ಬಾಖವಿ ಸಂಗಮ ನಾಳೆ

republicday728
republicday468
republicday234

ಕೋಝಿಕ್ಕೋಡ್: ಬಾಖವಿ ಮಜ್ಲಿಸುಲ್ ಉಲಮಾ ನೇತೃತ್ವದಲ್ಲಿ ಉಲೇಮಾ ಸಂಗಮವು ನಾಳೆ (ಎಪ್ರಿಲ್‌ 8) ಬೆಳಿಗ್ಗೆ 10 ಗಂಟೆಗೆ ಫ್ರಾನ್ಸಿಸ್ ರಸ್ತೆಯ ಇಡಿಯಂಗರ ಶೇಖ್ ಮಸೀದಿ ಸಭಾಂಗಣದಲ್ಲಿ ನಡೆಯಲಿದೆ.

       ಸಭೆಯನ್ನು ಸಮಸ್ತ ಅಧ್ಯಕ್ಷರಾದ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್‌ ಉದ್ಘಾಟಿಸಲಿದ್ದಾರೆ.  ಶಾಜೀರ್ ಹಝ್ರತ್‌, ಮಾಹೀನ್ ಹಝ್ರತ್‌ ಮತ್ತು ಮುಹಮ್ಮದ್ ಬಾಖವಿ ಮುಂಡಂಬರಂ ವಿಷಯ ಮಂಡನೆ ನಡೆಸಲಿದ್ದಾರೆ.  ಸ್ಮಾರಕ ಪ್ರಾರ್ಥನಾ ಮಂಡಳಿಗೆ ಇಬ್ರಾಹಿಂ ಬಾಖವಿ ಎಡಪ್ಪಾಲ್ ಅನುಸ್ಮರಣಾ ಮಜ್ಲಿಸ್‌ ಗೆ ನೇತೃತ್ವ ನೀಡಲಿದ್ದಾರೆ.

       ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಚೇಲಕ್ಕಾಡ್‌ ಮುಹಮ್ಮದ್‌ ಮುಸ್ಲಿಯಾರ್ ಪಿಕೆಪಿ ಅಬ್ದುಲ್ ಸಲಾಮ್ ಮುಸ್ಲಿಯರ್,  ಮೂಸಾ ಕುಟ್ಟಿ ಹಝ್ರತ್, ಇ.ಕೆ.ಅಬೂಬಕರ್ ಮುಸ್ಲಿಯರ್ ಮತ್ತು ಮಹಮೂದ್ ಮುಸ್ಲಿಯರ್ ನೀಲೇಶ್ವರಂ ಮೊದಲಾದ ಬಾಖವಿಗಳನ್ನು ಸಮಾರಂಭದಲ್ಲಿ ಗೌರವಿಸಲಾಗುವುದು.

ಈ ಕಾರ್ಯಕ್ರಮಕ್ಕೆ ಮುಂಚಿತವಾಗಿ ಬಾಖವಿ ಜನರಲ್ ಬಾಡಿ ಮತ್ತು ನೂತನ ಸಮಿತಿ ರಚನೆ ನಡೆಯಲಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ