ಬೊಮ್ಮಾಯಿ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿ - ಸೈಯ್ಯದ್ ಜಮಾಲ್

ಬೊಮ್ಮಾಯಿ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿ - ಸೈಯ್ಯದ್ ಜಮಾಲ್

ಶಿವಮೊಗ್ಗ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಂತ್ರಿ ಮಂಡಲದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಆದ್ಯತೆ ನೀಡಿ ಕನಿಷ್ಠ ನಾಲ್ಕು ಸಚಿವ ಸ್ಥಾನವನ್ನಾದರೂ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಸೈಯ್ಯದ್ ಜಮೀಲ್‌ರವರು ಆಗ್ರಹಿಸಿದ್ದಾರೆ.

      ಅವರು ಶಿವಮೊಗ್ಗದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಅಲ್ಪಸಂಖ್ಯಾತ ಸಮುದಾಯವು ಎರಡನೇ ಅತಿ ಹೆಚ್ಚು ಜನಸಂಖ್ಯೆವುಳ್ಳ ಸಮುದಾಯವಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷವು ಕಳೆದ ಎರಡು ವರ್ಷಗಳ ಮಂತ್ರಿಮಂಡಲದಲ್ಲಿ ಅಲ್ಪಸಂಖ್ಯಾತರನ್ನು ಪರಿಗಣಿಸಿಲ್ಲ. ಯಡಿಯೂರಪ್ಪನವರ ಸಂಪುಟದಲ್ಲಿ ವಕ್ಫ್/ಹಜ್ ನಂತಹ ಖಾತೆಗಳನ್ನು ಏನೂ ಮಾಹಿತಿ ಇಲ್ಲದವರಿಗೆ ನೀಡಲಾಗಿತ್ತು. ಇದರಿಂದ ಅಲ್ಪಸಂಖ್ಯಾತ ಸಮುದಾಯವು ಸರ್ಕಾರದೊಂದಿಗೆ ತಮ್ಮ ಕಷ್ಟಗಳ ಬಗ್ಗೆ ಹಾಗೂ ಪ್ರಗತಿಯ ಬಗ್ಗೆ ಸಂಹನ ನಡೆಸಲು ಬಹಳ ತೊಂದರೆಯಾಗಿತ್ತು. 
      ಜನಸಂಖ್ಯೆ ಹಾಗೂ ಸಮುದಾಯದ ಆಧಾರದಲ್ಲಿ ಪರಿಗಣಿಸಿದರೆ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಒಂದು ಉಪಮುಖ್ಯಮಂತ್ರಿ ಒಳಗೊಂಡಂತೆ ಕನಿಷ್ಠ ನಾಲ್ಕು ಜನ ಅಲ್ಪಸಂಖ್ಯಾತರಿಗೆ ಮಂತ್ರಿಗಿರಿ ನೀಡಬೇಕು. ನೂತನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ತಮ್ಮ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಬೇಕು ಎಂದು ಸೈಯದ್ ಜಮೀಲ್ ಆಗ್ರಹಿಸಿದರು.

      ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸೈಮನ್ ರಾಜ್, ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್, ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಸಲೀಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸಿರ್ ಅಹ್ಮದ್, ಸಯ್ಯದ್ ಉಮರ್, ಅಸಾದುಲ್ಲಾ, ಖಾಸಿಂ, ರಾಮಣ್ಣ, ಕಿರಣ್ ಫರ್ನಾಂಡಿಸ್, ಮೋಹಿದ್ದಿನ್, ಅಮೀರ್ ಅಹಮದ್, ಸುಭಾನ್ ಹಾಗೂ ಇನ್ನಿತರರು ಹಾಜರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ