ಬ್ಯಾರಿಕೇಡ್‌ ಗಳನ್ನು ಮುರಿದು ಮುನ್ನುಗ್ಗಿದ ರೈತರು: ಹಿಂಸಾರೂಪದತ್ತ ದೆಹಲಿ ಟ್ರಾಕ್ಟರ್‌ ರ್‍ಯಾಲಿ

ಬ್ಯಾರಿಕೇಡ್‌ ಗಳನ್ನು ಮುರಿದು ಮುನ್ನುಗ್ಗಿದ ರೈತರು: ಹಿಂಸಾರೂಪದತ್ತ ದೆಹಲಿ ಟ್ರಾಕ್ಟರ್‌  ರ್‍ಯಾಲಿ

ನವದಹಲಿ: ದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವದ ಕಾರ್ಯಕ್ರಮವನ್ನೂ ಲೆಕ್ಕಿಸದೆ, ಆವೇಶಭರಿತರಾದ ರೈತರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಟ್ರ್ಯಾಕ್ಟರ್ ರ್‍ಯಾಲಿ ಪ್ರತಿಭಟನಗಾಗಿ ಗಡಿಗಳಲ್ಲಿನ ಬ್ಯಾರಿಕೇಡ್‌ ಮುರಿದು ಒಳಗೆ ನುಗ್ಗುತ್ತಿದ್ದಾರೆ.

ದೆಹಲಿ-ಹರಿಯಾಣ ಟಿಕ್ರಿ ಗಡಿಯಲ್ಲಿ ಪೊಲೀಸ್ ನಿರ್ಮಿಸಿರುವ ಬ್ಯಾರಿಕೇಡ್‌ಗಳನ್ನು ಮುರಿದು ಮುಂದುವರಿಯುತ್ತಿರುವ ರೈತರು ಸಿಂಘು ಗಡಿಯಲ್ಲೂ ಇದೇ ರೀತಿ ಮಾಡುತ್ತಿದ್ದಾರೆ. ಈ ಗಡಿಗಳಲ್ಲಿ ಪ್ರತಿಭಟನೆ ಮಾಡಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಒಪ್ಪಂದ ಮುರಿದು ಬ್ಯಾರಿಕೇಡ್‌ ಮುರಿಯುತ್ತಿರುವುದು ವರದಿಯಾಗುತ್ತಿದೆ.

ರೈತರು ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿ ಪ್ರವೇಶಿಸಿದ್ದಾರೆ. ಪಂಜಾಬ್‌ನ ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್‌ ತಂದಿರುವ ರೈತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಪ್ರತಿಭಟನೆ ನಡೆಸಲು ಅವರಿಗೆ ಅನುಮತಿ ನೀಡಲಾಗಿದ್ದು, ಪೊಲೀಸರು 37 ಷರತ್ತುಗಳನ್ನು ವಿಧಿಸಿದ್ದರು. ಸಿಂಗು, ಟಿಕ್ರಿ, ಗಾಜಿಪುರ ಮತ್ತು ಚಿಲ್ಲಾ ನಾಲ್ಕು ಗಡಿಗಳಲ್ಲಿ ಪ್ರತಿಭಟನೆಗೆ ತೊಡಗುವುದಿದ್ದರೆ ಪೋಲೀಸರ ಷರತ್ತುಗಳನ್ನು ಪಾಲನೆ ಮಾಡಬೇಕು ಎಂದು ಹೇಳಲಾಗಿತ್ತು.

ಆದರೆ ಎಲ್ಲವನ್ನೂ ರೈತರು ಕಡೆಗಣಿಸಿದ್ದಾರೆ. ಇದರಿಂದಾಗಿ ರೈತರು ಮತ್ತು ಪೊಲಿಸರ ನಡುವೆ ತಿಕ್ಕಾಟ ಏರ್ಪಟ್ಟಿದೆ. ಸುಮಾರು 6,000 ಭದ್ರತಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸಮಸ್ಯೆ ಉಂಟು ಮಾಡುವವರನ್ನು ಗುರುತಿಸಲು ಮುಖ ಗುರುತಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಪ್ರತಿಭಟನೆಯು ಹಿಂಸಾರೂಪ ಪಡೆಯುತ್ತಿದ್ದಂತೆ ದೆಹಲಿ ಮೆಟ್ರೋ ಕೆಲವು ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ ಎಂದು ಘೋಷಿಸಿದೆ.

ವೀಡಿಯೋ ನೋಡಲು ಕ್ಲಿಕ್‌ ಮಾಡಿ:

https://youtu.be/fMXRGaSMo2A

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ