ಭೂಮಿಗೆ ನೆರಳು, ಭವಿಷ್ಯಕ್ಕೆ ಮೀಸಲು : SKSBV ಪರಿಸರ ವಾರಾಚರಣೆಗೆ ಚಾಲನೆ

ಭೂಮಿಗೆ ನೆರಳು, ಭವಿಷ್ಯಕ್ಕೆ ಮೀಸಲು :  SKSBV ಪರಿಸರ ವಾರಾಚರಣೆಗೆ ಚಾಲನೆ

ಕೋಝಿಕ್ಕೋಡ್: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ  ಸಮಸ್ತ ಕೇರಳ ಸುನ್ನಿ ಬಾಲವೇದಿ ಆಯೋಜಿಸುತ್ತಿರುವ ಪರಿಸರ ವಾರಾಚರಣೆಗೆ ಚಾಲನೆ ನೀಡಲಾಯಿತು.

 ಪರಿಸರ ವಾರಾಚರಣೆಯ ರಾಜ್ಯ ಮಟ್ಟದ ಉದ್ಘಾಟನೆಯನ್ನು ಸಮಸ್ತ ಅಧ್ಯಕ್ಷರಾದ ಸೈಯದ್ ಜಿಫ್ರಿ ಮುತ್ತು ಕೋಯ ತಂಙಲ್ ಗಿಡ ನೆಡುವುದರ ಮೂಲಕ ನೆರವೇರಿಸಿದರು.
     "ಭೂಮಿಗೆ ನೆರಳು, ಭವಿಷ್ಯಕ್ಕಾಗಿ ಮೀಸಲು" ಎಂಬ ಪ್ರಮೇಯದೊಂದಿಗೆ ಆಯೋಜಿಸಿರುವ ಪರಿಸರ ವಾರಚರಣೆಯು ಜೂನ್ 5ರಿಂದ ಜೂನ್ 12ರವರೆಗೆ ನಡೆಯಲಿದೆ. 

      ವಾರಾಚಾರಣೆಯ ಭಾಗವಾಗಿ, ಮಾನ್ಸೂನ್ ಪೂರ್ವ ಶುಚಿತ್ವ, ನೈರ್ಮಲ್ಯ ನಮ್ಮ ಕರ್ತವ್ಯ, ನೆರಳು ಒದಗಿಸುವುದು, ನಾನು ಮತ್ತು ನನ್ನ ಮರ, ಅನುಭವ ಟಿಪ್ಪಣಿ ಸ್ಪರ್ಧೆಯಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುನ್ನಿ ಬಾಲವೇದಿ ರಾಜ್ಯ ಉಪಾಧ್ಯಕ್ಷ ಸೈಯದ್ ಸ್ವದಖತುಲ್ಲ ತಂಙಲ್ ಜಮಲುಲ್ಲೈಲಿ ವಹಿಸಿದ್ದರು.

      ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಬಿಯುದ್ದೀನ್ ವೆನ್ನಿಯೂರ್ ಮುಖ್ಯ ಭಾಷಣ ಮಾಡಿದರು.  ರಾಜ್ಯ ಕೋಶಾಧಿಕಾರಿ ಅಸ್ಲಹ್ ಮುತುವಲ್ಲೂರ್ ಯೋಜನೆಯ ಬಗ್ಗೆ ವಿವರಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ