೇ ಅಲೆ: ಫೆಬ್ರವರಿಯಲ್ಲಿ ಉತ್ತುಂಗಕ್ಕೆ

ನವದೆಹಲಿ: ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಕೋವಿಡ್ 3ನೇ ಅಲೆ ಆರಂಭವಾಗಿದ್ದು, ಮುಂದಿನ ವರ್ಷದ ಫೆಬ್ರವರಿಯಲ್ಲಿ ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯೊಂದು ಹೇಳಿದೆ.
ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಸಂಶೋಧಕರ ತಂಡವು ಈ ಅಧ್ಯಯನ ನಡೆಸಿದ್ದು, ಇನ್ನಷ್ಟೆ ಉನ್ನತ ತಜ್ಞರಿಂದ ಪರಾಮರ್ಶೆಗೆ ಒಳಪಡಬೇಕಿದೆ.
ಸಾಂಕ್ರಾಮಿಕದ ಮೊದಲ ಎರಡು ಅಲೆಗಳ ಡಾಟಾವನ್ನು ಬಳಸಿಕೊಂಡು ಮೂರನೇ ಅಲೆಯ ಮುನ್ಸೂಚನೆಯನ್ನು ನೀಡಲಾಗಿದೆ. ತಂಡವು ಈಗಾಗಲೇ ಮೂರನೇ ಅಲೆಯನ್ನು ಎದುರಿಸುತ್ತಿರುವ ವಿವಿಧ ದೇಶಗಳ ಡಾಟಾವನ್ನು ಬಳಸಿಕೊಂಡಿದೆ. ಆ ದೇಶಗಳ ದೈನಂದಿನ ಪ್ರಕರಣಗಳ ಏರಿಕೆಯ ಡಾಟಾವನ್ನು ಬಳಸಿಕೊಂಡು ಭಾರತದಲ್ಲಿ ಮೂರನೇ ತರಂಗದ ಪರಿಣಾಮ ಮತ್ತು ಟೈಮ್ಲೈನ್ ಅನ್ನು ಊಹಿಸಲಾಗಿದೆ.
ಭಾರತದಲ್ಲಿ ಕೋವಿಡ್ -19 ಮೂರನೇ ಅಲೆಯು 2021ರ ಡಿಸೆಂಬರ್ ಮಧ್ಯದಲ್ಲಿ ಪ್ರಾರಂಭವಾಗಿದ್ದು, ಫೆಬ್ರವರಿ 2022ರ ಆರಂಭದಲ್ಲಿ ಉತ್ತುಂಗಕ್ಕೇರಲಿದೆ ಎಂದು ವರದಿಯು ಮುನ್ಸೂಚನೆ ನೀಡಿದೆ ಎಂದು ಗಣಿತ ಮತ್ತು ಅಂಕಿಅಂಶ ವಿಭಾಗದ ಸಹ ಪ್ರಾಧ್ಯಾಪಕ ಸುಭ್ರಾ ಶಂಕರ್ ಧಾರ್ ದಿನಪತ್ರಿಕೆಯಲ್ಲಿ ಬರೆದಿದ್ದಾರೆ.
ಹೈದರಾಬಾದ್ ಮತ್ತು ಕಾನ್ಪುರದ ಐಐಟಿಯ ತಂಡಗಳು ನಡೆಸಿದ ಅಧ್ಯಯನದಲ್ಲಿ ‘ಸೂತ್ರ’ ಮಾದರಿಯನ್ನು ಬಳಸಲಾಗಿದೆ.
ಐಐಟಿ ಹೈದರಾಬಾದ್ನ ಪ್ರೊಫೆಸರ್ ಎಂ.ವಿದ್ಯಾಸಾಗರ್ ಮತ್ತು ಐಐಟಿ ಕಾನ್ಪುರದ ಮಣಿಂದಾ ಅಗರವಾಲ್ ಪ್ರಕಾರ, ಒಮಿಕ್ರಾನ್ ರೂಪಾಂತರವು ಡೆಲ್ಟಾಗಿಂತ ಪ್ರಬಲ ರೂಪಾಂತರವಾಗಿ ಹರಡಲು ಪ್ರಾರಂಭಿಸಿರುವುದರಿಂದ ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ:
https://bit.ly/3JcCaMj ಓಮಿಕ್ರಾನ್ ಬಗ್ಗೆ ಶುಭ ಸುದ್ಧಿ: ಡೆಲ್ಟಾದಷ್ಟು ತೀವ್ರವಲ್ಲ
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ