ಬಂಟ್ವಾಳ: ಕಲ್ಲಿನ ಕೋರೆ ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು

ಬಂಟ್ವಾಳ: ಕಲ್ಲಿನ ಕೋರೆ ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು

ಬಂಟ್ವಾಳ: ಬಂಟ್ವಾಳ ತಾಲೂಕಿನ ಲೋರೊಟೊಪದವು ಸಮೀಪದ ಬಾರೆಕಾಡು ಎಂಬಲ್ಲಿ ಕೆಂಪು ಕಲ್ಲಿನ ಕೋರೆಗೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ.

      ಮೂಲತಃ ಪರ್ಲಿಯಾ ನಿವಾಸಿ ಸಾದಿಕ್ ಅವರ ಪುತ್ರ, 6 ನೇ ತರಗತಿ ವಿದ್ಯಾರ್ಥಿ ಸವಾದ್ (12) ಶನಿವಾರ ಮೃತಪಟ್ಟ ಬಾಲಕ. ಸ್ಥಳೀಯ ಮಕ್ಕಳು ಜೊತೆಯಾಗಿ ಇಲ್ಲಿನ ಕಲ್ಲಿನ ಕೋರೆಯ ನೀರಿನಲ್ಲಿ ಆಟವಾಡಲು ತೆರಳಿದ್ದರು. ಈ ವೇಳ ಸವಾದ್ ಕಾಲು ಜಾರಿ ಕೋರೆ ಗುಂಡಿಯ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

      ಸವಾದ್ ಕಾಲು ಜಾರಿ ನೀರಿಗೆ ಬಿದ್ದ ಬಗ್ಗೆ ಇತರ ಮಕ್ಕಳು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸವಾದ್ ನನ್ನು ಕೊರೆಯ ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅದಾಗಲೇ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.

      ಮೃತದೇಹವು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ