ಬಂಟ್ವಾಳ ಜೈನ್ ಮಿಲನ್ ರಜತ ಮಹೋತ್ಸವ ಆಚರಣೆ
ಬಂಟ್ವಾಳ: ಬಂಟ್ವಾಳ ಜೈನ್ ಮಿಲನ್ ನ ರಜತ ಮಹೋತ್ಸವದ ಆಚರಣೆ ಅಂಗವಾಗಿ ದಿನಾಂಕ 21.03.2021 ಭಾನುವಾರ, ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ರಜತ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಶುಭ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ ಎಲ್ಲಾ ಮಿಲನ್ ಶಾಖೆಗಳ ಬಾಂಧವರಿಗೆ, ಮಕ್ಕಳಿಗೆ ತಮ್ಮ ಪ್ರತಿಭೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿವಿಧ ವಿಭಾಗಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ರಜತ ಸಂಭ್ರಮ ಸಮಾರಂಭದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ವೀರ್ ಡಿ. ಸುರೇಂದ್ರ ಕುಮಾರ್, ಭಾರತೀಯ ಜೈನ್ ಮಿಲನ್ ವಲಯ 8ರ ಮಹಿಳಾ ಅಧ್ಯಕ್ಷರಾದ ವೀರಾಂಗನಾ ಅನಿತಾ ಸುರೇಂದ್ರ ಕುಮಾರ್, ವಲಯ 8ರ ಅಧ್ಯಕ್ಷರಾದ ವೀರ್ ಪುಷ್ಪರಾಜ್ ಜೈನ್, ವಲಯ 8ರ ಹಿರಿಯ ಉಪಾಧ್ಯಕ್ಷ ವೀರ್ ಡಾ.ಬಿ.ಯಶೋವರ್ಮ,
ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ವೀರ್.ಡಾ. ಎಂ.ಎನ್.ರಾಜೇಂದ್ರ ಕುಮಾರ್, ವಲಯ 8ರ ಉಪಾಧ್ಯಕ್ಷ ವೀರ್ ಸುದರ್ಶನ್ ಜೈನ್, ಕಾರ್ಯದರ್ಶಿ ಎಂ.ರಾಜೇಶ್ ಜೈನ್, ವೀರ್ ಸುಭಾಶ್ಚಂದ್ರ ಜೈನ್ ಇವರುಗಳ ಗಣ್ಯ ಉಪಸ್ಥಿತಿಯಲ್ಲಿ ಸುಂದರ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ವೀರ್ ಎಂ.ಕೆ.ವಿಜಯ ಕುಮಾರ್ ಕಾರ್ಕಳ, ವೀರ್ ಅಭಯಚಂದ್ರ ಜೈನ್ ಮೂಡುಬಿದಿರೆ, ವೀರ್ ಬಾಹುಬಲಿ ಪ್ರಸಾದ್ ಮೂಡುಬಿದಿರೆ, ಮಾಳ ಹರ್ಷೇಂದ್ರ ಜೈನ್ ಬೆಂಗಳೂರು, ಕ್ರೀಡಾ ಪಟು ವೀರ ಕುವರಿ ರಮ್ಯಶ್ರೀ ಜೈನ್, ಬಂಟ್ವಾಳ ಜೈನ್ ಮಿಲನ್ ನ ಪೂರ್ವಾಧ್ಯಕ್ಷರುಗಳಿಗೆ ಸನ್ಮಾನ, ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ