ಬ್ರೆಜಿಲ್‍ - ಎಲೋನ್ ಮಸ್ಕ್ ಒಡೆತನದ ಎಕ್ಸ್‌ ಅಮಾನತು

ಬ್ರೆಜಿಲ್‍ - ಎಲೋನ್ ಮಸ್ಕ್ ಒಡೆತನದ ಎಕ್ಸ್‌ ಅಮಾನತು

ಸಾವೊ ಪಾಲೊ:ಎಲೋನ್ ಮಸ್ಕ್ ಒಡೆತನದ ಜನಪ್ರಿಯ ಸಾಮಾಜಿಕ ಜಾಲತಾಣ ಎಕ್ಸ್‌ನ್ನು ಬ್ರೆಜಿಲ್‍ನ ಸುಪ್ರೀಂ ಕೋರ್ಟ್ ಅಮಾನತುಗೊಳಿಸುವಂತೆ ಆದೇಶಿಸಿದೆ.

      ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ತಪ್ಪು ಮಾಹಿತಿಯ ವಿಚಾರದ ಪ್ರಕರಣವನ್ನು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಲೆಕ್ಸಾಂಡ್ರೆ ಡಿ ಮೊರೇಸ್ ಶುಕ್ರವಾರ ಅಮಾನತುಗೊಳಿಸುವಂತೆ ಆದೇಶಿಸಿದ್ದರು. ಅದರಂತೆ ಬ್ರೆಜಿಲ್‍ನಲ್ಲಿ ಇಂದಿನಿಂದ ಸಾಮಾಜಿಕ ಜಾಲತಾಣ ಎಕ್ಸ್‌ನ್ನು ಸ್ಥಗಿತಗೊಳಿಸಲಾಗಿದೆ.

      ಈ ಆದೇಶಕ್ಕೆ ಮಸ್ಕ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ನ್ಯಾ.ಮೊರೆಸ್ ಅವರನ್ನು ದುಷ್ಟ ಸರ್ವಾಧಿಕಾರಿ ಎಂಬುವುದಾಗಿ ಕರೆದಿದ್ದಾರೆ. ಅಲ್ಲದೇ ಬ್ರೆಜಿಲ್‍ನಲ್ಲಿ ಪ್ರಜಾಪ್ರಭುತ್ವವನ್ನು ನಾಶಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ