ಬಂಟ್ವಾಳದ ಯುವಕ ಬೆಂಗಳೂರಿನಲ್ಲಿ ನಾಪತ್ತೆ

ಬಂಟ್ವಾಳದ ಯುವಕ ಬೆಂಗಳೂರಿನಲ್ಲಿ ನಾಪತ್ತೆ
republicday728
republicday468
republicday234

ಬಂಟ್ವಾಳ : ಬೆಂಗಳೂರು ನಗರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ಕಾಣೆ ಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
      ಮೂಲತಃ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕುರ್ಮಾನ್ ನಿವಾಸಿ ಉದಯರಾಜ್ (26) ಎಂಬಾತ ಕಾಣೆಯಾಗಿರುವ ಯುವಕ.
      ಉದಯರಾಜ್ ಅವರು ಬೆಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮನೆಗೆ ಬಂದು ಉಳಿದುಕೊಂಡಿದ್ದರು. ಲಾಕ್ ಡೌನ್ ಮುಕ್ತಾಯವಾದ ಬಳಿಕ ಅಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಬಟ್ಟೆ ಅಂಗಡಿಯ ಕೆಲಸಕ್ಕೆ ವಾಪಾಸ್ಸು ಹೋಗಿದ್ದರು. ಹೋದ ಬಳಿಕ ದೂರವಾಣಿ ಸಂಪರ್ಕದ ಮೂಲಕ ತಾಯಿ ಹಾಗೂ ಮನೆಯವರೊಂದಿಗೆ ಮಾತನಾಡಿಕೊಂಡಿದ್ದ ಉದಯರಾಜ್ ಫೆ.20 ರ ಬಳಿಕ ಸಂಪರ್ಕಕ್ಕೆ ಸಿಗದೆ ಪೋನ್ ಸ್ವಿಚ್ ಆಪ್ ಬರುತ್ತಿದೆ. ಕೆಲಸ ಮಾಡುತ್ತಿದ್ದವರಲ್ಲಿ ವಿಚಾರಿಸಿದಾಗ ಅಲ್ಲಿಯೂ ಇಲ್ಲ. ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುವ ಬಗ್ಗೆ ಈತನ ಅಣ್ಣ ಯುವರಾಜ್ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ