ಬೈಕ್-ಓಮ್ನಿ ಡಿಕ್ಕಿ: ಗಾಯಾಳು ಆಸ್ಪತ್ರೆಗೆ

ಬೈಕ್-ಓಮ್ನಿ ಡಿಕ್ಕಿ: ಗಾಯಾಳು ಆಸ್ಪತ್ರೆಗೆ

ಬಂಟ್ವಾಳ, ಜನವರಿ 1 : ಬಂಟ್ವಾಳ ತಾಲೂಕಿನ ಎನ್.ಸಿ. ರೋಡು ರಾಜೊಟ್ಟು ಚರ್ಚ್‌ ಬಳಿಯಲ್ಲಿ ಇಂದು ಬೆಳಿಗ್ಗೆ  ಹೋಂಡಾ ಆಕ್ಟಿವಾ ಮತ್ತು ಓಮ್ನಿ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ದ್ವಿಚಕ್ರ ವಾಹನ ಸವಾರರಾದ ಹನೀಫ್‌ ಹಾಗೂ ಶಾಹೀರ್ ಆಸ್ಪತ್ರೆ ದಾಖಲಾಗಿದ್ದಾರೆ. ಶಾಹಿರ್‌ ಗಂಭೀರ ಗಾಯಗೊಂಡಿದ್ದರೆ ಸವಾರರ ಜೊತೆಯಲ್ಲಿದ್ದ ಮಗುವು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದೆ.

          ಹೊಸ ವರ್ಷದ ಸಂಭ್ರಮದಲ್ಲಿದ್ದ  ಓಮ್ನಿ ಚಾಲಕ ಕುಡಿತದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದನೆಂದು ಹೇಳಲಾಗಿದೆ. ಪೂಂಜಾಲ್‌ ಕಟ್ಟೆ ಕಡೆಯಿಂದ ಬರುತ್ತಿದ್ದ ಓಮ್ನಿ ವಾಹನವು, ಕಾವಲ್‌ ಕಟ್ಟೆಯಿಂದ ಬೇಳ್ತಂಗಡಿ ಕಡೆಗೆ ಹೋಗುತ್ತಿದ್ದ ಹೋಂಡಾ ಆಕ್ಟಿವಾಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ