ಬಂಟ್ವಾಳ: ಮಾರಕಾಸ್ತ್ರಗಳಿಂದ ಕಡಿದು ಯುವಕನ ಕೊಲೆ

ಬಂಟ್ವಾಳ: ಮಾರಕಾಸ್ತ್ರಗಳಿಂದ ಕಡಿದು ಯುವಕನ ಕೊಲೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕಕ್ಯೆಪದವಿನ ಕೊಡ್ಯಮಲೆ ಗುಡ್ಡೆ ಎಂಬಲ್ಲಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ನಡೆದಿದೆ.

      ಕೊಲೆಯಾದ ಯುವಕನನ್ನು ರಫೀಕ್ (26) ಎಂದು ಗುರುತಿಸಲಾಗಿದೆ. ರಫೀಕ್ ಅವರ ಸಂಬಂಧಿ ಕೊಲೆಗಾರ ಎಂದು ಸಂಶಯಿಸಲಾಗಿದ್ದು, ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣವಾಗಿರಬೇಕು ಎನ್ನಲಾಗಿದೆ. ರಫೀಕ್ ಮೃತದೇಹ ಬಂಟ್ವಾಳ ತಾಲೂಕಿನ ಕೋಡ್ಯಮಲೆ ಎಂಬಲ್ಲಿ ರಸ್ತೆ ಬದಿ ಪತ್ತೆಯಾಗಿದೆ.

      ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ